ಕಿಚ್ಚ ಸುದೀಪ್ ಅಕ್ಕನ ಮಗ ಸಿನಿಮಾಗೆ ಎಂಟ್ರಿ: ಸಂಚಿತ್ ಸಂಜೀವ್ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳು ಇಲ್ಲಿವೆ!

Jun 15, 2023, 12:36 PM IST

ಕಿಚ್ಚ ಸುದೀಪ್ ತಮ್ಮ ಅಕ್ಕ ನ ಮಗನನ್ನು ಚಿತ್ರರಂಗಕ್ಕೆ ಕರೆ ತರುತ್ತಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿತ್ತು.ಇದೀಗ ಅದು ನಿಜವಾಗಿದೆ.ಈ ಮೂಲಕ ಕಿಚ್ಚ ಸುದೀಪ್ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದೆ. ಕಿಚ್ಚ ಸುದೀಪ್ ಅಕ್ಕ ಸುಜಾತಾ ಪುತ್ರ ಸಂಚೀತ್ ಸಂಜೀವ್ ನಾಯಕನಾಗಿ ಅದೃಷ್ಟ ಪರೀಕ್ಷೆಗಿಳಿಯೋದಕ್ಕೆ ಸಜ್ಜಾಗಿದ್ದು, ಸುದೀಪ್ ಅವರೇ ಲಾಂಚ್ ಮಾಡುತ್ತಿದ್ದಾರೆ.ಸಂಚಿತ್ ಸಂಜೀವ್ ಸೋದರ ಮಾವ ಸುದೀಪ್ ಅವರನ್ನೇ ಹೋಲುತ್ತಾರೆ. ಮಾವನಂತೆ  ಹ್ಯಾಂಡ್ಸಮ್ ಆಗಿದ್ದಾರೆ. ಹೈಟು ಲುಕ್‌ನಲ್ಲಿ ಕಿಚ್ಚನಂತೆ ಕಾಣ್ತಾರೆ.ನಾಯಕನಾಗಿ ಪರಿಚಯ ಆಗುವ ಮುನ್ನ ಸಂಚಿತ್ ಸಂಜೀವ್, ಸುದೀಪ್ ಜೊತೆ ಕೆಲವೊಂದು ಸಿನಿಮಾಗಳಲ್ಲಿ ತೆರೆ ಹಿಂದೆ ಕೆಲಸ ಮಾಡಿದ್ದಾರೆ. 

ಇದನ್ನೂ ವೀಕ್ಷಿಸಿ: CET Results 2023: ಇಂಜಿನಿಯರಿಂಗ್‌ ವಿಭಾದಲ್ಲಿ ವಿಘ್ನೇಶ್‌ ಟಾಪರ್‌