Jun 19, 2022, 2:44 PM IST
'ಬೈರಾಗಿ' ಸಿನಿಮಾ ಜು.1ಕ್ಕೆ ಬಿಡುಗಡೆ ಆಗುತ್ತಿದ್ದು, 'ಟಗರು' ಚಿತ್ರದ ಹ್ಯಾಟ್ರಿಕ್ ಹಿರೋ ಶಿವರಾಜ್‌ಕುಮಾರ್ ಹಾಗೂ ಡಾಲಿ ಧನಂಜಯ್ ಕಾಂಬಿನೇಶನ್‌ನಲ್ಲಿ ಚಿತ್ರ ಮೂಡಿ ಬರುತ್ತಿದೆ. ವಿಜಯ್ ಮಿಲ್ಟನ್ ನಿರ್ದೇಶನದ, ಕೃಷ್ಣ ಸಾರ್ಥಕ್ ನಿರ್ಮಾಣದ ಈ ಚಿತ್ರದಲ್ಲಿ 'ದಿಯಾ' ಖ್ಯಾತಿಯ ಪೃಥ್ವಿ ಅಂಬರ್ ಕಾಣಿಸಿಕೊಂಡಿದ್ದು, ಸಿನಿಮಾ ಬಗ್ಗೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಶಿವಣ್ಣನ ಜೊತೆ ಮೊದಲ ಬಾರಿಗೆ ನಟಿಸಬೇಕು ಅಂದಾಗ ತುಂಬಾ ನರ್ವಸ್ ಆಗಿದ್ದೆ. ವಾಯ್ಸ್ ಕೂಡಾ ಬರುತ್ತಿರಲಿಲ್ಲ. ಶಿವಣ್ಣನ ಓಂ, ಜೋಗಿ, ಟಗರು, ಕಡ್ಡಿಪುಡಿ ಸಿನಿಮಾ ನನಗೆ ತುಂಬಾ ಇಷ್ಟ ಎಂದು ಪೃಥ್ವಿ ಅಂಬರ್ ಹೇಳಿದ್ದಾರೆ.
ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies