Sep 15, 2023, 12:35 PM IST
ವಿನೋದ್ ಪ್ರಭಾಕರ್ ಬೆಳ್ಳಿತೆರೆಯಲ್ಲಿ ಬಿಗ್ ಸಕ್ಸಸ್‌ಗಾಗಿ ಫೈಟ್ ಮಾಡುತ್ತಲೇ ಇದ್ದಾರೆ. ಇವರ ಸಿನಿಮಾ ಕೃಷಿಯಲ್ಲಿ ಈಗ ಹೊಸ ಎಂಟ್ರಿ ಫೈಟರ್ ಸಿನಿಮಾ. ರೈತರ ಕಥೆಯ ಈ ಸಿನಿಮಾದಲ್ಲಿ ಭರ್ಜರಿ ಆಕ್ಷನ್ ಧಮಾಕ ಇದೆ. ವಿನೋದ್ ಬರೀ ಫೈಟರ್(Fighter) ಮಾತ್ರವಲ್ಲ ಹೆಣ್ಮಕ್ಕಳ ಮನದಲ್ಲಿ ಪ್ರೀತಿಯ ಆಸೆ ಹುಟ್ಟಿರೋ ಹ್ಯಾಂಡ್ಸಮ್ ಹಂಕ್ ಕೂಡ ಹೌದು. ಫೈಟರ್ ಸಿನಿಮಾ ಆಕ್ಷನ್ ಕಮ್ ಲವ್ ಸ್ಟೋರಿ ಸಿನಿಮಾ. ಇದೀಗ ಫೈಟರ್ ಸಿನಿಮಾದ ಲವ್ ಸಾಂಗ್ ರಿಲೀಸ್ ಆಗಿದೆ. ವಿನೋದ್ ಪ್ರಭಾಕರ್(Vinod Prabhakar ) ಹಿಂದೆ ಬಿದ್ದ ನಟಿ ಲೇಖಾ ಚಂದ್ರ(Lekha Chandra) ಪ್ರೀತ್ಸು ಪ್ರೀತ್ಸು ಅಂತ ವಿನೋದ್ ಹಿಂದೆ ಬಿದ್ದಿದ್ದಾರೆ. ಗುರುಕಿರಣ್ ಮ್ಯೂಸಿಕ್ನಲ್ಲಿ ಈ ರಾಕ್ ಸ್ಟೈಲ್ ಪ್ರೇಮಗೀತೆ ಸಿದ್ಧವಾಗಿದೆ. ಬೆಂಗಳೂರಿನ ಕಲಾವಿಧರ ಸಂಘದಲ್ಲಿ ಸುದ್ದಿಗೋಷ್ಟಿ ಮಾಡಿದ ಚಿತ್ರತಂಡ ಈ ಲವ್ ಆಲ್ಬಂಅನ್ನ ರಿಲೀಸ್ ಮಾಡಿದ್ದಾರೆ. ಯುವ ಪ್ರೊಡ್ಯೂಸರ್ ಸೋಮಶೇಖರ್ ಫೈಟರ್ಗೆ ಬಂಡವಾಳ ಹೂಡಿದ್ದಾರೆ. ರೈತರಿಗಾಗಿ ಮಾಡಿದ ಫೈಟರ್ಗೆ ನೂತನ್ ಉಮೇಶ್ ಆಕ್ಷನ್ ಕಟ್ ಹೇಳಿದ್ದಾರೆ. ಸಧ್ಯದಲ್ಲೇ ಫೈಟರ್ ರಿಲೀಸ್ ಡೇಟ್ ಅನೌನ್ಸ್ ಆಗಲಿದೆ.
ಇದನ್ನೂ ವೀಕ್ಷಿಸಿ: ಮನೆ ಬಳಿ ಧ್ರುವ ಅದ್ಧೂರಿ ಬರ್ತ್‌ಡೇ ಸೆಲೆಬ್ರೇಷನ್ !ಈ ಭಾರಿ ಸ್ಪೆಷಲ್ ಏನ್ ಗೊತ್ತಾ..?