Aug 20, 2023, 10:21 AM IST
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಫ್ಯಾನ್ಸ್‌ಗೆ ಇನ್ನು ಗುಡ್ ನ್ಯೂಸ್ ಸಿಕ್ಕಿಲ್ಲ. ಕಳೆದ ವರ್ಷವೇ ಬರಬೇಕಿದ್ದ ಮಾರ್ಟಿನ್(Martin) ಬಿಡುಗಡೆ ಆಗೋ ಯಾವ್ದೇ ಸೂಚನೆ ಕೊಟ್ಟಿಲ್ಲ. ಅದಕ್ಕೆ ಕಾರಣ ಮಾರ್ಟಿನ್ ಕ್ವಾಲಿಟಿ ಮತ್ತು ಕ್ವಾಂಟಿಟಿ. ಹೌದು, ಪ್ಯಾನ್ ಇಂಡಿಯಾ(Pan India) ಮಟ್ಟದಲ್ಲಿ ಸಿದ್ಧವಾಗ್ತಿರೋ ಮಾರ್ಟಿನ್ ಸಿನಿಮಾ ಬೇರೆ ಲೆವೆಲ್‌ನಲ್ಲಿದೆ ಅನ್ನೋದನ್ನ ಟೀಸರ್ ಹೇಳಿತ್ತು. ಇದೀಗ ಮಾರ್ಟಿನ್ ಬಗ್ಗೆ ಮತ್ತೊಂದು ದೊಡ್ಡ ಸುದ್ದಿ ರಿವೀಲ್ ಆಗಿದೆ. ಅದುವೇ ಮಾರ್ಟಿನ್ ಒಂದೇ ಒಂದು ಆ್ಯಕ್ಷನ್ ದೃಶ್ಯಕ್ಕೆ ಬರೋಬ್ಬರಿ 10 ಕೋಟಿ ಕರ್ಚು ಆದ ಕಥೆ. ಬಹದ್ಧೂರ್ ಹುಡುಗ ಧ್ರುವ(Dhruva Sarja) ಆ್ಯಕ್ಷನ್ ಮಾಡೋದ್ರಲ್ಲಿ ಪಂಟರ್. ಅದಕ್ಕಾಗೆ ಧ್ರುವನಿಗೆ ಆ್ಯಕ್ಷನ್ ಪ್ರಿನ್ಸ್ ಅಂತ ಕರೆದಿದ್ದು. ಇದನ್ನ ಮಾರ್ಟಿನ್‌ನಲ್ಲಿ ಸರಿಯಾಗೆ ಬಳಸಿಕೊಳ್ತಿರೋ ನಿರ್ದೇಶಕ ಎ.ಪಿ. ಅರ್ಜುನ್ ಮಾರ್ಟಿನ್ ಕ್ಲೈಮ್ಯಾಕ್ಸ್ ಸೀನ್‌ಗಳನ್ನ ಬರೋಬ್ಬರಿ 30ಕ್ಕೂ ಹೆಚ್ಚು ದಿನ ಚಿತ್ರೀಕರಿಸಿದ್ರು. ಈ ಕ್ಲೈಮ್ಯಾಕ್ಸ್‌ನ ಒಂದು ದೃಶ್ಯಕ್ಕೆ ಟಾಲಿವುಡ್‌ನ ರಾಮ್-ಲಕ್ಷ್ಮಣ್ ಆ್ಯಕ್ಷನ್ ಕಟ್ ಹೇಳಿದ್ರೆ, ಉಳಿದೆರಡು ಚೇಜಿಂಗ್ ದೃಶ್ಯಗಳನ್ನ ಕನ್ನಡದ ಸಾಹಸ ನಿರ್ದೇಶಕ ರವಿ ವರ್ಮ ಡೈರೆಕ್ಟ್ ಮಾಡಿದ್ದಾರೆ. ಈ ಎರಡೂ ಚೇಜಿಂಗ್ ದೃಶ್ಯಗಳಲ್ಲಿ ಒಂದೇ ಒಂದು ದೃಶ್ಯಕ್ಕೆ ಹೆಚ್ಚು ಕಡಿಮೆ 10 ಕೋಟಿ ಖರ್ಚಾ ಮಾಡಿದ್ದಾರಂತೆ. ಹೀಗಾಗಿ ಮಾರ್ಟಿನ್ ಆ್ಯಕ್ಷನ್ ದೃಶ್ಯಗಳು ಬೇರೆ ಲೆವೆಲ್‌ನಲ್ಲಿ ಇರಲಿವೆಯಂತೆ. ಸದ್ಯ ಮಾರ್ಟಿನ್ ಲುಕ್‌ಗೆ ವಾಪಸ್ ಆಗಿರೋ ಧ್ರುವ ಸರ್ಜಾಗೆ ಸಿನಿಮಾದ ಕೆಲ ದೃಶ್ಯಗಳಿಗೆ ಜೀವ ತುಂಬುತ್ತಿದ್ದಾರೆ. ಈ ತಿಂಗಳ ಕೊನೆಯಲ್ಲಿ ಮಾರ್ಟಿನ್ ಶೂಟಿಂಗ್ ಮುಗಿಯಲಿದೆ.
ಇದನ್ನೂ ವೀಕ್ಷಿಸಿ: 'ವೀರ ಮದಕರಿ' ಮಗಳು ಇಂದು ಸ್ಟಾರ್ ಹಿರೋಯಿನ್: ಹಾಟ್ ಲುಕ್‌ನಲ್ಲಿ ಜೆರುಶಾ ಕ್ರಿಸ್ಟೋಫರ್ ಮೋಡಿ..!