May 24, 2023, 10:39 AM IST
ಟೈಂ ಚನ್ನಾಗಿದ್ರೆ ಏನ್ ಬೇಕಾದ್ರು ಒಳ್ಳೆಯದ್ದೇ ಆಗುತ್ತೆ. ಅದೇ ಟೈಂ ಕೆಟ್ರೆ ಲೈಫ್ ಎಲ್ಲಿಗೋ ಹೋಗುತ್ತೆ. ಆದ್ರೆ ಮುಂಬೈನ ದೊಡ್ಡ ಸ್ಲಂನಲ್ಲಿ ಬೆಳೆದ ಹುಡುಗಿಯೊಬ್ಬಳ ಟೈಂ ಸಖತ್ತಾಗಿದೆ. ಯಾಕಂದ್ರೆ ಆ ಹುಡುಗಿ ಈಗ ಡೈರೆಕ್ಟರ್ ಆಗಿ ಹಾಲಿವುಡ್‌ನ ಕದಾ ತಟ್ಟಿದ್ದಾಳೆ ಅವಳೇ, ಮಲೀಶಾ ಖಾರ್ವಾ. ಮಲೀಶಾ ಮುಂಬೈನ ಧಾರಾವಿಯ ಕೊಳೆಗೇರಿಯ 14 ವರ್ಷದ ಹುಡುಗಿ. ಸದ್ಯ ಈಕೆಗೆ ಎರಡು ಹಾಲಿವುಡ್ ಸಿನಿಮಾ ಆಫರ್ ಬಂದಿದೆ. ಅಷ್ಟೇ ಅಲ್ಲ ಮಲೀಶಾ ಮಾಡೆಲ್ ಆಗಿದ್ದಾಳೆ. ಮಲೀಶಾ ಖಾರ್ವಾ ಇನ್‌ಸ್ಟಾಗ್ರಾಮ್‌ನಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿದ್ಲು. ನಂತರ ಲೈವ್ ಯುವರ್ ಫೇರಿಟೇಲ್ ಅನ್ನೋ ಶಾರ್ಟ್ ಮೂವಿನಲ್ಲಿ ನಟಿಸಿದ್ಲು. ಇವಳ ಕಂಟೆಂಟ್‌ಗಳನ್ನ ನೋಡಿ ಮಾಡೆಲಿಂಗ್‌ಗೆ ಆಫರ್ ಬಂತು.
ಇದನ್ನೂ ವೀಕ್ಷಿಸಿ: ಮತ್ತೆ ಮದುವೆಯಾಗುವ ಸುಳಿವು ನೀಡಿದ್ರಾ ಸಮಂತಾ? ಡಾಕ್ಟರ್ ಫೋಟೋ ಹಂಚಿಕೊಂಡು ಹೇಳಿದ್ದೇನು?