Aug 1, 2023, 2:53 PM IST
ಅಭಿಮಾನಿಗಳು ಕೆಲವೊಮ್ಮೆ ವಿಪರೀತವಾಗಿ ವರ್ತಿಸುತ್ತಾರೆ. ಆಂಧ್ರದಲ್ಲಿ ಪವನ್ ಕಲ್ಯಾಣ್ ಫ್ಯಾನ್ಸ್ ಥಿಯೇಟರ್ ಸ್ಕ್ರೀನಿಗೆ ಹಾಲಿನ ಅಭಿಷೇಕ ಮಾಡಿ ಅವಾಂತರ ಮಾಡಿದ್ದಾರೆ. ಟಾಲಿವುಡ್ ನಟ ಪವನ್ ಕಲ್ಯಾಣ್(pawan kalyan) ಅವರ ಬ್ರೋ ಸಿನಿಮಾ ಜುಲೈ 28ರಂದು ರಿಲೀಸ್ ಆಗಿದೆ. ನಟ ಹಾಗೂ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಪವನ್ ಕಲ್ಯಾಣ್ ಅವರ ಅಭಿಮಾನಿಗಳು(Fans) ಅವರ ಸಿನಿಮಾ ರಿಲೀಸ್ ಅನ್ನು ಸಂಭ್ರಮಿಸಿದ್ದಾರೆ. ಅವರ ಅಭಿಮಾನಿಗಳು ನಟನನ್ನು ಮತ್ತೆ ಸಿನಿಮಾ ಥಿಯೇಟರ್ನಲ್ಲಿ ನೋಡಲು ಎಕ್ಸೈಟ್ ಆಗಿದ್ದಾರೆ. ಆದರೆ ಅಭಿಮಾನಿಗಳ ಎಕ್ಸೈಟ್ಮೆಂಟ್ ಸ್ವಲ್ಪ ಹೆಚ್ಚಾಗಿ ಪೊಲೀಸರು ಬರುವಂತಾಗಿದೆ. ಫ್ಯಾನ್ಸ್ ಅಂದ್ರೆ ಹೀಗೆ, ಅವರ ನೆಚ್ಚಿನ ಸ್ಟಾರ್ ಸಿನಿಮಾ ರಿಲೀಸ್ ಆಗ್ತಿದೆ ಅಂದ್ರೆ ಹುಚ್ಚೆದ್ದು ಕುಣೀತಾರೆ. ಕುಡಿದು ಬಂದು ಇಂಥಾ ಹುಚ್ಚಾಟಗಳನ್ನೂ ಮಾಡ್ತಾರೆ. ಮೊನ್ನೆ ಮೊನ್ನೆಯಷ್ಟೆ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಬ್ರೋ ಸಿನಿಮಾ(Bro Movie) ರಿಲೀಸ್ ಆಯ್ತು. ಈ ಸಿನಿಮಾ ರಿಲೀಸ್ ದಿನ ಪವನ್ ಅಭಿಮಾನಿಗಳನ್ನು ಕಂಟ್ರೋಲ್ ಮಾಡೋದೆ ದೊಡ್ಡ ಹರಸಾಹಸ ಆಗಿತ್ತು ಥಿಯೇಟರ್ ನವರಿಗೆ. ಥಿಯೇಟರ್ ಮಾಲೀಕರಂತೂ ಪವನ್ ಫ್ಯಾನ್ಸ್ ಹುಚ್ಚಾಟಕ್ಕೆ ರೋಸಿಹೋಗಿದ್ದರು.
ಇದನ್ನೂ ವೀಕ್ಷಿಸಿ: ರವಿ-ಶಿವು 40 ವರ್ಷದ ಸ್ನೇಹ ಎಷ್ಟು ಗಟ್ಟಿ ಗೊತ್ತಾ ?: ಇಬ್ಬರ ಮಧ್ಯೆ ಫ್ರೆಂಡ್‌ಶಿಪ್ ಬೆಳದದ್ದು ಹೇಗೆ ?