ರಕ್ಷಿತಾ ಹೇಳಿದ ದರ್ಶನ್ ಸ್ವಿಸ್ ರಹಸ್ಯ: ಅಲ್ಲಿಂದ ಬದಲಾಯ್ತು ದಾಸನ ಅದೃಷ್ಟ!

ರಕ್ಷಿತಾ ಹೇಳಿದ ದರ್ಶನ್ ಸ್ವಿಸ್ ರಹಸ್ಯ: ಅಲ್ಲಿಂದ ಬದಲಾಯ್ತು ದಾಸನ ಅದೃಷ್ಟ!

Published : May 28, 2025, 12:09 PM IST

ನಟಿ ರಕ್ಷಿತಾ ದರ್ಶನ್ ಪಾಲಿಗೆ ಅದೆಷ್ಟು ಆಪ್ತೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಸದ್ಯ ಸ್ವಿಟ್ಜರ್​ಲ್ಯಾಂಡ್​ಗೆ ತೆರಳಿರೋ ರಕ್ಷಿತಾ ದರ್ಶನ್ ಸ್ವಿಸ್ ರಹಸ್ಯವನ್ನ ಬಿಚ್ಚಿಟ್ಟಿದ್ದಾರೆ. ಹಾಗಂತ ದರ್ಶನ್ ಏನು ಸ್ವಿಸ್ ಬ್ಯಾಂಕ್​ನಲ್ಲಿ ಹಣ ಇಟ್ಟಿಲ್ಲ.

ನಟಿ ರಕ್ಷಿತಾ ದರ್ಶನ್ ಪಾಲಿಗೆ ಅದೆಷ್ಟು ಆಪ್ತೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಸದ್ಯ ಸ್ವಿಟ್ಜರ್​ಲ್ಯಾಂಡ್​ಗೆ ತೆರಳಿರೋ ರಕ್ಷಿತಾ ದರ್ಶನ್ ಸ್ವಿಸ್ ರಹಸ್ಯವನ್ನ ಬಿಚ್ಚಿಟ್ಟಿದ್ದಾರೆ. ಹಾಗಂತ ದರ್ಶನ್ ಏನು ಸ್ವಿಸ್ ಬ್ಯಾಂಕ್​ನಲ್ಲಿ ಹಣ ಇಟ್ಟಿಲ್ಲ. ಆದ್ರೆ ಇದೇ ಸ್ವಿಟ್ಜರ್​ಲ್ಯಾಂಡ್ ದರ್ಶನ್​ಗೆ ಅದೃಷ್ಟವನ್ನ ತಂದುಕೊಟ್ಟಿತ್ತು. ಆ ಜಾಗದಿಂದಲೇ ದಾಸನ ಲಕ್ಕು ಬದಲಾಗಿತ್ತು..? ಏನಿದು ದಾಸನ ಸ್ವಿಸ್ ರಹಸ್ಯ ಅಂತೀರಾ ಈ ಸ್ಟೋರಿ ನೋಡಿ. ನಟಿ ರಕ್ಷಿತಾ ಪ್ರೇಮ್ ಸ್ವಿಟ್ಜರ್​ಲ್ಯಾಂಡ್ ಪ್ರವಾಸದಲ್ಲಿದ್ದಾರೆ. ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾದ ಶೂಟಿಂಗ್ ಸದ್ಯ ಸ್ವಿಟ್ಜರ್​ಲ್ಯಾಂಡ್​​ನಲ್ಲಿ ನಡೀತಾ ಇದ್ದು, ಪ್ರೇಮ್ ಜೊತೆ ರಕ್ಷಿತಾ ಮತ್ತವರ ಪುತ್ರ ಸೂರ್ಯ ಕೂಡ ಸ್ವಿಟ್ಜರ್​ಲ್ಯಾಂಡ್ ಗೆ​ ಹೋಗಿದ್ದಾರೆ. ಸ್ವಿಟ್ಜರ್​ಲ್ಯಾಂಡ್​​ನಲ್ಲಿರೋ ಬರ್ನ್ ನಗರಕ್ಕೆ ಹೋಗಿರೋ ರಕ್ಷಿತಾ ಅಲ್ಲಿನ ಕ್ಲಾಕ್ ಟವರ್ ಎದುರು ನಿಂತು ಪೋಸ್ ಕೊಟ್ಟಿದ್ದಾರೆ.

ಅಸಲಿಗೆ ಈ ಜಾಗ ರಕ್ಷಿತಾ ಪಾಲಿಗೆ ಸಖತ್ ಸ್ಪೆಷಲ್. ಯಾಕಂದ್ರೆ ರಕ್ಷಿತಾ ಮತ್ತು ದರ್ಶನ್ ನಟನೆಯ ಕಲಾಸಿಪಾಳ್ಯ ಸಿನಿಮಾದ ಓ ಕೆಂಚ ಓ ಕೆಂಚ ಹಾಡು ಇಲ್ಲಿಯೇ ಶೂಟ್ ಆಗಿತ್ತು, ಹೌದು ಕೆಂಚಾ ಓ ಕೆಂಚಾ ಹಾಡನ್ನ ಯಾರ್ ತಾನೇ ಮರೆಯೋದಕ್ಕೆ ಸಾಧ್ಯ. ದರ್ಶನ್ ಮತ್ತು ರಕ್ಷಿತಾ ಮೈಛಳಿ ಬಿಟ್ಟು ಕುಣಿದಿದ್ದ ಈ ಹಾಡು ಪಡ್ಡೆ ಹೈಕಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಅಸಲಿಗೆ ದರ್ಶನ್ ಮತ್ತು ರಕ್ಷಿತಾ ಮೊದಲ ಬಾರಿ ಜೊತೆಯಾಗಿ ನಟಿಸಿದ್ದ ಕಲಾಸಿಪಾಳ್ಯ ಸಿನಿಮಾದ ಹಾಡಿದು. ಕಲಾಸಿಪಾಳ್ಯ ಸಿನಿಮಾ ಬಂದಿದ್ದು 2004ರ ಅಕ್ಟೋಬರ್​ನಲ್ಲಿ. ಅಷ್ಟೊತ್ತಗಾಗಲೇ ದರ್ಶನ್ ಎರಡ್ಮೂರು ಹಿಟ್ ಸಿನಿಮಾ ಕೊಟ್ಟಿದ್ರು. ಆದ್ರೆ ಸ್ಟಾರ್ ಪಟ್ಟ ಸಿಕ್ಕಿರಲಿಲ್ಲ. ಜೊತೆಗೆ ದರ್ಶನ್ ನಟಿಸಿದ್ದ ಧರ್ಮ, ದರ್ಶನ್, ಭಗವಾನ್ ಅನ್ನೋ ಚಿತ್ರಗಳು ಸಾಲು ಸಾಲು ಸೋಲು ಕಂಡಿದ್ವು. ಅಂಥಾ ಟೈಂನಲ್ಲಿ ಬಂದಿದ್ದೇ ಕಲಾಸಿಪಾಳ್ಯ ಸಿನಿಮಾ.

03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
Read more