
ರಿಷಬ್ ಶೆಟ್ಟಿಯ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಎಷ್ಟು ಸದ್ದು ಮಾಡ್ತೋ ಅಷ್ಟೇ ಸಿನಿಮಾದ ಹೊರಗಿನ ವಿಷಯಗಳಿಗೆ ಸುದ್ದಿ ಮಾಡಿದೆ... ಇವತ್ತು ಮತ್ತೊಂದು ಕಾಂಟ್ರವರ್ಸಿಯಲ್ಲಿ ರಿಷಬ್ ಹೆಸರು ಕೇಳಿ ಬಂದಿದೆ.
ತುಳುನಾಡಿನ ದೈವಾರಾಧನೆಯ ಎಳೆ ಹಿಡಿದುಕೊಂಡು ನಿರ್ಮಿಸಿದ ಕಾಂತಾರ ಸಿನಿಮಾ ಇಡೀ ದೇಶವನ್ನೇ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದೆ. ಪ್ರೀಕ್ವೆಲ್ ಸೀಕ್ವೆಲ್ ಎಲ್ಲವೂ ಸೂಪರ್ ಹಿಟ್. ಆದ್ರೆ ಈ ರಿಷಬ್ ಶೆಟ್ಟಿಯ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಎಷ್ಟು ಸದ್ದು ಮಾಡ್ತೋ ಅಷ್ಟೇ ಸಿನಿಮಾದ ಹೊರಗಿನ ವಿಷಯಗಳಿಗೆ ಸುದ್ದಿ ಮಾಡಿದೆ... ಇವತ್ತು ಮತ್ತೊಂದು ಕಾಂಟ್ರವರ್ಸಿಯಲ್ಲಿ ರಿಷಬ್ ಹೆಸರು ಕೇಳಿ ಬಂದಿದೆ. ಕೇವಲ ರಿಷಬ್ ಶೆಟ್ಟಿ ಮಾತ್ರವಲ್ಲ ದೈವ ನರ್ತರಕೊರಬ್ಬರ ವಿರುದ್ಧವೂ ಆಕ್ರೋಶ ವ್ಯಕ್ತವಾಗ್ತಿದೆ. ಅಷ್ಟಕ್ಕೂ ಏನಿದು ಕಾಂತಾರದ ಹೊಸ ಕಾಂಟ್ರವರ್ಸಿ..? ದೈವ ನರ್ತಕರ ಮೆಲೆ ಕೇಳಿ ಬಂದಿರೋ ಆರೋಪವೇನು..? ಅನ್ನೋದೇ ಇವತ್ತಿನ ಎಫ್ಐಆರ್.
ಇದೇ ವಿಡಿಯೋ.. ಇದೊಂದು ವಿಡಿಯೋ ಈಗ ಕೆಲ ದೈವಾರಾಧಕರ ಆಕ್ರೋಶಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ ಸಾಮಾಜಿಕ ಜಾಲತಾಣಗಳಲ್ಲು ದೈವ ನರ್ತಕ ಮತ್ತು ರಿಷಬ್ ಶೆಟ್ಟಿ ವಿರುದ್ಧ ಪೋಸ್ಟ್ಗಳನ್ನ ಹಾಕುತ್ತಿದ್ದಾರೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಅಂಥದ್ದೇನಿದೆ..? ಹರಕೆ ತೀರಿಸುವಾಗ ಏನಾಯ್ತು..? ರಿಷಬ್ ಶೆಟ್ಟಿ ದೈವ ಅಪ್ಪಣೆ ಪಡೆದೇ ನಾನು ಸಿನಿಮಾ ಮಾಡಿದ್ದೇನೆ ಅಂತ ಹೇಳುತ್ತಿದ್ದಾರೆ. ಕೆಲ ಸಾಮಾಜಿಕ ವಿಡಿಯೋಗಳಲ್ಲೂ ಅದನ್ನ ನೋಡಿದ್ದೇವೆ. ಆದ್ರೆ ಕೆಲ ದೈವಾರಾಧಕರಿಗೆ ಮಾತ್ರ ಈ ಸಿನಿಮಾದಿಂದ ಬೇಸರಗೊಂಡಿದ್ದಾರೆ. ಆದ್ರೆ ಇವರುಗಳ ಬೇಸರ ಆಕ್ರೋಶವಾಗಿ ಮಾರ್ಪಟ್ಟಿದ್ದು ಮಾತ್ರ ಮೊನ್ನೆ ಶೆಟ್ರು ಹರಕೆ ತೀರಿಸಲು ಹೋದಾಗ.
ರಿಷಬ್ ಮೊನ್ನೆ ಹರಕೆ ನೇಮ ತೀರಿಸಿದ್ರು. ಈ ಟೈಂನಲ್ಲಿ ದೈವನರ್ತಕರು ನೇಮ ಮಾಡುವಾಗ ರಿಷಬ್ ಮಡಿಲಲ್ಲಿ ಮಲಗುತ್ತಾರೆ. ಇದೇ ಘಟನೆ ಈಗ ಕಾಂಟ್ರವರ್ಸಿಗೆ ತಿರುಗಿದೆ. ಪಂಜುರ್ಲಿ ದೈವ ಹೀಗೆಲ್ಲಾ ಮಾಡಲ್ಲ ಅಂತಿದ್ದಾರೆ. ಇದು ದೈವ ಮಾಡಿದಲ್ಲ ದೈವ ನರ್ತಕ ಮಾಡಿದ್ದು ಅಂತಿದ್ದಾರೆ. ಸದ್ಯದಲ್ಲೇ ಈ ವಿಷಯಕ್ಕೂ ತುಳು ನಾಡಿನ ಜನ ಪ್ರಶ್ನೆ ಇಟ್ಟರೂ ಅಚ್ಚರಿ ಇಲ್ಲ.. ಆದ್ರೆ ಒಂದು ಸಂಸ್ಕೃತಿಯ ಬಗ್ಗೆ ಮಾತನ್ನಾಡೋದ್ದಾಗಲಿ.. ಅದನ್ನ ಇಯಾಳಿಸೋದನ್ನಾಗಲಿ ಮಾಡುವ ದೈರ್ಯ ಯಾರೂ ಮಾಡಬಾರದು.. ಎಲ್ಲಾದಕ್ಕೂ ಆ ಪಂಜುರ್ಲಿಯೇ ಉತ್ತರ ಕೊಡಬೇಕು.