ಅಮ್ಮ ಕಂಡ ಕನಸು ಸಾಕಷ್ಟಿದೆ, ಬಾಕಿಯಿರುವ ಕೆಲಸ ಮಾಡುತ್ತೇನೆ: ವಿನೋದ್ ರಾಜ್

ಅಮ್ಮ ಕಂಡ ಕನಸು ಸಾಕಷ್ಟಿದೆ, ಬಾಕಿಯಿರುವ ಕೆಲಸ ಮಾಡುತ್ತೇನೆ: ವಿನೋದ್ ರಾಜ್

Published : Dec 10, 2023, 09:55 AM IST

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಲೀಲಾವತಿ ಅವರ ಪಾರ್ಥಿವ ಶರೀರ  ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು. ಈ ವೇಳೆ  ಮೇರು ನಟಿಗೆ ಜನಪ್ರತಿನಿಧಿಗಳು ಅಂತಿಮ ನಮನ ಸಲ್ಲಿಸಲಿದ್ದಾರೆ.ಈ ವೇಳೆ ಕನ್ನಡ ಚಿತ್ರರಂಗದ ಹಲವು ಗಣ್ಯರು, ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಅಶೋಕ್, ಸರ್ಕಾರದ ಹಲವು ಸಚಿವರುಗಳು ಸಹ ಅಂತಿಮ ದರ್ಶನ ಪಡೆದರು.

ಮಹಾನ್ ನಟಿ ಧ್ರುವ ತಾರೆ ಲೀಲಾವತಿಯವರ ಪಾರ್ಥಿವ ಶರೀರವನ್ನು ನೆಲಮಂಗಲದ ಸೋಲದೇವನಹಳ್ಳಿಗೆ(Soladevanahalli) ಕೊಂಡೊಯ್ದು,ಸಕಲ ಸರ್ಕಾರಿ ವಿಧಿವಿಧಾನಗಳಂತೆ ಲೀಲಾವತಿಯವರ(Leelavathi) ತೋಟದಲ್ಲಿ ಅಂತಿಮ ವಿಧಿ ವಿಧಾನಗಳನ್ನು ಪೂರೈಸಿ ಅಂತಿಮ ಸಂಸ್ಕಾರ ಮಾಡಲಾಯಿತು. ಸೋಲದೇವನಹಳ್ಳಿಯಲ್ಲಿರುವ ಫಾರ್ಮ್‌ಹೌಸ್‌ನಲ್ಲಿ(FarmHouse) ಬಂಟರ ಸಂಪ್ರದಾಯದಂತೆ ಮಧ್ಯಾಹ್ನ ಅಂತಿಮ ಸಂಸ್ಕಾರ ನಡೆಯಿತು.ಈ ಸಂದರ್ಭದಲ್ಲಿ ಆಪ್ತರು, ಗಣ್ಯ,ಕುಟುಂಬದವರು ಅಭಿಮಾನಿಗಳು ಭಾಗಿ ಆಗಿದ್ದರು. ತಾಯಿಗೆ ಮಗನಾಗಿ ಅಲ್ಲ. ಮಗನೇ ತಾಯಿಯಂತೆ ಲೀಲಾವತಿಯವರನ್ನು  ಆರೈಕೆ ಮಾಡಿದ್ದರು. ತಾಯಿಯನ್ನು ಕಳೆದುಕೊಂಡು ವಿನೋದ್ ರಾಜ್(Vinod Raj) ಅವರು ತೀವ್ರ ದುಃಖಕ್ಕೆ ಒಳಗಾಗಿದ್ದಾರೆ. ಅಮ್ಮ ಇಲ್ಲ ಎಂಬ ನೋವು  ಅವರನ್ನು ಬಹುವಾಗಿ ಕಾಡುತ್ತಿದೆ. ಅಮ್ಮ ಕಂಡ ಕನಸನ್ನು ಈಡೇರಿಸುವ ಉದ್ದೇಶವನ್ನು ವಿನೋದ್ ಹೊಂದಿದ್ದಾರೆ. ಅಮ್ಮನ ಕನಸು ನನಸು ಮಾಡುತ್ತೇನೆ ಎಂದಿದ್ದಾರೆ ವಿನೋದ್ ರಾಜ್. ಹಿರಿಯ ನಟಿ ಲೀಲಾವತಿಯವರ ಅಗಲಿಕೆಗೆ ಇಡೀ ಕನ್ನಡ ಚಿತ್ರರಂಗ ಕನ್ನಡ ಜನತೆ ಶೋಕಸಾಗರದಲ್ಲಿ ಮುಳುಗಿದೆ. ದುಃಖದಲ್ಲೇ ಅಂತಿಮ ನಮನ ಸಲ್ಲಿಸಿದ್ಧಾರೆ.

ಇದನ್ನೂ ವೀಕ್ಷಿಸಿ:  ಬೆಳ್ತಂಗಡಿಯ ಲೀಲಾವತಿ ಸ್ಟಾರ್ ನಟಿಯಾಗಿದ್ದು ಹೇಗೆ ? 86 ವರ್ಷದ ಸಾರ್ಥಕ ಬದುಕು..ತುಂಬಿದ ಕೊಡ !

04:30Cine Express: ಈ ವಾರ ಸಿನಿ ಇಂಡಸ್ಟ್ರಿಯಲ್ಲಿ ಹೆಚ್ಚು ಚರ್ಚೆಯಾದ 5 ದೊಡ್ಡ ಅಪ್‌ಡೇಟ್‌ಗಳು ಯಾವುವು?
04:09ಅಪ್ಪನಿಗಾಗಿ ಬಂದ ಹೊಸ ಹಾಡು, ಕಾನ್ಸ್‌ನಲ್ಲಿ ಮೆಚ್ಚುಗೆ ಪಡೆದ ಚಿತ್ರದ ಟ್ರೇಲರ್: ಸಿನಿರಂಗದಲ್ಲಿ ಏನಾಗುತ್ತಿದೆ?
04:18ಸ್ಯಾಂಡಲ್​ವುಡ್​ನಲ್ಲಿ ಮತ್ತೆ ನೆಪೋಟಿಸಂ ಕಿಚ್ಚು: ವಿವಾದಕ್ಕೆ ಅಂತ್ಯ ಹಾಡಿದ ಶಿವಣ್ಣ
02:45ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?
24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?