Nirup Bhandari: ಶೀತ​ಲ್​ ಶೆಟ್ಟಿ ನಿರ್ದೇಶನದ ವಿಂಡೋಸೀಟ್‌ ಟ್ರೇಲರ್‌ ಬಿಡುಗಡೆ

Nirup Bhandari: ಶೀತ​ಲ್​ ಶೆಟ್ಟಿ ನಿರ್ದೇಶನದ ವಿಂಡೋಸೀಟ್‌ ಟ್ರೇಲರ್‌ ಬಿಡುಗಡೆ

Published : Jun 06, 2022, 10:45 PM IST

ನಟಿ ಹಾಗೂ ನಿರೂಪಕಿ ಶೀತ​ಲ್​ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ವಿಂಡೋಸೀಟ್​ ಸಿನಿಮಾ ಹಲವಾರು ಕಾರಣಗಳಿಂದ ಜನರಲ್ಲಿ ನಿರೀಕ್ಷೆ ಮೂಡಿಸಿದೆ. ಇದೀಗ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಕುತೂಹಲವನ್ನು ಹೆಚ್ಚು ಮಾಡುತ್ತಿದೆ. 

ನಟಿ ಹಾಗೂ ನಿರೂಪಕಿ ಶೀತ​ಲ್​ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ವಿಂಡೋಸೀಟ್​ ಸಿನಿಮಾ ಹಲವಾರು ಕಾರಣಗಳಿಂದ ಜನರಲ್ಲಿ ನಿರೀಕ್ಷೆ ಮೂಡಿಸಿದೆ. ಇದೀಗ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಕುತೂಹಲವನ್ನು ಹೆಚ್ಚು ಮಾಡುತ್ತಿದೆ. ಇನ್ನು ಇತ್ತೀಚೆಗಷ್ಟೇ ಟ್ರೈಲರ್ ಪ್ರೋಮೋ ಕೂಡ ರಿಲೀಸ್​ ಆಗಿದ್ದು, ಅದು ಕೂಡ ಬಹಳ ಅದ್ಭುತವಾಗಿ ಮೂಡಿಬಂದಿದೆ. ಈ ಬಗ್ಗೆ ನಿರ್ದೇಶಕಿ ಶೀತ​ಲ್​ ಶೆಟ್ಟಿ, ನಟ ನಿರೂಪ್​ ಭಂಡಾರಿ, ಅಮೃತಾ ಅಯ್ಯಂಗರ್ ಸೇರಿದಂತೆ ಚಿತ್ರತಂಡ ಚಿತ್ರದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ. ವಿಶೇಷವಾಗಿ ನಟ ರಿಷಬ್ ಶೆಟ್ಟಿ ಚಿತ್ರದ ಟ್ರೇಲರ್ ಕಾರ್ಯಕ್ರಮಕ್ಕೆ ಆಗಮಿಸಿ ಶುಭಕೋರಿದ್ದು, ಟ್ರೇಲರ್ ಬಗ್ಗೆ ಮಾತನಾಡಿದ್ದಾರೆ. 

ಸದ್ದು ಮಾಡುತ್ತಿದೆ 'ವಿಂಡೋಸೀಟ್' ಸಿನಿಮಾ ಟೀಸರ್!

ಇನ್ನು ಚಿತ್ರದ ಟ್ರೈಲರ್​ನಲ್ಲಿ ಜಗಳ, ಪ್ರೀತಿ, ಕೋಪ ಹೀಗೆ ಎಲ್ಲದರ ಮಿಶ್ರಣವನ್ನು ನೋಡಬಹುದಾಗಿದ್ದು, ಎಲ್ಲವನ್ನು ಎದುರಿಸಿ ಹೋರಾಡುವ ನಾಯಕ ರಘುವಿನ ಕಥೆಯೇ ಈ ವಿಂಡೋಸೀಟ್​. ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಿರೂಪ್ಗೆ ನಾಯಕಿಯಾಗಿ ಸಂಜನಾ ಆನಂದ್​ ಮತ್ತು ಅಮೃತಾ ಅಯ್ಯಂಗರ್​ ಅಭಿನಯಿಸುತ್ತಿದ್ದಾರೆ. ವಿಂಡೋಸೀಟ್​ ಮೂಲಕ ಕಥೆ ಹೇಳಲು ಹೊರಟಿರುವ ನಿರೂಪ್​ ಭಂಡಾರಿ ರಘು ಎಂಬ ಮ್ಯೂಜಿಷಿಯನ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ರವಿಶಂಕರ್​ ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶೀತಲ್​ ಶೆಟ್ಟಿ ಕಥೆ ಬರೆದು ನಿರ್ದೇಶಿಸುತ್ತಿರುವ ವಿಂಡೋಸೀಟ್​ ಚಿತ್ರಕ್ಕೆ ಮ್ಯೂಸಿಕ್​ ಮಾಂತ್ರಿಕ ಅರ್ಜುನ್​ ಜನ್ಯ ಅವರ ಸಂಗೀತವಿದೆ. ನಿರ್ಮಾಪಕ ಜಾಕ್​ ಮಂಜು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. 

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
Read more