ಪವಿತ್ರಾಗೆ ಸಿಕ್ಕಿತ್ತಾ ತೂಗುದೀಪ ಮನೆಯ ‘ಚಿಕ್ಕಸೊಸೆ’ ಪಟ್ಟ? ದರ್ಶನ್ ತಾಯಿ & ಸೋದರಿ ಜೊತೆ ಪವಿ ಸಲುಗೆ?

Dec 25, 2024, 3:55 PM IST

ದರ್ಶನ್​ ಕೊಲೆ ಆರೋಪ ಹೊತ್ತು ಜೈಲು ಸೇರುವಂತೆ ಆಗಿದ್ದು ಪವಿತ್ರಾ ಗೌಡ ದೆಸೆಯಿಂದ. ದರ್ಶನ್ ಫ್ಯಾಮಿಲಿ ಪವಿತ್ರಾಳನ್ನ ಮೊದಲಿಂದಲೂ ದೂರವಿಟ್ಟುಬಿಟ್ಟಿದ್ರೆ ದರ್ಶನ್ ಬದುಕಲ್ಲಿ ಇಂಥಾ ಅನಾಹುತ ನಡೀತಾನೇ ಇರ್ಲಿಲ್ಲ ಅನ್ನೋದು ಅಭಿಮಾನಿಗಳ ಮಾತು. ಆದ್ರೆ ಅಚ್ಚರಿ ಅಂದ್ರೆ ತೂಗುದೀಪ ಫ್ಯಾಮಿಲಿ ಪವಿತ್ರಾಳನ್ನ ಚಿಕ್ಕಸೊಸೆ ಅಂತ ಒಪ್ಪಿಕೊಂಡು ಬಿಟ್ಟಿತ್ತು. 2014ರಿಂದಲೂ ರಿಲೇಷನ್​ ಶಿಪ್​ನಲ್ಲಿದ್ದ ಪವಿತ್ರಾನ ದರ್ಶನ್ ತನ್ನ ತಾಯಿ ಮತ್ತು ಸೋದರಿಗೆ ಪರಿಚಯ ಮಾಡಿಸಿದ್ರು. ಇವರು ಕೂಡ ಪವಿತ್ರಾಳನ್ನ ಅಯ್ಯೋ ನನ್ನ ಮುದ್ದಿನ ಕೂಸೆ.. ಚಿಕ್ಕ ಸೊಸೆ ಅಂತೆಲ್ಲಾ ಮುದ್ದು ಮಾಡಿದ್ರು.ದರ್ಶನ್ ಸೋದರಿ ದಿವ್ಯಾ ಮತ್ತು ತಾಯಿ ಮೀನಾ ತೂಗಿದೀಪ ಜೊತೆಗಿರುವ ಫೋಟೋಗಳನ್ನ ಖುದ್ದು ಪವಿತ್ರಾ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಾಕಿದ್ದರು. ಮುಂದೆ ವಿಜಯಲಕ್ಷ್ಮೀ ಹೆದರಿಕೊಂಡು ಡಿಲೀಟ್ ಮಾಡಿದ್ದರು. ಸದ್ಯ ಈ ಹಳೆಯ ಫೋಟೋಸ್ ವೈರಲ್ ಆಗ್ತಾ ಇದೆ.

ಕಿರುತೆರೆ ನಟಿ ದೀಪಾ ಭಾಸ್ಕರ್ ಕುಟುಂಬದ ಬಗ್ಗೆ ಯಾರಿಗೂ ಗೊತ್ತಿರದ ನೋವಿನ ವಿಷಯ ಇದು