Dec 14, 2023, 9:11 AM IST
ಇಷ್ಟು ದಿನ ಕಾಂತಾರ ಪ್ರೀಕ್ವೆಲ್ ಸ್ಟೋರಿ ಸಿದ್ಧಪಡಿಸೋದು ಲೋಕೇಷನ್ ಹಂಟಿಂಗ್ ಮಾಡೋದ್ರಲ್ಲಿ ಬ್ಯುಸಿ ಇದ್ದ ಶೆಟ್ರು ಕಾಂತಾರಕ್ಕೆ ಮುಹೂರ್ಥ ಮಾಡಿದ್ರು. ಈಗ ಕಲಾವಿದರ ಆಯ್ಕೆಗೆ ಆಡಿಷನ್ ಕರೆದಿದ್ದಾರೆ. ನಿಮ್ಗೆ ಕಾಂತಾರ ಪ್ರೀಕ್ವೆಲ್‌ನಲ್ಲಿ ನಟಿಸೋ ಆಸೆ ಇದ್ಯಾ..? ರಿಷಬ್ ಶೆಟ್ಟಿ ಮಾಡೋ ಎಕ್ಸಾಂನಲ್ಲಿ ಪಾಸ್ ಆದ್ರೆ ಆ ಚಾನ್ಸ್ ನಿಮ್ಮದೇ ಆಗುತ್ತೆ. ಕಾಂತಾರ(Kantara) ಪ್ರೀಕ್ವೆಲ್ಗೆ ಕಲಾವಿಧರು ಬೇಕಾಗಿದ್ದಾರೆ ಅಂತ ರಿಷಬ್ ಶೆಟ್ಟಿ ಅನೌನ್ಸ್ ಮಾಡಿದ್ದೇ ತಡ. ಭಾರತೀಯ ಚಿತ್ರರಂಗದ ಸ್ಟಾರ್ ನಟಿಯರೆಲ್ಲಾ ನಮಗೂ ಒಂದು ಚಾನ್ಸ್ ಕೊಡಿ ಅಂತ ರಿಷಬ್ಗೆ ಬೇಡಿಕೆ ಇಟ್ಟಿದ್ದಾರೆ. ಸೌತ್ನ ಹಾಟ್ ಬ್ಯೂಟಿ ಸ್ಯಾಂಡಲ್‌ವುಡ್‌ನ ಹಬಿಬಿ ಪಾಯಲ್ ರಜಪೂತ್(Payal Rajput) ಈ ಲೀಸ್ಟ್‌ನಲ್ಲಿ ಫಸ್ಟ್ ಇದ್ದಾರೆ. ಸೌತ್ ಸುಂದರಿ ಪಾಯಲ್ ರಜಪೂತ್ ಕನ್ನಡದ ಹೆಡ್ಬುಷ್ ಸಿನಿಮಾದಲ್ಲಿ ಡಾಲಿ ಗ್ಯಾಂಗ್ ಸೇರಿ ಕನ್ನಡ ಸಿನಿ ಪ್ರೇಕ್ಷಕರ ಹಬಿಬಿ ಆದ್ರು. ಪಾಯಲ್ ಎಂಥದ್ದೇ ಪಾತ್ರ ಕೊಟ್ರು ನಿಭಾಯಿಸೋ, ಬೋಲ್ಡ್ ಮತ್ರದಲ್ಲಿ ಮತ್ತಷ್ಟು ಬೋಲ್ಡ್ ಆಗಿ ಅಭಿನಯಿಸೋ ಹೀರೋಯಿನ್. ಈಗ ರಿಷಬ್ ಶೆಟ್ಟಿ( Rishab Shetty) ಕಾಂತಾರಕ್ಕೆ ಕಲಾವಿಧರ ಆಯ್ಕೆಗೆ ಕಾಲ್ಫರ್ ಮಾಡ್ತಿದ್ದಂತೆ ನನಗೂ ಒಂದು ಚಾನ್ಸ್ ಕೊಡಿ ಅಂತ ಟ್ವಿಟರ್ನಲ್ಲಿ ರಿಷಬ್ ಶೆಟ್ಟಿಗೆ ಕೇಳಿಕೊಂಡಿದ್ದಾರೆ.ಕಾಂತಾರ ಚಾಪ್ಟರ್ 1 ಸಿನಿಮಾಗೆ ಆಡಿಷನ್ ನಡೆಯುತ್ತಿರುವ ಬಗ್ಗೆ ತಿಳಿಯಿತು. ಈ ಸಿನಿಮಾಗೆ ನಾನು ಕೊಡುಗೆ ನೀಡಬೇಕು ಎಂದು ಬಯಸಿದ್ದೇನೆ. ಇತ್ತೀಚೆಗೆ ಬಿಡುಗಡೆಯಾದ ‘ಮಂಗಳವಾರಂ’ ಸಿನಿಮಾದಲ್ಲಿ ನನ್ನ ನಟನೆ ಮೆಚ್ಚುಗೆಗೆ ಪಾತ್ರವಾಗಿದೆ. ಸಮಯ ಮಾಡಿಕೊಂಡು ಈ ಸಿನಿಮಾ ನೋಡಿ. ಆಡಿಷನ್ ಬಗ್ಗೆ ನನಗೆ ಸಲಹೆ ನೀಡಿ ಎಂದು ಟ್ವೀಟ್ ಮಾಡಿದ್ದಾರೆ. ಇನ್ನೂ ಕಾರುಣ್ಯ ರಾಮ್(Karunya Ram) ಸಹ ಅಭಿನಯಿಸೋಕೆ ಒಂದು ಚಾನ್ಸ್ ಕೊಡಿ ಎಂದು ಟ್ವೀಟ್ ಮೂಲಕ ರಿಷಬ್ ಶೆಟ್ಟಿ ಕೇಳಿಕೊಂಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ನಿರ್ಮಾಣ ಆಗುತ್ತಿರೋ ಕಾಂತಾರ ಪ್ರೀಕ್ಚೆಲ್ ಶೂಟಿಂಗ್ ಜನವರಿಯಿಂದ ಶುರುವಾಗುತ್ತೆ. ಸದ್ಯಯ ಕಾಂತಾರದ ಮೈನ್ ಲೀಡ್ ರೋಲ್‌ಗಳ ಆಯ್ಕೆ ನಡೆದಿದೆ ಅಂತ ಹೇಳಲಾಗ್ತಿದೆ.
ಇದನ್ನೂ ವೀಕ್ಷಿಸಿ: Today Horoscope: ಇಂದು ಲಕ್ಷ್ಮೀ ಪ್ರಾರ್ಥನೆ ಮಾಡಿ..ಇದರಿಂದ ಸಿಗುಲ ಫಲಗಳೇನು ಗೊತ್ತಾ ?