Sep 5, 2023, 9:20 AM IST
ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್‌ಗೆ(Pawan Kalyan) 52ನೇ ಬರ್ತ್ ಡೇ ಸಂಭ್ರಮ. ಈ ಹಬ್ಬದಂದೇ ಪವನ್ ಕಲ್ಯಾಣ್ ಅವರ ಬಹು ನಿರೀಕ್ಷಿತ ಓಜಿ ಸಿನಿಮಾದ(OG Cinema) ಟೀಸರ್ ಔಟ್ ಆಗಿದೆ. ಹೌದು, ತೆಲುಗು ಸಿನಿರಂಗದ ಖ್ಯಾತ ನಟ, ಜನಸೇನ ಮುಖ್ಯಸ್ಥ ಪವನ್ ಕಲ್ಯಾಣ್ ಅಭಿಮಾನಿಗಳು ಇಷ್ಟು ದಿನ ಅವರನ್ನ ಮಾಸ್ ಲುಕ್‌ನಲ್ಲಿ ತೆರೆ ಮೇಲೆ ನೋಡ್ಬೇಕು ಅಂತ ಕಾತುರದಿಂದ ಕಾಯುತ್ತಿದ್ದರು. ಅವರ ಆಸೆಯಂತೆ ಬಹಳ ದಿನಗಳ ಬಳಿಕ ಕೈಯಲ್ಲಿ ಕತ್ತಿ ಹಿಡಿದು ರಕ್ತದೊಕುಳಿ ನಡೆಸಿರುವ ಪವರ್‌ಸ್ಟಾರ್ OG ಲುಕ್ ಫ್ಯಾನ್ಸ್ ಮನ ಗೆದ್ದಿದೆ. ಓಜಿ ಟೀಸರ್ನ ಸ್ಟಾರ್ಟ್ ಆಗೋದೇ ಮುಂಬೈನ(Mumbai) ಅಂಡರ್ವಲ್ಡ್ನಿಂದ. ಟೀಸರ್ ಪೂರ್ತಿ, ಭರ್ಜರಿ ಬಿಜಿಎಂ, ದೃಶ್ಯವೈಭವ, ಖಡಕ್ ಡೈಲಾಗ್ಗೆ ಪ್ರೇಕ್ಷಕ ಫುಲ್ ಫಿದಾ ಆಗಿದ್ದಾನೆ. ಡಿವಿವಿ ಎಂಟರ್ ಟೈನ್ ಮೆಂಟ್ ಬಂಡವಾಳ ಹೂಡಿರುವ ಈ ಚಿತ್ರವನ್ನು ಸುಜೀತ್ ಅವರು ನಿರ್ದೇಶಿಸಿದ್ದಾರೆ. ಕಥೆಯ ಜವಾಬ್ದಾರಿ ಕೂಡ ನಿರ್ದೇಶಕ ಸುಜೀತ್ ಅವರದ್ದೇ. ತಮನ್ ಎಸ್ ಅವರ ಸಂಗಿತ ಓಜಿ ಚಿತ್ರಕ್ಕಿದೆ. ಬಹುನಿರೀಕ್ಷಿತ ಸಿನಿಮಾದ ಬಿಡುಗಡೆ ದಿನಾಂಕವನ್ನು ಇನ್ನಷ್ಟೇ ಘೋಷಿಸಬೇಕಿದೆ.
ಇದನ್ನೂ ವೀಕ್ಷಿಸಿ: Today Horoscope: ಇಂದು ಈ ರಾಶಿಯವರಿಗೆ ಪ್ರೀತಿ ವಿಚಾರದಲ್ಲಿ ಮನಸ್ತಾಪ ಬರಲಿದೆ..