'ರಾಜ ಮಾರ್ತಾಂಡ'ನಿಗಾಗಿ ಬಂದ ಆ್ಯಕ್ಷನ್ ಪ್ರಿನ್ಸ್ ಧ್ರುವ: ಪತಿಯ ಕೊನೆ ಚಿತ್ರ ಸಕ್ಸಸ್‌ಗಾಗಿ ಮೇಘನಾ ಸರ್ಜಾ ಪಣ!

'ರಾಜ ಮಾರ್ತಾಂಡ'ನಿಗಾಗಿ ಬಂದ ಆ್ಯಕ್ಷನ್ ಪ್ರಿನ್ಸ್ ಧ್ರುವ: ಪತಿಯ ಕೊನೆ ಚಿತ್ರ ಸಕ್ಸಸ್‌ಗಾಗಿ ಮೇಘನಾ ಸರ್ಜಾ ಪಣ!

Published : Oct 03, 2023, 09:24 AM IST

ಧ್ರುವ ಸರ್ಜಾ ಮೇಘನಾ ಬಾಂಧವ್ಯ ಎಷ್ಟೇ ಚನ್ನಾಗಿದ್ರು, ಇಬ್ಬರ ಮಧ್ಯೆ ಎಲ್ಲವೂ ಸರಿ ಇಲ್ಲ ಅನ್ನೋ ಟಾಕ್ ಸ್ಯಾಂಡಲ್‌ವುಡ್‌ನಲ್ಲಿತ್ತು. ಆದ್ರೆ ಆ ಟಾಕ್ ಅನ್ನ ಮತ್ತೆ ಸುಳ್ಳು ಮಾಡಿದ್ರು ಮೇಘನಾ ಧ್ರುವ.

ಅತ್ತಿಗೆ ಅಂದ್ರೆ ಅಮ್ಮನ ಸಮಾನ ಅಂತ ದೊಡ್ಡೋರು ಸುಮ್ನೆ ಹೇಳಿಲ್ಲ. ಚಿರು ಪತ್ನಿ ಮೇಘನಾ(Meghana raj) ಹಾಗೂ ಮೈದುನ ಧ್ರುವ ಸರ್ಜಾ ಮಧ್ಯೆಯೂ ಅತ್ತದೇ ಪ್ರೀತಿ ವಾತ್ಸಲ್ಯ ಮಮತೆ ಕಾಣುತ್ತೆ. ಧ್ರುವ ಸರ್ಜಾ(Druva sarja) ಚಿರು ಸರ್ಜಾ(Chiru sarja) ಒಂದೇ ಜೀವ ಎರಡು ದೇಹ. ಚಿರು ಜೀವಂತವಾಗಿದ್ದಾಗ ಈ ಅಣ್ತಮ್ಮಂದಿರು ಎಷ್ಟು ಚನ್ನಾಗಿದ್ರು ಅಂತ ಮತ್ತೆ ಹೇಳ್ಬೇಕಿಲ್ಲ. ಇಬ್ಬರ ಮಧ್ಯೆ ಇದ್ದ ಸೋದರ ಸಂಬಂಧಕ್ಕೆ ಹತ್ತಾರು ಸಾಕ್ಷಿಗಳಿವೆ. ಆದ್ರೆ ಚಿರು ತಮ್ಮ ಧ್ರುವ ಹಾಗೂ ಪತ್ನಿ ಮೇಘನಾರನ್ನ ಒಂಟಿ ಮಾಡಿ ಹೋಗಿ ಮೂರು ವರ್ಷ ಕಳೆದಿದೆ. ಚಿರು ಇಲ್ಲವಾದ್ಮೇಲೆ ಮೇಘನಾ ಒಂಟಿ. ಧ್ರುವ ಕೂಡ ಅಣ್ಣ ಇಲ್ಲದ ನೋವಲ್ಲೆ ದಿನ ಕಳೆಯುತ್ತಾರೆ. ಅಣ್ಣ ನೆನಪಾದಾಗೆಲ್ಲಾ ಚಿರು ಸಮಾಧಿ ಮುಂದೆ ಮೌನವಾಗ್ತಾರೆ. ಇಲ್ಲ ಅಲ್ಲೇ ಮಲಗಿ ರಾತ್ರಿ ಕಳಿತಾರೆ. ಇದೆಲ್ಲಾ ಒಂದ್ ಕಡೆ ಆದ್ರೆ ಮತ್ತೊಂದ್ ಕಡೆ ಅಣ್ಣನ ಪತ್ನಿ ಮೇಘನಾರನ್ನ ಅಮ್ಮನ ಹಾಗೆ ಧ್ರುವ ಅಂಗೈಯಲ್ಲಿಟ್ಟು ಟೇಕ್ ಕೇರ್ ಮಾಡುತ್ತಾರೆ. ಧ್ರುವ ಸರ್ಜಾ ಮೇಘನಾ ಬಾಂಧವ್ಯ ಎಷ್ಟೇ ಚನ್ನಾಗಿದ್ರು, ಇಬ್ಬರ ಮಧ್ಯೆ ಎಲ್ಲವೂ ಸರಿ ಇಲ್ಲ ಅನ್ನೋ ಟಾಕ್ ಸ್ಯಾಂಡಲ್‌ವುಡ್‌ನಲ್ಲಿತ್ತು. ಆದ್ರೆ ಆ ಟಾಕ್ ಅನ್ನ ಮತ್ತೆ ಸುಳ್ಳು ಮಾಡಿದ್ರು ಮೇಘನಾ ಧ್ರುವ. ಚಿರು ನಟನೆಯ ಕೊನೇ ಸಿನಿಮಾ ರಾಜಮಾರ್ತಾಂಡ ಚಿತ್ರದ ಟ್ರೈಲರ್ ರಿಲೀಸ್‌ ಬಂದಿದ್ದ ಅತ್ತಗೆ ಮೈದುನಾ ಮೇಘನಾ - ಧ್ರುವ ಹಾಸ್ಯ ಮಾಡಿಕೊಳ್ತಾ ನಗು ನಗುತ್ತಾ ಚಿರು ಗೆಲುವಿಗಾಗಿ ಹರಸಿ ಹಾರೈಸಿದ್ರು. ರಾಮ್ ನಾರಾಯಣ್ ನಿರ್ದೇಶನದ ಶಿವಕುಮಾರ್ ನಿರ್ಮಾಣದ ರಾಜಮಾರತಾಂಡ ಸಿನಿಮಾ ಇದೇ ಅಕ್ಟೋಬರ್ 6ಕ್ಕೆ ಬಿಡುಗಡೆ ಆಗುತ್ತಿದೆ. 

ಇದನ್ನೂ ವೀಕ್ಷಿಸಿ:  Today Horoscope: ಕುಜನ ಕ್ರೂರ ದೃಷ್ಟಿಗೆ ಬಲಿಯಾಗುವವರು ಯಾರು ? ನೀವು ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳೇನು..?

04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
Read more