Nov 16, 2023, 11:37 AM IST
ನಟ ಭಯಂಕರನಾಗಿ ಕಾಣಿಸಿಕೊಂಡಿದ್ದ ರಿಷಬ್ ಶೆಟ್ಟಿ ಕಾಂತಾರ 2ನಲ್ಲಿ ಏನೆಲ್ಲಾ ಮೋಡಿ ಮಾಡ್ತಾರೋ ಎನ್ನುವ ಕುತೂಹಲ ಈಗ ಸಿನಿ ರಸಿಕರಲ್ಲಿ. ಕಾಂತಾರ ಪ್ರೀಕ್ವೆಲ್ ಇದಕ್ಕಾಗಿ ರಿಷಬ್ ತಮ್ಮ ಗೆಟಪ್(Getup) ಬದಲಾಯಿಸಿದ್ದಾರೆ. ಹೊಸ ಚಿತ್ರಕ್ಕಾಗಿ ರಿಷಬ್ ಹೇಗೆ ಕಾಣಿಸಿಕೊಳ್ತಾರೊ ಎಂಬ ಕುತೂಹಲಕ್ಕೆ ಇದೀಗ ಸುಳಿವು ಸಿಕ್ಕಿದೆ. ಕಾಂತಾರ-2 ಸಿನಿಮಾಗಾಗಿ ತಮ್ಮ ಗೆಟಪ್‌ನನ್ನು ಬದಲಿಸಿದ್ದಾರೆ. ತಮ್ಮ ಕುಟುಂಬದೊಂದಿಗೆ ದೀಪಾವಳಿ ಹಬ್ಬವನ್ನು ಆಚರಣೆ ಮಾಡಿ ಹಂಚಿಕೊಂಡ ಫೋಟೋದಲ್ಲಿ ಹೊಸ ಗೆಟಪ್ ರಿವೀಲ್ ಆಗಿದೆ. ರಿಷಬ್ ಶೆಟ್ಟಿ ‘ಕಾಂತಾರ 2’(Kantara 2) ಸಿನಿಮಾದ ಚಿತ್ರೀಕರಣವನ್ನು ಗುಟ್ಟಾಗಿ ಮಾಡುತ್ತಿದ್ದಾರೆ. ಸಿನಿಮಾದ ಕತೆ, ಶೂಟಿಂಗ್ ಚಿತ್ರಗಳು ಹೊರ ಹೋಗದಂತೆ ಎಚ್ಚರವಹಿಸಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ ‘ಕಾಂತಾರ 2’ ಸಿನಿಮಾದ ರಿಷಬ್‌ರ ಲುಕ್ ಒಂದು ಬಹಿರಂಗವಾಗಿದೆ.‘ಕಾಂತಾರ’ (Kantara) ಸಿನಿಮಾ ರಿಷಬ್ ಶೆಟ್ಟಿಯನ್ನು(Rishab shetty) ಪ್ಯಾನ್ ಇಂಡಿಯಾ ಸ್ಟಾರ್ ಅನ್ನಾಗಿ ಮಾಡಿದೆ. ಊಹಿಸದಷ್ಟು ಜನಪ್ರಿಯತೆ, ಗೌರವವನ್ನು ‘ಕಾಂತಾರ’ ಸಿನಿಮಾ ರಿಷಬ್ ಶೆಟ್ಟಿಗೆ ಬಗೆದು ಕೊಟ್ಟಿದೆ. ‘ಕಾಂತಾರ’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು, ಇದೀಗ ‘ಕಾಂತಾರ’ ಕಥೆಯನ್ನು ಮತ್ತಷ್ಟು ಬೆಳೆಸಿ ಇನ್ನೊಂದು ಸಿನಿಮಾ ಮಾಡುವ ತಯಾರಿಯಲ್ಲಿದ್ದಾರೆ ರಿಷಬ್ ಶೆಟ್ಟಿ. ‘ಕಾಂತಾರ’ ಸಿನಿಮಾದ ಪ್ರೀಕ್ವೆಲ್ ಅನ್ನು ರಿಷಬ್ ಶೆಟ್ಟಿ ಬರೆದಿದ್ದು, ಚಿತ್ರೀಕರಣವನ್ನೂ ಪ್ರಾರಂಭಿಸಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಎರಡು ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದ್ದು, ಎರಡು ಭಿನ್ನ ಗೆಟಪ್ನಲ್ಲಿ ರಿಷಬ್ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ವೀಕ್ಷಿಸಿ: ಮೈಸೂರಲ್ಲಿ ಸಿಎಂ ಪುತ್ರ ಯತೀಂದ್ರ ದರ್ಬಾರ್? ಯತೀಂದ್ರ ಯಾರ ಜೊತೆ ಮತಾಡಿದ್ದು? ವಿಡಿಯೋದಲ್ಲಿ ಏನಿದೆ?