ರಿಷಬ್ ಶೆಟ್ಟಿ ನಾಯಕನಾಗಿ ನಟಿಸಿರುವ ‘ಹರಿಕಥೆ ಅಲ್ಲ ಗಿರಿಕಥೆ’ ಸಿನಿಮಾ ಜೂನ್ 23ಕ್ಕೆ ತೆರೆ ಮೇಲೆ ಬರುತ್ತಿದೆ. ಚಿತ್ರದ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ರಿಷಬ್ ಶೆಟ್ಟಿ, ಸಹಾಯಕ ನಿರ್ದೇಶಕರ ಕತೆಯ ಮೇಲೆ ಸಿದ್ಧವಾಗಿರೋ ಸಿನಿಮಾ 'ಹರಿಕಥೆ ಅಲ್ಲ ಗಿರಿ ಕಥೆ'.
ರಿಷಬ್ ಶೆಟ್ಟಿ (Rishab Shetty) ನಾಯಕನಾಗಿ ನಟಿಸಿರುವ ‘ಹರಿಕಥೆ ಅಲ್ಲ ಗಿರಿಕಥೆ’ (Harikathe Alla Girikathe) ಸಿನಿಮಾ ಜೂನ್ 23ಕ್ಕೆ ತೆರೆ ಮೇಲೆ ಬರುತ್ತಿದೆ. ಚಿತ್ರದ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ರಿಷಬ್ ಶೆಟ್ಟಿ, ಸಹಾಯಕ ನಿರ್ದೇಶಕರ ಕತೆಯ ಮೇಲೆ ಸಿದ್ಧವಾಗಿರೋ ಸಿನಿಮಾ 'ಹರಿಕಥೆ ಅಲ್ಲ ಗಿರಿ ಕಥೆ'. ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ ಡೈರೆಕ್ಟರ್ ಕ್ಯಾಪ್‌ನ್ನು ರಿಷಬ್ ಶೆಟ್ಟಿ ತೊಟ್ಟಿದ್ದಾರೆ. ಸಹಾಯಕ ನಿರ್ದೇಶಕನ ಕೆಲಸ ಥ್ಯಾಕ್ಲೆಸ್ ಜಾಬ್. ನಾನು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದವನು. ಸರಿಯಾಗಿ ಸಂಬಳ ಸಿಗುತ್ತಿರಲಿಲ್ಲ. ಸಹಾಯಕ ನಿರ್ದೇಶಕನಾಗಿ ನಾನು 50 ರೂಪಾಯಿ ಸಂಬಳ ಪಡೆದಿದ್ದೇನೆ.
777 Charlie: ರಮ್ಯಾ-ರಕ್ಷಿತ್ ಶೆಟ್ಟಿ ಮದ್ವೆಗೆ ಕ್ಲಾರಿಟಿ ಕೊಟ್ಟ ರಿಷಬ್ ಶೆಟ್ಟಿ!
ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುವಾಗ ನಿರ್ದೇಶಕರೊಬ್ಬರು ನನ್ನ ತಲೆಗೆ ಹೊಡೆದಿದ್ರು. ನಾನು ಅಂದೇ ಸಿನಿಮಾ ಇಂಡಸ್ಟ್ರಿಯಿಂದ ದೂರ ಹೋಗೋಕೆ ಬಯಸಿದ್ದೆ. ಇದೀಗ ಕಾಂತಾರ ಸಿನಿಮಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದೇನೆ ಎಂದು ತಿಳಿಸಿದರು. ಇನ್ನು ಇದು ಸಿನಿಮಾ ಮಾಡಲು ಹೊರಡುವವನ ಕತೆ. ಚಿತ್ರರಂಗದಲ್ಲಿ ಕೆಲಸ ಮಾಡುವ ಸಹಾಯ ನಿರ್ದೇಶಕರದ್ದೇ ಒಂದು ದೊಡ್ಡ ಜಗತ್ತು ಇದೆ. ಆ ಜಗತ್ತಿನ ಕತೆಯನ್ನು ಈ ಚಿತ್ರದ ಮೂಲಕ ಹೇಳುತ್ತಿದ್ದೇವೆ. ಆ ಜಗತ್ತಿನ ಕೋಪ, ಕನಸುಗಳು, ಪ್ರೀತಿ ಮತ್ತು ಸ್ನೇಹ ಎಲ್ಲವೂ ಇದೆ. ಇದನ್ನು ಸಾಕಷ್ಟು ಮಟ್ಟಿಗೆ ಹಾಸ್ಯದ ಧಾಟಿಯಲ್ಲಿ ಹೇಳಿದ್ದೇವೆ. ಎಲ್ಲರಿಗೂ ಇಷ್ಟವಾಗುವ ಸಿನಿಮಾ ಎಂದರು ರಿಷಬ್ ಶೆಟ್ಟಿ.
ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies