Nov 9, 2021, 11:25 PM IST
ಬೆಂಗಳೂರು, (ನ.09): ಪುನೀತ್ ರಾಜ್‌ಕುಮಾರ್ (Puneeth Rajkumar) ದೊಡ್ಡ ಅಭಿಮಾನಿ ಬಳಗವನ್ನು ತೊರೆದು ಹೋಗಿದ್ದಾರೆ. ಅವರು ಸಿನಿಮಾ ಹಾಗೂ ಸಾಮಾಜಿಕ ಕೆಲಸದ ಮೂಲಕ ಜನರ ಮನದಲ್ಲಿ ಅಚ್ಚು ಮೂಡಿಸಿ ಹೋಗಿದ್ದಾರೆ. ಕೆಲವೆಡೆ ನೇತ್ರದಾನ, ಕೆಲವರಿಂದ ಅನ್ನ ಸಂತರ್ಪಣೆ ನಡೆದಿವೆ.
ಅಪ್ಪು ಇಷ್ಟೊಂದು ಅಭಿಮಾನಿಗಳನ್ನು ಗಳಿಸಿದ್ದ ಅಂತ ನಮಗೇ ಗೊತ್ತಿರಲಿಲ್ಲ: ಶಿವಣ್ಣ
ಪುನೀತ್ ರಾಜ್‌ಕುಮಾರ್ ಅವರು ಅಗಲಿ ಇಂದಿಗೆ (ನವೆಂಬರ್ 9) 12 ದಿನಗಳಾಗಿವೆ. ಈ ಕಾರಣಕ್ಕೆ ದೊಡ್ಮನೆ ಕುಟುಂಬ ಅಭಿಮಾನಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಕಣ್ಣೀರು ಹಾಕುತ್ತಲೇ ಅಪ್ಪು ಅಭಿಮಾನಿಗಳು ಊಟ ಸವಿದರು. ಹಾಗಾದರೆ ಈ ಕಾರ್ಯಕ್ರಮ ಹೇಗೆ ನಡೆಯಿತು? ಎಷ್ಟು ಜನ ಊಟ ಮಾಡಿದ್ರು? ಮಾಹಿತಿ ಇಲ್ಲಿದೆ.