ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?

ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?

Published : Nov 13, 2025, 01:23 PM ISTUpdated : Nov 13, 2025, 03:55 PM IST

ಕಳೆದ ಕೆಲ ದಿನಗಳಿಂದ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲ್ ವಿಷ್ಯ ದೇಶಾದ್ಯಂತ ಸದ್ದು ಮಾಡಿದೆ. ಜೈಲು ಒಳಗಿರೋ ಕೈದಿಗಳಿಗೆ ರಾಜಾತಿತ್ಯ ನೀಡಲಾಗ್ತಾ ಇದೆ ಅನ್ನೋದು ಲೀಕ್ ಆಗಿರೋ ವಿಡಿಯೋಗಳ ಮೂಲಕ ಜಗಜ್ಜಾಹೀರಾಗಿವೆ. ಏನೇನು ಆಗಿದೆ? ಸ್ಟೋರಿ ನೋಡಿ..

ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲ್ ಒಳಗಿನ ಕೈದಿಗಳ ಕಳ್ಳಾಟ ದ ವಿಡಿಯೋ ಗಳು ಹೊರಬಂದು ಅಲ್ಲೋಲ ಕಲ್ಲೋಲ ಮಾಡಿವೆ. ಟೆರರಿಸ್ಟ್ ಗಳ ಕೈಗೆ ಮೊಬೈಲ್ ಸಿಗ್ತಾ ಇದೆ ಅನ್ನೋ ವಿಷ್ಯ ದೇಶವನ್ನೇ ಬೆಚ್ಚಿ ಬೀಳಿಸಿದೆ. ಅಸಲಿಗೆ ಈ ಜೈಲು ಕಳ್ಳಾಟ ಹೊರ ಬೀಳೋದಕ್ಕೆ ದರ್ಶನ್ ಅಸಲಿ ಕಾರಣನಾ..? ದಾಸನ ನೆಪದಿಂದ ಪರಪ್ಪನ ಅಗ್ರಹಾರ ಕ್ಲೀನ್ ಆಯ್ತಾ..? ಆ ಎಕ್ಸ್ ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.

ಎಸ್ ಕಳೆದ ಕೆಲ ದಿನಗಳಿಂದ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲ್ ವಿಷ್ಯ ದೇಶಾದ್ಯಂತ ಸದ್ದು ಮಾಡಿದೆ. ಜೈಲು ಒಳಗಿರೋ ಕೈದಿಗಳಿಗೆ ರಾಜಾತಿತ್ಯ ನೀಡಲಾಗ್ತಾ ಇದೆ ಅನ್ನೋದು ಲೀಕ್ ಆಗಿರೋ ವಿಡಿಯೋಗಳ ಮೂಲಕ ಜಗಜ್ಜಾಹೀರಾಗಿವೆ.

ಅಸಲಿಗೆ ಈ ಜೈಲುಗಳ ಖರಾಬ್ ಕಥೆ ಹೊರ ಬರೋದಕ್ಕೆ ಕಾರಣ ದಾಸ ಅಂದರ್ ಆಗಿರೋದು. ಕಳೆದ ಸಾರಿ ದರ್ಶನ್ , ರೌಡಿಗಳ ಟೀಮ್ ಜೊತೆ ದಂ ಹೊಡೀತಾ ಕೂತ ಫೋಟೋಸ್ ಹೊರಬಂದು ಹಲ್ ಚಲ್ ಎಬ್ಬಿಸಿದ್ವು.

ಆಗ ದಾಸನನ್ನ ಬಳ್ಳಾರಿಗೆ ಎತ್ತಂಗಡಿ ಮಾಡಲಾಗಿತ್ತು. ಅದರ ಜೊತೆಗೆ ಪರಪ್ಪನ ಅಗ್ರಹಾರ ಕೂಡ ಕ್ಲೀನ್ ಆಗಿತ್ತು. ಬೃಷ್ಟ ಅಧಿಕಾರಿಗಳು ಸಸ್ಪೆಂಡ್ ಆಗಿ ಮನೆ ಸೇರಿದ್ರು.

ಟೆರರಿಸ್ಟ್, ರೇಪಿಸ್ಟ್ ಗಳಿಗೆ ನಡುಕ ಹುಟ್ಟಿಸಿದ ಡೆವಿಲ್..!
ಈ ಸಾರಿಯಂತೂ ಪರಪ್ಪನ ಅಗ್ರಹಾರದಲ್ಲಿ ರೇಪಿಸ್ಟ್ ಉಮೇಶ್ ರೆಡ್ಡಿ , ಐಸಿಸ್ ಟೆರರಿಸ್ಟ್ ಜುಹಾದ್ ಹಮೀದ್ ಶಕೀಲ್ ಮನ್ನಾ ಸೇರಿದಂತೆ ಜೈಲ್ ನಲ್ಲಿರೋ ಕೈದಿಗಳಿಗೆಲ್ಲ ಮೊಬೈಲ್ ಸೇರಿದಂತೆ ಸೌಲತ್ತು ಕೊಟ್ಟಿರೋ ವಿಡಿಯೋ ಹೊರಬಂದಿವೆ.

ಹೌದು ದರ್ಶನ್ ಗೆ ಈ ಸಾರಿ ಪರಪ್ಪನ ಅಗ್ರಹಾರದಲ್ಲಿ ನೆಟ್ಟಗೆ ಹಾಸಿಗೆ, ದಿಂಬು ಕೂಡ ಕೊಡ್ತಾ ಇಲ್ಲ. ಈ ಬಗ್ಗೆ ಕೋರ್ಟ್ನ ನಲ್ಲಿ ಪದೇ ಮನವಿ ಮಾಡಿದ್ರು ಪ್ರಯೋಜನ ಆಗಿಲ್ಲ. ಆದ್ರೆ ಬೇರೆ ಕೈದಿಗಳಿಗೆ, ಅದರಲ್ಲೂ ನಟೋರಿಯಸ್ ಕ್ರಿಮಿನಲ್ ಗಳಿಗೆ ಬೇಕಿದ್ದೆಲ್ಲಾ ಸಿಕ್ತ ಇದೆ.

ದರ್ಶನ್ ಗೆ ಅನ್ಯಾಯ ಆಗ್ತಾ ಇದೆ ಅಂತ , ಅವರ ಬಂಟ ಧನ್ವೀರ್ ಜೈಲ್ ನಲ್ಲಿರೋ ವಿಡಿಯೋ ವೈರಲ್ ಮಾಡಿದ್ದಾರೆ ಅಂತ ಸಿಸಿಬಿ ವಿಚಾರಣೆ ಮಾಡಿದೆ. ದಾಸನಿಗೆ ಸಿಗದೇ ಇದ್ದಿದ್ದು ಯಾರಿಗೂ ಸಿಗಬಾರದು ಅಂತ ಧನ್ವೀರ್ ಹೀಗೆ ಮಾಡಿದ್ರು ಎನ್ನಲಾಗ್ತಾ ಇದೆ

ಪೊರ್ಕಿ ಚಿತ್ರದಲ್ಲಿ ಕೈದಿಗಳ ಕಳ್ಳಾಟ ಬಯಲು ಮಾಡಿದ್ದ ದಚ್ಚು; ಈಗ ಖೈದಿಯಾಗಿ ಪರಪ್ಪನ ಅಗ್ರಹಾರ ಕ್ಲೀನ್ ಮಾಡಿದ್ರಾ ದಾಸ..?

ನಿಮಗೆಲ್ಲ ದರ್ಶನ್ ನಟನೆಯ ಪೊರ್ಕಿ ಸಿನಿಮಾ ನೆನಪಿದೆ ಅಲ್ವಾ. ಪೋರ್ಕಿಗಳ ಜೊತೆ ಸೇರಿ ಪೋರ್ಕಿಗಳ ಬಂಡವಾಳ ಬಯಲು ಮಾಡೋ ಪೊಲೀಸ್ ಕಥೆ ಅದು. ದರ್ಶನ್ ಅಲ್ಲಿ ಪೊರ್ಕಿ ಪೊಲೀಸ್ ಆಗಿ ಮಿಂಚಿದ್ರು..

ದರ್ಶನ್ ನೆಪದಿಂದ ಕ್ಲೀನ್ ಆಯ್ತಾ ಪರಪ್ಪನ ಅಗ್ರಹಾರ..?
ಈಗ ಕೈದಿಗಳ ಜೊತೆ ಕೈದಿಯಾಗಿ ಜೈಲಿನ ಕಳ್ಳಾಟ ಬಯಲು ಮಾಡ್ತಾ ಇದ್ದಾರೆ ದರ್ಶನ್. ಹಾಗಂತ ದರ್ಶನ್ ಏನೂ ತಪ್ಪು ಮಾಡದೇ ಜೈಲು ಸೇರಿದ್ದಾರೆ ಅಂತ ಅಲ್ಲ. ತನ್ನ ತಪ್ಪಿಗೆ ತಕ್ಕ  ಶಿಕ್ಷೆ ಅನುಭವಿಸ್ತಾ ಇದ್ದಾರೆ. ಈ ನಡುವೆ ಪರೋಕ್ಷ ವಾಗಿ ಜೈಲು ಕ್ವೀನ್ ಮಾಡ್ತಾ ಇದಾರೆ. ಇದನ್ನ ಆಪರೇಷನ್ ಜೈಲು ' ದರ್ಶನ ' ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ದರ್ಶನ್​​ ಜೈಲು ಸೇರಿದ ಮೇಲೆ ಪರಪ್ಪನ ಅಗ್ರಹಾರ ಕರ್ಮಕಾಂಡಗಳೆಲ್ಲಾ ಬಯಲಿಗೆ ಬರುತ್ತಿವೆ ಅಂತ ಅವರ ಫ್ಯಾನ್ಸ್​ ಬಳಹ ಹೇಳುತ್ತಿದೆ. 

05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
03:23ಟಾಕಿಂಗ್ ಸ್ಟಾರ್ ಸೃಜನ್​ ಲೋಕೇಶ್ ಸಿನಿಮಾದ ಸ್ಪೆಷಲ್ ಸಾಂಗ್ ಬಿಡುಗಡೆ
Read more