ಅಣ್ಣನಿಗೆ ಯಾರೂ ಏನೂ ಮಾಡಕ್ಕಾಗಲ್ಲ: ದರ್ಶನ್ ಪರ ದಿನಕರ್ ತೂಗುದೀಪ ಬ್ಯಾಟಿಂಗ್

ಅಣ್ಣನಿಗೆ ಯಾರೂ ಏನೂ ಮಾಡಕ್ಕಾಗಲ್ಲ: ದರ್ಶನ್ ಪರ ದಿನಕರ್ ತೂಗುದೀಪ ಬ್ಯಾಟಿಂಗ್

Published : Oct 07, 2024, 12:53 PM IST

ದರ್ಶನ್ ಜೈಲು ಸೇರಿದಾಗಿನಿಂದಲೂ ಅವ್ರ ಸೋದರ ದಿನಕರ್ ತೂಗುದೀಪ , ಅಣ್ಣನ ಬೆಂಬಲಕ್ಕೆ ನಿಂತಿದ್ದಾರೆ. ಅತ್ತಿಗೆ ಜೊತೆಗೆ ಹೋಗಿ ಜೈಲಿನಲ್ಲಿ ದರ್ಶನ್ ಭೇಟಿ ಮಾಡಿಬಂದಿರೋ ದಿನಕರ್ , ದರ್ಶನ್​ಗೆ ಬೇಲ್ ಕೊಡಿಸೋದಕ್ಕೂ ಅವಿರತ ಪ್ರಯತ್ನ ಪಡ್ತಾ ಇದ್ದಾರೆ.

ದರ್ಶನ್ ಜೈಲು ಸೇರಿದಾಗಿನಿಂದಲೂ ಅವ್ರ ಸೋದರ ದಿನಕರ್ ತೂಗುದೀಪ , ಅಣ್ಣನ ಬೆಂಬಲಕ್ಕೆ ನಿಂತಿದ್ದಾರೆ. ಅತ್ತಿಗೆ ಜೊತೆಗೆ ಹೋಗಿ ಜೈಲಿನಲ್ಲಿ ದರ್ಶನ್ ಭೇಟಿ ಮಾಡಿಬಂದಿರೋ ದಿನಕರ್ , ದರ್ಶನ್​ಗೆ ಬೇಲ್ ಕೊಡಿಸೋದಕ್ಕೂ ಅವಿರತ ಪ್ರಯತ್ನ ಪಡ್ತಾ ಇದ್ದಾರೆ. ಈ ನಡುವೆ ದಿನಕರ್ ನಿರ್ದೇಶನದ ರಾಯಲ್ ಸಿನಿಮಾದ ಪ್ರಮೋಷನ್ಸ್​ ನಡೀತಾ ಇದ್ದು, ಪ್ರಚಾರದ ವೇಳೆ ದಿನಕರ್ , ಅಣ್ಣನ ಪರ ಬ್ಯಾಟ್ ಬೀಸಿದ್ದಾರೆ. ದರ್ಶನ್ ಮತ್ತವರ ಸೋದರ ದಿನಕರ್ ಸಂಬಂಧ ಎಂಥದ್ದು ಅಂತ ಇಡೀ ಸಿನಿ ಇಂಡಸ್ಟ್ರಿಗೆ ಗೊತ್ತಿದೆ. ದಿನಕರ್ ಚಿತ್ರರಂಗದಲ್ಲಿ ನೆಲೆನಿಲ್ಲೋದ್ರಲ್ಲಿ ದರ್ಶನ್ ಸಹಾಯ ತುಂಬಾನೇ ಇದೆ.  ದರ್ಶನ್​ಗೆ ಹೋಲಿಸಿದ್ರೆ ದಿನಕರ್ ಸಿಕ್ಕಾಪಟ್ಟೆ ಸೈಲೆಂಟ್ ವ್ಯಕ್ತಿ. 

ತಾನಾಯ್ತು ತನ್ನ ಕೆಲಸವಾಯ್ತು ಅಂದುಕೊಂಡು ವಿವಾದಗಳಿಂದ ದೂರ ಇರೋ ವ್ಯಕ್ತಿತ್ವ ಅವರದ್ದು. ಇಂಥಾ ದಿನಕರ್​ಗೆ ಅಣ್ಣನ ಕೃತ್ಯ ಶಾಕ್ ತಂದಿರೋದು ಸುಳ್ಳಲ್ಲ. ದರ್ಶನ್ ಜೈಲುಪಾಲಾದ ಮೇಲೆ ದಿನಕರ್ ಹಲವು ಬಾರಿ ಜೈಲಿಗೆ ಹಗಿ ಅಣ್ಣನನ್ನ ಭೇಟಿ ಮಾಡಿ ಬಂದಿದ್ದಾರೆ. ದರ್ಶನ್​ಗೆ ಧೈರ್ಯ ತುಂಬಿ ಬಂದಿದ್ದಾರೆ. ಈ ನಡುವೆ ದಿನಕರ್ ನಿರ್ದೇಶನದ ರಾಯಲ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಜಯಣ್ಣ ಕಂಬೈನ್ಸ್ ನಿರ್ಮಸಿರೋ ಈ ಸಿನಿಮಾದಲ್ಲಿ ವಿರಾಟ್ ನಾಯಕನಾಗಿ ಕಾಣಿಸಿಕೊಂಡಿದ್ದು, ಸಂಜನಾ ಅನಂದ್ ನಾಯಕಿಯಾಗಿ ಮಿಂಚಿದ್ದಾರೆ. ಇತ್ತೀಚಿಗೆ ತುಮಕೂರಿನಲ್ಲಿ ರಾಯಲ್ ಸಿನಿಮಾದ ಎರಡನೇ ಹಾಡಿನ ಬಿಡುಗಡೆ ಸಮಾರಂಭ ನಡೆದಿದೆ. ಈ ವೇಳೆ ಇವೆಂಟ್​​ನಲ್ಲಿ ದಿನಕರ್ ಮಾತನಾಡ್ತಾ ವೇಳೆ ದರ್ಶನ್ ಫ್ಯಾನ್ಸ್, ಡಿ ಬಾಸ್ ಡಿ ಬಾಸ್ ಅಂತ ಕೂಗಿದ್ದಾರೆ. 

ಇದಕ್ಕೆ ರಿಯ್ಯಾಕ್ಟ್ ಮಾಡಿರೋ ದಿನಕರ್, ನಮ್ಮ ಕುಟುಂಬದ ಮೇಲಿನ ಅಭಿಮಾನಕ್ಕೆ ಶರಣು. ನಿಮ್ಮ ಬೆಂಬಲ ಇರೋವರೆಗೂ ಅಣ್ಣನಿಗೆ ಏನೂ ಮಾಡಕ್ಕಾಗಲ್ಲ ಎಂದಿದ್ದಾರೆ. ದಿನಕರ್ ಆಡಿದ ಈ ಮಾತುಗಳ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೀತಾ ಇದೆ. ಕೇಸ್ ಮುಗಿಯೋವರೆಗೂ ಆರೋಪಿ ಅಣ್ಣನ ಪರ ದಿನಕರ್ ನಿಂತುಕೊಳ್ಳುವ ಅಗತ್ಯ ಇರಲಿಲ್ಲ ಅಂತ ಕೆಲವರು ಹೇಳಿದ್ರೆ, ಮತ್ತೆ ಕೆಲವರು ದಿನಕರ್ ಪರ ನಿಂತಿದ್ದಾರೆ. ಇನ್ನೂ ಇಮ್ಮ ನಿರ್ದೇಶನದ ರಾಯಲ್ ಸಿನಿಮಾ ಬಗ್ಗೆಯೂ ಮಾತನಾಡಿರೋ ದಿನಕರ್, ಈ ಸಿನಿಮಾಗೂ ನಿಮ್ಮ ಬೆಂಬಲ ಇರಲಿ ಅಂದಿದ್ದಾರೆ. ಈ ಸಿನಿಮಾದ ‘ಅಣ್ಣಂಗೆ ಟಾಂಗ್ ಕೊಡ್ತಿಯಲ್ಲೇ’ ಅನ್ನೋ ಸಾಂಗ್ ರಿಲೀಸ್ ಆಗಿದ್ದು ಸಖತ್ ಸದ್ದು ಮಾಡ್ತಾ ಇದೆ.

07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
Read more