
ಪೆಹಲ್ಗಾಮ್ ಉಗ್ರದಾಳಿಯ ಬಳಿಕ ಭಾರತ್ ಪಾಕ್ ನಡುವೆ ಯುದ್ಧದ ಸನ್ನಿವೇಶ ನಿರ್ಮಾಣ ಆಗಿದೆ. ಈ ನಡುವೆ ಪಾಕಿಸ್ತಾನಿ ನಟ ಫವಾದ್ ಖಾನ್ ನಟಿಸಿದ್ದ ಅಬೀರ್ ಗುಲಾಲ್ ಸಿನಿಮಾದ ಬಿಡುಗಡೆಯನ್ನ ತಡೆಹಿಡಿಯಲಾಗಿತ್ತು.
ಪೆಹಲ್ಗಾಮ್ ಉಗ್ರದಾಳಿಯ ಬಳಿಕ ಭಾರತ್ ಪಾಕ್ ನಡುವೆ ಯುದ್ಧದ ಸನ್ನಿವೇಶ ನಿರ್ಮಾಣ ಆಗಿದೆ. ಈ ನಡುವೆ ಪಾಕಿಸ್ತಾನಿ ನಟ ಫವಾದ್ ಖಾನ್ ನಟಿಸಿದ್ದ ಅಬೀರ್ ಗುಲಾಲ್ ಸಿನಿಮಾದ ಬಿಡುಗಡೆಯನ್ನ ತಡೆಹಿಡಿಯಲಾಗಿತ್ತು. ಪಾಕಿಸ್ತಾನಿ ನಟರನ್ನ ಬ್ಯಾನ್ ಮಾಡಿ ಅನ್ನೋ ಒತ್ತಾಯ ಕೇಳಿಬಂದಿತ್ತು. ಆದ್ರೆ ಈಗ ನಟ ಪ್ರಕಾಶ್ ರಾಜ್ ಪಾಕಿಸ್ತಾನಿ ನಟರ ಬೆಂಬಲಕ್ಕೆ ನಿಂತಿದ್ದಾರೆ. ಅಬೀರ್ ಗುಲಾಲ್ ರಿಲೀಸ್ ಬ್ಯಾನ್ ಮಾಡೋದಕ್ಕೆ ಅದೇನು ನೀಲಿ ಚಿತ್ರವಾ.. ಈ ಚಿತ್ರವನ್ನ ರಿಲೀಸ್ ಮಾಡಬೇಕು ಅಂತ ಹೇಳಿ ಫವಾದ್ ಖಾನ್ ಪರ ಬ್ಯಾಟ್ ಬೀಸಿದ್ದಾರೆ.
‘ಸಿತಾರೆ ಜಮೀನ್ ಪರ್’ ರಿಲೀಸ್ಗೆ ದಿನಾಂಕ ಫಿಕ್ಸ್: 2007ರಲ್ಲಿ ಆಮಿರ್ ಖಾನ್ ನಟನೆ-ನಿರ್ದೇಶನದ ‘ತಾರೆ ಜಮೀನ್ ಪರ್’ ಸಿನಿಮಾ ಬಿಡುಗಡೆಯಾಗಿ ಗಮನ ಸೆಳೆದಿತ್ತು. ಈಗ ಅದರ ಸೀಕ್ವೆಲ್ ‘ಸಿತಾರೆ ಜಮೀನ್ ಪರ’ ಸಿನಿಮಾ ಸಿದ್ದವಾಗಿದೆ. ಈ ಸಿನಿಮಾ ಘೋಷಣೆ ಆದಾಗಿನಿಂದ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿತ್ತು. ಈಗ ‘ಸಿತಾರೆ ಜಮೀನ್ ಪರ್’ ಚಿತ್ರತಂಡದಿಂದ ಅಪ್ಡೇಟ್ ಬಂದಿದೆ. ಈ ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆ ಆಗಿದ್ದು, ಚಿತ್ರದ ರಿಲೀಸ್ ಡೇಟ್ ಕೂಡ ಘೋಷಿಸಲಾಗಿದೆ. ಜೂನ್ 20ರಂದು ‘ಸಿತಾರೆ ಜಮೀನ್ ಪರ್’ ಬಿಡುಗಡೆ ಆಗಲಿದೆ
ಆಸ್ಪತ್ರೆಗೆ ದಾಖಲಾದ ರಿಯಲ್ ಸ್ಟಾರ್ ಉಪೇಂದ್ರ: ಸ್ಟಾರ್ ಉಪೇಂದ್ರ ದಿಢೀರ್ ಅಂತ ಆಸ್ಪತ್ರೆಗೆ ದಾಖಲಾಗಿದ್ದಾರೆ. ಓವರ್ ಌಸಿಡಿಟಿಯಿಂದ ಉಪೇಂದ್ರ ಆರೋಗ್ಯದಲ್ಲಿ ಏರುಪೇರಾಗಿದ್ದು ಅವರನ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಸದ್ಯ ಉಪ್ಪಿ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು ಅಭಿಮಾನಿಗಳು ಆತಂಕ ಪಡೋ ಅಗತ್ಯ ಇಲ್ಲ ಅಂತ ಉಪೇಂದ್ರ ಕುಟುಂಬದವರು ತಿಳಿಸಿದ್ದಾರೆ.