777 Charlie: ರಮ್ಯಾ-ರಕ್ಷಿತ್ ಶೆಟ್ಟಿ ಮದ್ವೆಗೆ ಕ್ಲಾರಿಟಿ ಕೊಟ್ಟ ರಿಷಬ್ ಶೆಟ್ಟಿ!

777 Charlie: ರಮ್ಯಾ-ರಕ್ಷಿತ್ ಶೆಟ್ಟಿ ಮದ್ವೆಗೆ ಕ್ಲಾರಿಟಿ ಕೊಟ್ಟ ರಿಷಬ್ ಶೆಟ್ಟಿ!

Published : May 18, 2022, 09:25 PM IST

ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಸಿನಿಮಾರಂಗ ಬಿಟ್ಟು ವರ್ಷಾನುಗಟ್ಟಲೇ ಆದ್ರು ಕೂಡ ಸಿನಿಮಾ ಪ್ರೇಮಿಗಳಿಗೆ ಮಾತ್ರ ಅವ್ರ ಮೇಲಿರೋ ಪ್ರೀತಿ ಕಿಂಚಿತ್ತು ಕಮ್ಮಿ ಆಗಿಲ್ಲ. ರಮ್ಯಾ ಮತ್ತೆ ಬರ್ಲಿ ಮತ್ತೆ ಸಿನಿಮಾ ಮಾಡ್ಲಿ ಅನ್ನೋದೇ ಎಲ್ಲರ ಆಸೆ. 

ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಸಿನಿಮಾರಂಗ ಬಿಟ್ಟು ವರ್ಷಾನುಗಟ್ಟಲೇ ಆದ್ರು ಕೂಡ ಸಿನಿಮಾ ಪ್ರೇಮಿಗಳಿಗೆ ಮಾತ್ರ ಅವ್ರ ಮೇಲಿರೋ ಪ್ರೀತಿ ಕಿಂಚಿತ್ತು ಕಮ್ಮಿ ಆಗಿಲ್ಲ. ರಮ್ಯಾ ಮತ್ತೆ ಬರ್ಲಿ ಮತ್ತೆ ಸಿನಿಮಾ ಮಾಡ್ಲಿ ಅನ್ನೋದೇ ಎಲ್ಲರ ಆಸೆ. ಈ ಮಧ್ಯೆ ರಮ್ಯಾ ಜೊತೆ ರಕ್ಷಿತ್ ಮದ್ವೆ ಮಾಡಿಸಬೇಕು ಅನ್ನೋ ಆಸೆ ಅವ್ರ ಮತ್ತಷ್ಟು ಅಭಿಮಾನಿಗಳಿಗೆ. ಅದೇ ಕಾರಣಕ್ಕಾಗಿ ಸೋಷಿಯಲ್ ಮಿಡಿಯಾದಲ್ಲಿ ರಕ್ಷಿತ್ ಅವ್ರಿಗೆ ರಮ್ಯಾ ಅವ್ರನ್ನ ಮದ್ವೆ ಆಗಿಬಿಡಿ ಅಂತ ಬಿಟ್ಟಿ ಸಲಹೆ ಕೂಡ ಕೊಡ್ತಿದ್ದಾರೆ. ಅದಕ್ಕೆ ತಕ್ಕಂತೆ ರಮ್ಯಾ ಬೇರೆ ಒಟ್ಟಿಗೆ ಸಿನಿಮಾ ಮಾಡೋಣ ಅಂತ ರಕ್ಷಿತ್‌ಗೆ ಗ್ರೀನ್ ಸಿಗ್ನಲ್ ಕೊಟ್ರು. ಎಲ್ಲವೂ ಸೇರಿ ಮದ್ವೆ ತನಕ ಸುದ್ದಿ ಆಗಿ ಹೋಯ್ತು. 

ಇತ್ತಿಚೆಗಷ್ಟೇ ನಟ ರಕ್ಷಿತ್ ಸುಮಾರು ದಿನಗಳ ನಂತ್ರ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ರು. ಆಗ ರಮ್ಯಾ ಅವ್ರ ಬಗ್ಗೆ ಹೆಚ್ಚೆಚ್ಚು ಪ್ರಶ್ನೆಗಳನ್ನ ರಕ್ಷಿತ್ ಅವ್ರಿಗೆ ಕೇಳಲಾಗಿತ್ತು. ರಕ್ಷಿತ್ ಕೂಡ ನೇರ ನೇರವಾಗಿ ರಮ್ಯಾ ಅವ್ರು ನನಗೆ ಕ್ರಶ್ ಅಂತ ಹೇಳಿದ್ರು,. ಅದೇ ಸಖತ್ ವೈರಲ್ ಆಗಿ ಇಬ್ಬರು ಮದ್ವೆ ಆಗ್ತಾರೆ ಅಂತೆಲ್ಲಾ ಸುದ್ದಿ ಆಗಿ ಬಿಡ್ತು. ಆದ್ರೆ ಈಗ ಈ ಬಗ್ಗೆ ನಟ ರಿಷಬ್ ಕ್ಲಾರಿಟಿ ಕೊಟ್ಟಿದ್ದಾರೆ. ರಕ್ಷಿತ್, ರಮ್ಯಾ ಅವ್ರನ್ನ ಮದ್ವೆ ಆಗಲ್ಲ. ಈ ರೀತಿಯ ಮಾತನ್ನ ನಟ ರಿಷಬ್ ಶೆಟ್ಟಿ ಚಾರ್ಲಿ ಸಿನಿಮಾದ ಸುದ್ದಿಗೋಷ್ಟಿಯ ವೇದಿಕೆಯಲ್ಲಿ ಹೇಳಿದ್ರು. ನಗುನಗುತ್ತಲೇ ಈ ಸ್ಟೇಟ್ಮೆಂಟ್ ಕೊಟ್ಟಿದ್ರು ರಿಷಬ್ ಆದ್ರೆ ಈ ಹೇಳಿಕೆ ಹಿಂದೆ ಒಂದು ದೊಡ್ಡ ಮಾಸ್ಟರ್ ಪ್ಲಾನ್ ಇದೆ. 

ಮದುವೆ ಬಗ್ಗೆ ಪದೇ ಪದೇ ಪ್ರಶ್ನೆ ಕೇಳುತ್ತಿದ್ದವರಿಗೆ ರಕ್ಷಿತ್ ಶೆಟ್ಟಿ ಕೊಟ್ರು ಕ್ಲಾರಿಟಿ!

ರಕ್ಷಿತ್ ಶೆಟ್ಟಿ ಲೈಫ್‌ನಲ್ಲಿ ಈಗಾಗಲೇ ಮದ್ವೆ ವಿಚಾರವಾಗಿ ಏನೇನೋ ಆಗಿ ಹೋಗಿದೆ. ಅದರಿಂದ ರಕ್ಷಿತ್ ಹೊರ ಬರಲು ಸಾಕಷ್ಟು ಸಮಯ ಕೂಡ ತೆಗೆದುಕೊಂಡ್ರು. ಅದನ್ನೆಲ್ಲ ನೋಡಿರೋ ರಿಷಬ್ ಮತ್ತೆ ರಕ್ಷಿತ್ ಲೈಫ್‌ನಲ್ಲಿ ಯಾವ ರೀತಿಯಲ್ಲೂ ತೊಂದರೆ ಆಗಬಾರದು ಎಂದು ಎಚ್ಚರಿಕೆ ವಹಿಸ್ತಿದ್ದಾರೆ. ರಕ್ಷಿತ್ ಹಾಗೂ ರಶ್ಮಿಕಾ ಬ್ರೇಕ್ ಅಪ್ ವಿಚಾರ ಬಂದಾಗಲೂ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಪರವಾಗಿಯೇ ನಿಂತಿದ್ರು. ಇಂದೂ ಕೂಡ ರಕ್ಷಿತ್ ಏಳಿಗೆಯನ್ನೇ ಬಯಸುತ್ತಿದ್ದಾರೆ. ಹತ್ತಾರು ವರ್ಷದ ಸ್ನೇಹಿತನನ್ನ ಕಾಪಾಡಿಕೊಂಡು ಜೋಪಾನ ಮಾಡುತ್ತಿದ್ದಾರೆ ರಿಷಬ್. ಹಾಗಾಗಿ ವೇದಿಕೆ ಮೇಲೆ ಈ ರೀತಿ ಸ್ಟೇಟ್ಮೆಂಟ್ ಕೊಡುತ್ತಾ ಯೂಟ್ಯೂಬ್ ನಲ್ಲಿರೋ ಮದ್ವೆ ವಿಚಾರ ನಂಬಬೇಡಿ ಎಂದಿದ್ದಾರೆ. ಇದನ್ನ ನೋಡಿರೋ ಅಭಿಮಾನಿಗಳು ಇವರಿಬ್ಬರ ಸ್ನೇಹಕ್ಕೆ ದೃಷ್ಟಿ ಆಗದಿರಲಿ ಅಂತಿದ್ದಾರೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
Read more