ಮಹಿಷನ ಅವತಾರದಲ್ಲಿ ಪ್ರಜ್ವಲ್ ದೇವರಾಜ್: ಯಕ್ಷಗಾನ ಕಲಾವಿದನಾದ ಡೈನಾಮಿಕ್ ಪ್ರಿನ್ಸ್!

ಮಹಿಷನ ಅವತಾರದಲ್ಲಿ ಪ್ರಜ್ವಲ್ ದೇವರಾಜ್: ಯಕ್ಷಗಾನ ಕಲಾವಿದನಾದ ಡೈನಾಮಿಕ್ ಪ್ರಿನ್ಸ್!

Published : Apr 11, 2024, 04:26 PM IST

ಮೊಟ್ಟ ಮೊದಲ ಬಾರಿಗೆ ಪ್ರಜ್ವಲ್ ದೇವರಾಜ್ ಯಕ್ಷಗಾನ ವೇಷಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ಗುರುದತ್ ಗಾಣಿಗ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕರಾವಳಿ ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ.

ಯಕ್ಷಗಾನ ನಮ್ಮ ನಾಡಿಕ ಕಲೆ. ಕರಾವಳಿ ಮಲೆನಾಡು ಭಾಗದ ಜೀವಸೆಲೆ. ಈ ಯಕ್ಷಗಾನ ಕಲೆ ಎಲ್ಲರನ್ನು ಸೆಳೆಯುತ್ತೆ. ಸಿನಿಮಾದಲ್ಲಿ ಆಗೊಂದು ಈಗೊಂದು ದೃಶ್ಯದಲ್ಲಿ ಯಕ್ಷಗಾನ ಬಂದು ಹೋಗುತ್ತಿತ್ತು. ಆದ್ರೆ ಈಗ ಅದೇ ಯಕ್ಷಗಾನ ಕಲೆಯ ಸುತ್ತಲೆ ಕನ್ನಡದಲ್ಲಿ ಹೊಸ ಸಿನಿಮಾ ಸಿದ್ಧವಾಗುತ್ತಿದೆ. ಆ ಸಿನಿಮಾದಲ್ಲಿ ಹೀರೋ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್. ಇದೀಗ ಯುಗಾಧಿ ಹಬ್ಬದ ನಿಮಿತ್ತ ಪ್ರಜ್ವಲ್ ದೇವರಾಜ್ ಮಹಿಷನ ಅವತಾರದಲ್ಲಿ ಯಕ್ಷಗಾನ ಕಲಾವಿಧನಾಗಿ ಬಂದಿದ್ದಾರೆ. ಇದು ಪ್ರಜ್ವಲ್ ದೇವರಾಜ್ ನಟಿಸುತ್ತಿರೋ ಕರಾವಳಿ ಸಿನಿಮಾದ ಮಹಿಷನ ಲುಕ್.

ಈ ಲುಕ್ ನೋಡಿದ್ರೆ ನಿಜಕ್ಕೂ ಪ್ರಜ್ವಲ್ ಅವರೇನಾ ಎಂದು ಅಚ್ಚರಿ ಆಗುತ್ತೆ. ಮೊಟ್ಟ ಮೊದಲ ಬಾರಿಗೆ ಪ್ರಜ್ವಲ್ ದೇವರಾಜ್ ಯಕ್ಷಗಾನ ವೇಷಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ಗುರುದತ್ ಗಾಣಿಗ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕರಾವಳಿ ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಸದ್ಯ ಪ್ರಜ್ವಲ್ ದೇವರಾಜ್ ಅವರ ಹೊಸ ಲುಕ್ ರಿವೀಲ್ ಮಾಡುವ ಮೂಲಕ ಸಿನಿಮಾತಂಡ ನಿರೀಕ್ಷೆ ದುಪ್ಪಟ್ಟು ಮಾಡಿದೆ. ಕಂಬಳದ ಜೊತೆಗೆ ಯಕ್ಷಗಾನ ಕೂಡ ಕರಾವಳಿ ಸಿನಿಮಾದ ಹೈಲೈಟ್. ಅಂದಹಾಗೆ ಈ ಲುಕ್ ಅನ್ನು  ಪ್ರೊಫೆಷನಲ್ ಕಲಾವಿದರೇ ಮಾಡಿದ್ದು ವಿಶೇಷ. 

ಯಕ್ಷಗಾನ ಭಾಗವತರೇ ಆಗಿರುವ ಪಲ್ಲವ ಗಾಣಿಗ ಎನ್ನುವರು ಈ ಲುಕ್ ಡಿಸೈನ್ ಮಾಡಿದ್ದಾರೆ. ಪ್ರಜ್ವಲ್ ಅವರಿಗೆ ಈ ಲುಕ್ ಡಿಸೈನ್ ಮಾಡಲು ಅರ್ಥ ದಿನಾ ತೆಗೆದುಕೊಂಡಿದ್ದಾರೆ. ಕರಾವಳಿ ಮನುಷ್ಯ ಹಾಗೂ ಪ್ರಾಣಿಯ ಮಧ್ಯೆ ನಡೆಯುವ ಸಂಘರ್ಷದ ಕಥೆ. ಪಕ್ಕಾ ಹಳ್ಳಿ ಬ್ಯಾಕ್ ಡ್ರಾಪ್ ನಲ್ಲಿ ಮೂಡಿ ಬರಲಿದೆ. ಕರಾವಳಿ ಸಿನಿಮಾಗೆ ಅಭಿಮನ್ಯು ಸದಾನಂದ್ ಕ್ಯಾರೆಮಾ ವರ್ಕ್ ಇದೆ,  ಸಚಿನ್ ಬಸ್ರೂರು ಸಂಗೀತ ಚಿತ್ರಕ್ಕಿದೆ. ಇನ್ನು ಉಳಿದಂತೆ ಈ ಸಿನಿಮಾದಲ್ಲಿ  ನಟ ಮಿತ್ರ, ಟಿವಿ ಶ್ರೀಧರ್, ಜಿ ಜಿ, ನಿರಂಜನ್ ಸೇರಿದಂತೆ ಹಲವು ಪ್ರಖ್ಯಾತ ಕಲಾವಿದರು ನಟಿಸುತ್ತಿದ್ದಾರೆ.

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more