ಹುಟ್ಟಿ ಬೆಳೆದ ಮನೆಯಲ್ಲೇ ಮಗಳ ಕಿವಿ ಚುಚ್ಚಿಸಿದ ಶೆಟ್ರು: ಈ ಶಾಸ್ತ್ರ ಹೇಗಿತ್ತು ನೋಡಿ!

Jun 27, 2023, 8:28 AM IST

ಸ್ಯಾಂಡಲ್‌ವುಡ್‌ನ ಡಿವೈನ್ ಸ್ಟಾರ್ ರಿಷಬ್‌ ಶೆಟ್ಟಿ ಫ್ಯಾಮಿಲಿ ಮ್ಯಾನ್‌. ಕುಟುಂಬದ ಜತೆ ಸಮಯ ಕಳೆಯೋಕೆ ತುಂಬ ಇಷ್ಟ ಪಡೋ ವ್ಯಕ್ತಿ. ಸಂಪ್ರದಾಯ, ಆಚಾರ ವಿಚಾರದಲ್ಲೂ ರಿಷಬ್‌ಗೆ ಅವರೇ ಸರಿ ಸಾಟಿ. ಅಷ್ಟೆ ಅಲ್ಲ ತನ್ನ ಮಕ್ಕಳ ಸಣ್ಣ ಕಾರ್ಯಕ್ರಮಗಳನ್ನೂ ಸಂಪ್ರದಾಯಬದ್ಧವಾಗಿ ಆಚರಿಸ್ತಾರೆ ಶೆಟ್ರು. ಇದೀಗ  ಹುಟ್ಟೂರು ಕೆರಾಡಿಯಲ್ಲಿ ತನ್ನ ಮುದ್ದಿನ ಮಗಳು ರಾಧ್ಯಾಳ ಕಿವಿ ಚುಚ್ಚುವ ಕಾರ್ಯಕ್ರಮ ಮಾಡಿದ್ದಾರೆ. ಡಿವೈನ್ ಸ್ಟಾರ್ ರಿಷಬ್ ತನ್ನ ಸೋಷಿಯಲ್ ಮೀಡಿಯಾದಲ್ಲಿ ಮಗಳ ಕಿವಿ ಚುಚ್ಚಿಸೋ ಶಾಸ್ತ್ರದ ವಿಡಿಯೋ ಹಂಚಿಕೊಂಡಿದ್ದು, ನಾ ಹುಟ್ಟಿ ಬೆಳೆದ ಮನೆ ನನ್ನ ಬಾಲ್ಯದ ನೆನಪುಗಳ ಖಜಾನೆ, ಅದಕ್ಕೀಗ ರಾಧ್ಯಾಳ ಕಿವಿ ಚುಚ್ಚಿಸಿದ ಸಂಭ್ರಮದ ನೆನಪೊಂದು ಹೊಸದಾಗಿ ಜೊತೆ ಸೇರಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ವೀಕ್ಷಿಸಿ: 'ಜಿಮ್ಮಿ' ಅವತಾರದಲ್ಲಿ ಸಖತ್ತಾಗಿದೆ ಸಂಚಿತ್ ಖದರ್: ವಾರ್ನಿಂಗ್ ಕೊಡುತ್ತಾ ಎಂಟ್ರಿ ಕೊಟ್ಟ ಜ್ಯೂ.ಕಿಚ್ಚ!