ಯಾವೆಲ್ಲಾ ನಟರ ಚಿತ್ರಗಳು ಅವರ ನಿಧನದ ಬಳಿಕ ತೆರೆಕಂಡಿವೆ ಗೊತ್ತಾ?

ಯಾವೆಲ್ಲಾ ನಟರ ಚಿತ್ರಗಳು ಅವರ ನಿಧನದ ಬಳಿಕ ತೆರೆಕಂಡಿವೆ ಗೊತ್ತಾ?

Suvarna News   | Asianet News
Published : Mar 20, 2022, 06:06 PM IST

ಸಿನಿರಂಗದಲ್ಲಿ ಕಲಾವಿದರು ಸತ್ತ ನಂತರ ಅವರ ಚಿತ್ರಗಳು ಬಿಡುಗಡೆಯಾಗುತ್ತವೆ. ಆ ಸಿನಿಮಾಗಳಲ್ಲಿ ಕೆಲವೊಬ್ಬರದು ಸಿಕ್ಕಾಪಟ್ಟೆ ಬಿಗ್‌ಹಿಟ್ ಆಗಿಬಿಡುತ್ತೆ. ಇದಕ್ಕೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ 'ಜೇಮ್ಸ್' ಸಿನಿಮಾವೇ ಸಾಕ್ಷಿ.

ಸಿನಿರಂಗದಲ್ಲಿ ಕಲಾವಿದರು ಸತ್ತ ನಂತರ ಅವರ ಚಿತ್ರಗಳು ಬಿಡುಗಡೆಯಾಗುತ್ತವೆ. ಆ ಸಿನಿಮಾಗಳಲ್ಲಿ ಕೆಲವೊಬ್ಬರದು ಸಿಕ್ಕಾಪಟ್ಟೆ ಬಿಗ್‌ಹಿಟ್ ಆಗಿಬಿಡುತ್ತೆ. ಇದಕ್ಕೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ 'ಜೇಮ್ಸ್' (James) ಸಿನಿಮಾವೇ ಸಾಕ್ಷಿಯಾಗಿದೆ. ಇದೀಗ ಯಾವೆಲ್ಲಾ ನಟರ ಚಿತ್ರಗಳು ಅವರ ನಿಧನದ ಬಳಿಕ ತೆರೆಕಂಡಿವೆ ಎಂಬುದರ ಬಗ್ಗೆ ಮಾಹಿತಿ ಈ ಸ್ಟೋರಿಯಲ್ಲಿದೆ. ಪುನೀತ್ ರಾಜ್‌ಕುಮಾರ್ ನಿಧನದ ಬಳಿಕ ಅವರ ಅಭಿನಯದ ಕೊನೆಯ ಚಿತ್ರ 'ಜೇಮ್ಸ್' ಅವರ ಹುಟ್ಟುಹಬ್ಬದಂದು ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹಾಗೂ ಸ್ಯಾಂಡಲ್‌ವುಡ್‌ನ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ (Chiranjeevi Sarja) ನಿಧನದ ನಂತರ 'ರಣಂ' ಹಾಗೂ 'ರಾಜಮಾರ್ತಾಂಡ' ಚಿತ್ರಗಳು ಬಿಡುಗಡೆಯಾಗಿದೆ.

James 2022: ಅಮೆರಿಕಾದಲ್ಲೂ ಪುನೀತ್ ರಾಜ್‌ಕುಮಾರ್ ಚಿತ್ರದ ದರ್ಬಾರ್

ಹಾಗೆಯೇ ಬಾಲಿವುಡ್‌ನಲ್ಲಿ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಸಾವಿನ ಬಳಿಕ ಅವರ ಅಭಿನಯದ 'ದಿಲ್ ಬೇಚಾರ' ಸಿನಿಮಾ ರಿಲೀಸ್ ಆಯಿತು. ವಿಶೇಷವಾಗಿ ಕನ್ನಡ ಚಿತ್ರರಂಗದ ಸಾಹಸ ಸಿಂಹ ಡಾ.ವಿಷ್ಣುವರ್ಧನ್ (Dr Vishnuvardhan) ಅಗಲಿದ 40 ದಿನಗಳ ಬಳಿಕ 'ಅಪ್ತರಕ್ಷಕ' ಬಿಡುಗಡೆಯಾಯಿತು. ಮಾತ್ರವಲ್ಲದೇ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ (Rishi Kapoor) ಎರಡು ವರ್ಷದ ಹಿಂದೆ ಕ್ಯಾನ್ಸರ್‌ನಿಂದ ಸಾವನಪ್ಪಿದರು. ಆದರೆ ಅವರೂ ಸಾವಿಗೂ ಮುನ್ನ 'ಶರ್ಮಾಜಿ ನಮ್‌ಕಿನ್‌' ಚಿತ್ರದಲ್ಲಿ ಕೊನೆಯದಾಗಿ ಅಭಿನಯಿಸಿದ್ದರು. ಈಗಾಗಲೇ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಮಾರ್ಚ್‌ 31ರಂದು ಒಟಿಟಿಯಲ್ಲಿ ತೆರೆಕಾಣಲಿದೆ. ಇನ್ನು ಈ ಸ್ಥಿತಿಯು ಯಾವ ಕಲಾವಿದನ ಜೀವನದಲ್ಲಿ ನಡೆಯಬಾರದು ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. 

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
Read more