Abhishek Ambareesh Wedding: ಅಂಬರೀಷ್ ನನಗೆ ದೊಡ್ಡಣ್ಣ: ಅಭಿಷೇಕ್ ಮದ್ವೆಲಿ ನರೇಶ್-ಪವಿತ್ರಾ ಜೋಡಿ

Jun 5, 2023, 2:37 PM IST

ರೆಬಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಅಂಬರೀಷ್ ಬಹುಕಾಲದ ಗೆಳತಿ ಅವಿವಾ ಬಿಡಪ ಜೊತೆ ಇಂದು (ಜೂನ್ 5) ದಾಂಪತ್ಯಕ್ಕೆ ಕಾಲಿಟ್ಟರು. ಇಂದು ಬೆಳಗ್ಗೆ 9:30 ರಿಂದ 10:30 ವರೆಗೆ ನಡೆದ ಮುಹೂರ್ತದಲ್ಲಿ ಅಭಿಷೇಕ್ ಮತ್ತು ಅವಿವಾ ಪತಿ-ಪತ್ನಿಯರಾದರು. ಅಭಿ-ಅವಿವಾ ಮದುವೆಗೆ ಅನೇಕ ಗಣ್ಯರು ಹಾಜರಾಗಿ ಶುಭಹಾರೈಸಿದ್ದಾರೆ. ಮತ್ತೆ ಮದುವೆ ಮೂಲಕ ಸದ್ದು ಮಾಡುತ್ತಿರುವ ನಟಿ ಪವಿತ್ರಾ ಲೋಕೇಶ್ ಮತ್ತು ನರೇಶ್ ಜೋಡಿ ಭಾಗಿಯಾಗಿದ್ದರು. ಮಾಧ್ಯಮದ ಜೊತೆ ಮಾತನಾಡಿದ ನರೇಶ್ ಅಂಬರೀಷ್ ನನಗೆ ದೊಡ್ಡಣ್ಣ ಎಂದು ಹೇಳಿದ್ದಾರೆ.