ಕಾಂತಾರ ಪ್ರೀಕ್ವೆಲ್​​​ಗೆ ರಾಜಮೌಳಿ ಮೆಚ್ಚಿದ್ದ ಆ್ಯಕ್ಷನ್ ಡೈರೆಕ್ಷನ್ ಟೊಡರ್ ಲ್ಯಾಜರೋವ್!

ಕಾಂತಾರ ಪ್ರೀಕ್ವೆಲ್​​​ಗೆ ರಾಜಮೌಳಿ ಮೆಚ್ಚಿದ್ದ ಆ್ಯಕ್ಷನ್ ಡೈರೆಕ್ಷನ್ ಟೊಡರ್ ಲ್ಯಾಜರೋವ್!

Published : Nov 03, 2024, 11:46 AM IST

ಡೈರೆಕ್ಟರ್ ರಾಜಮೌಳಿಯೇ ಭೇಷ್​ ಎಂದಿದ್ದ ಸ್ಟಾರ್​ ಆ್ಯಕ್ಷನ್ ಡೈರೆಕ್ಟರ್​ ಒಬ್ಬರನ್ನ ರಿಷಬ್​ ತನ್ನ ಕಾಂತಾರ ಪ್ರೀಕ್ವೆಲ್​ ಸೆಟ್​​​ಗೆ ಕರೆಸಿಕೊಂಡಿದ್ದಾರೆ. ಕಾಂತಾರ ಪ್ರೀಕ್ವೆಲ್​​ಗೆ ಈಗ ಸ್ಟಾರ್ ಸಾಹಸ ನಿರ್ದೇಶಕನ ಎಂಟ್ರಿ ಆಗಿದೆ. ಬಲ್ಗೇರಿಯಾದಿಂದ ಡೈರೆಕ್ಟರ್ ಆಗಿ ಕುಂದಾಪುರಕ್ಕೆ ಬಂದಿರೋ..

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ದೀಪಾವಳಿಯಂದೇ ಧಮಾಕ ಸುದ್ದಿ ಕೊಟ್ಟಿದ್ದಾರೆ. ಡೈರೆಕ್ಟರ್ ರಾಜಮೌಳಿಯೇ ಭೇಷ್​ ಎಂದಿದ್ದ ಸ್ಟಾರ್​ ಆ್ಯಕ್ಷನ್ ಡೈರೆಕ್ಟರ್​ ಒಬ್ಬರನ್ನ ರಿಷಬ್​ ತನ್ನ ಕಾಂತಾರ ಪ್ರೀಕ್ವೆಲ್​ ಸೆಟ್​​​ಗೆ ಕರೆಸಿಕೊಂಡಿದ್ದಾರೆ. ಹಾಗಾದ್ರೆ ಆ ಸ್ಟಾರ್ ಸಾಹಸ ನಿರ್ದೇಶಕ ಯಾರು..? ಕಾಂತಾರ ಚಾಪ್ಟರ್​​ ಒನ್​ ಸೆಟ್​​ಗೆ ಬಂದಿದ್ದು ಯಾಕೆ..? ಆ ಸ್ಟಾರ್ ಸಾಹಸ ನಿರ್ದೇಶಕನ ಬಳಿ ರಾಜಮೌಳಿಯೇ ಮೆಚ್ಚುವಂತಹ ಟ್ಯಾಲೆಂಟ್ ಏನಿದೆ..? ಇದೆಲ್ಲವನ್ನ ನೋಡೋಣ ಬನ್ನಿ ಈ ಎಕ್ಸ್​ಕ್ಲ್ಯೂಸೀವ್ ಸ್ಟೋರಿಯಲ್ಲಿ.. 

ಡಿವೈನ್ ಸ್ಟಾರ್​ ಕಾಂತಾರ ಪ್ರೀಕ್ವೆಲ್​​ಗೆ ಈಗ ಸ್ಟಾರ್ ಸಾಹಸ ನಿರ್ದೇಶಕನ ಎಂಟ್ರಿ ಆಗಿದೆ. ಇವರ ಹೆಸರು ಟೊಡರ್ ಲ್ಯಾಜರೋವ್. ಬಲ್ಗೇರಿಯಾದಿಂದ ಡೈರೆಕ್ಟರ್ ಆಗಿ ಕುಂದಾಪುರಕ್ಕೆ ಬಂದಿರೋ ಟೊಡರ್ ಲ್ಯಾಜರೋವ್, ಕಾಂತಾರದ ಸಾಹಸ ಸನ್ನಿವೇಷಗಳನ್ನ ಕಟ್ಟಿಕೊಡುತ್ತಿದ್ದಾರೆ. 

ಟೊಡರ್ ಲ್ಯಾಜರೋವ್ ಭಾರತರ ಪ್ರೈಡ್​ ಎಸ್​, ಎಸ್​ ರಾಜಮೌಳಿಯ ಫೇವರಿಟ್ ಸ್ಟಂಟ್​ ಮಾಸ್ಟರ್. ಮೌಳಿ ಡೈರೆಕ್ಟ್ ಮಾಡಿದ್ದ ಆರ್​​.ಆರ್.​ಆರ್​​​​ ಸಿನಿಮಾದ ಸಾಹಸ ಸನ್ನಿವೇಷಗಳನ್ನ ಕಟ್ಟಿಕೊಟ್ಟಿದ್ದು ಇವರೇ. ಆರ್​ಆರ್​ಆರ್​ನಲ್ಲಿರೋ 30 ನಿಮಿಷದ ಕ್ಲೈಮ್ಯಾಕ್ಸ್ ಆಕ್ಷನ್ ಸೀನ್​ಗಳನ್ನ ಮೈ ರೋಮಾಂಚನವಾಗುವಂತೆ ನಿರ್ದೇಶಿಸಿದ್ರು. ಆ ಸಾಹಸದ ಸೀನ್ಸ್ ಇಂದಿಗೂ ಕಣ್ಣಿಗೆ ಕಟ್ಟುತ್ತಿವೆ.

ಟೊಡರ್ ಲ್ಯಾಜರೋವ್ ರನ್ನ ಆರ್​ಆರ್​ಆರ್​ ಸಿನಿಮಾ ಮೂಲಕ ಭಾರತೀಯ ಸಿನಿ ಜಗತ್ತಿಗೆ ಪರಿಚಯಿಸಿದ್ದೇ ರಾಜಮೌಳಿ. ಹಾಲಿವುಡ್​​ನ In Hell, ಮತ್ತು Red Faction ತರದ ಆಕ್ಷನ್ ಸಿನಿಮಾಗಳನ್ನ ಮಾಡಿರೋ ಟೊಡರ್ ಲ್ಯಾಜರೋವ್ ಈಗ ಕನ್ನಡದ ಕಾಂತಾರ ಪ್ರೀಕ್ವೆಲ್​​​ಗೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ರಿಷಬ್ ಶೆಟ್ಟಿ ಕಾಂತಾರ ಪ್ರೀಕ್ವೆಲ್​ಗಾಗಿ ಕಳರಿ ಪಯಟ್ಟು ಫೈಟ್​​ ಕಲಿತಿದ್ದಾರೆ. ಈ ಕಳರಿ ಪಯಟ್ಟು ಕೇರಳದ ಸಾಹಸ ಕಲೆ. ಈ ಕಲೆಯನ್ನ ಟೊಡರ್ ಲ್ಯಾಜರೋವ್ ತೆರೆ ಮೇಲೆ ಹೇಗೆ ಪ್ರೆಸೆಂಟ್ ಮಾಡುತ್ತಾರೆ ಅನ್ನೋ ಕುತೂಹಲ ಹುಟ್ಟಿದೆ.

05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
Read more