Jan 22, 2023, 4:49 PM IST
ಬೆಂಗಳೂರಿನ ಜಯನಗರದಲ್ಲಿರೋ ಎಂ.ಇ.ಎಸ್ ಗ್ರೌಂಡ್'ನಲ್ಲಿ, ನಟಿ ನಿರ್ದೇಶಕಿ ರೂಪಾ ಅಯ್ಯರ್ ನಟಿಸಿ ನಿರ್ದೇಶಿಸಿರೋ ನೀರಾ ಆರ್ಯ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಯಿತು. ನೇತಾಜಿ ಸುಭಾಷ್ ಚಂದ್ರ ಬೋಸ್ ಕಟ್ಟಿದ ಮೊದಲ ಮಹಿಳಾ ಆರ್ಮಿಯ ಕಥೆ ಆಧಾರಿತ ಸಿನಿಮಾ ಇದು. ರೂಪ ಅಯ್ಯರ್ ನೀರಾ ಆರ್ಯ ಪಾತ್ರದಲ್ಲಿ ನಟಿಸಿದ್ದಾರೆ. ಕಾರ್ಯಕ್ರಮದಲ್ಲಿ ನಟಿ, ನಿರ್ದೇಶಕಿ ರೂಪಾ ಅಯ್ಯರ್, ನಟಿ ಮಾಲಾಶ್ರೀ , ಕರ್ನಾಟಕ ವಿಧಾನಸಭಾ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ನೇತಾಜಿಯವರ ಮರಿ ಮೊಮ್ಮಗಳು ರಾಜಶ್ರೀ ಚೌದರಿ ಭಾಗಿ ಆಗಿದ್ರು. ಇದೇ ಸಂದರ್ಭದಲ್ಲಿ
ವಿಶ್ವ ಹಿಂದು ಮಹಿಳಾ ಪ್ರತಿಷ್ಠಾನ ಆಯೋಜಿಸಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹುಟ್ಟುಹಬ್ಬ ಆಚರಣೆ ಕೂಡ ಮಾಡಲಾಯ್ತು.