May 6, 2023, 4:21 PM IST
ಪುಷ್ಪ ದಿ ರೈಸ್‌ನಲ್ಲಿ ರಕ್ತ ಚಂದನ ಮರವನ್ನ ಕದ್ದು ಮಾರಿ ಬಾಕ್ಸಾಫೀಸ್‌ನಲ್ಲಿ 350 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದ ಅಲ್ಲು ಅರ್ಜುನ್ ಈ ವರ್ಷ ಪುಷ್ಪ ಚಾಪ್ಟರ್2 ಮೂಲಕ ಮತ್ತೊಂದು ಮೆಟ್ಟಿಲು ಹತ್ತೋಕೆ ರೆಡಿಯಾಗಿದ್ದಾರೆ. ಈ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗೋ ಮೊದಲೇ ಪುಷ್ಪಾ 2 ಸಿನಿಮಾದ ಹಾಡುಗಳಿಗೆ ಭರ್ಜರಿ ಡಿಮ್ಯಾಂಡ್ ಬಂದಿದ್ದು, ಆಡಿಯೋ ರೈಟ್ಸ್‌ನಲ್ಲಿ ರೆಕಾರ್ಡ್ ಬರೆದಿದ್ದಾರೆ ಅಲ್ಲು ಅರ್ಜುನ್. ಪುಷ್ಪಾ 2 ಸಾಂಗ್ಸ್ 65 ಕೋಟಿ ರೂಪಾಯಿಗೆ ಮಾರಾಟವಾಗಿದ್ದು, ಭಾರತೀಯ ಚಿತ್ರರಂಗದಲ್ಲಿ ಇದೊಂದು ಅಭೂತಪೂರ್ವ ರೆಕಾರ್ಡ್ ಆಗಿದೆ. ಎಸ್. ಎಸ್ ರಾಜಮೌಳಿ ಮತ್ತು ಸಂಗೀತ ನಿರ್ದೇಶಕ ಕೀರವಾಣಿ ಆರ್‌ಆರ್‌ಆರ್ ಸಿನಿಮಾದ ಆಡಿಯೋ ಹಕ್ಕಿನಿಂದ ಬರೋಬ್ಬರಿ 25 ಕೋಟಿ ಪಡೆದಿದ್ರು. ಆದ್ರೆ ಈಗ ಈ ರೆಕಾರ್ಡ್ ಅನ್ನ ಪುಷ್ಪ2 ಜೋಡಿ ಅಲ್ಲು ಅರ್ಜುನ್ ಮತ್ತು ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಧೂಳಿಪಟ ಮಾಡಿದ್ದಾರೆ.