ನ್ಯಾಷನಲ್ ಕ್ರಶ್ ರಶ್ಮಿಕಾ ಈ ಸಾರಿ ಪ್ರೇಕ್ಷಕರನ್ನ ಹೆದರಿಸೋಕೆ ಬರ್ತಾ ಇದ್ದಾರೆ. ಬಾಲಿವುಡ್ ನ ಫೇಮಸ್ ಹಾರರ್ ಕಾಮಿಡಿ ಯೂನಿವರ್ಸ್ನ ಲೇಟೆಸ್ಟ್ ಮೂವಿ ‘ಥಾಮಾ’ನಲ್ಲಿ ಶ್ರೀವಲ್ಲಿಯ ಹಾರರ್ ಅವತಾರ ನೋಡಲಿಕ್ಕೆ ಸಿಗಲಿದೆ.
ನ್ಯಾಷನಲ್ ಕ್ರಶ್ ರಶ್ಮಿಕಾ ಹಿಂದೆಂದೂ ಕಾಣಿಸಿರದ ಹೊಸ ಅವತಾರದಲ್ಲಿ ಬರ್ತಾ ಇದ್ದಾರೆ. ಬಾಲಿವುಡ್ ನಲ್ಲಿ ಸ್ತ್ರೀ, ಮುಂಜ್ಯಾ ಸೇರಿದಂತೆ ಸಖತ್ ಫೇಮಸ್ ಆಗಿರೋ ಸೀರಿಸ್ನ ಹೊಸ ಚಿತ್ರ ಥಾಮಾನಲ್ಲಿ ರಶ್ಮಿಕಾ ಹೊಸ ಅವತಾರದಲ್ಲಿ ಮಿಂಚಿದ್ದಾರೆ. ರಶ್ಮಿಕಾ ಕರೀಯರ್ನಲ್ಲಿ ಇದು ಮೊಟ್ಟ ಮೊದಲ ಹಾರರ್ ಮೂವಿ. ಟೀಸರ್ನಲ್ಲಿ ಕಿರಿಕ್ ಬ್ಯೂಟಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದು, ಇಲ್ಲಿ ಹಾರರ್ ಜೊತೆ ಥ್ರಿಲ್ ಕೂಡ ಇರುತ್ತೆ ಅನ್ನೋ ಸೂಚನೆ ಕೊಟ್ಟಿದ್ದಾರೆ. ‘ಥಾಮಾ' ಸಿನಿಮಾದಲ್ಲಿ ಪಾತ್ರವರ್ಗವೇ ಹೈಲೈಟ್ . ನಾಯಕಿಯಾಗಿ ರಶ್ಮಿಕಾ ಇದ್ದರೆ, ಅವರಿಗೆ ಹೀರೋ ಆಗಿ ಆಯುಷ್ಮಾನ್ ಖುರಾನಾ ಕಾಣಿಸಿಕೊಂಡಿದ್ದಾರೆ. ಉಳಿದಂತೆ, ಪರೇಶ್ ರಾವಲ್, ನವಾಜುದ್ದೀನ್ ಸಿದ್ದಿಕಿ, ಗೀತಾ ಅಗರ್ವಾಲ್, ಫೈಸಲ್ ಮಲಿಕ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.