Nov 13, 2021, 5:25 PM IST
ರಾಜಮೌಳಿ (Rajamouli) ನಿರ್ದೇಶಿಸಿ, ರಾಮ್‌ಚರಣ್ (Ram Charan) ಹಾಗೂ ಜ್ಯೂಎನ್‌ಟಿಆರ್ (Jr.NTR) ಅಭಿನಯದ 'ಆರ್‌ಆರ್‌ಆರ್' (RRR) ಚಿತ್ರದ ಕರ್ನಾಟಕದ ವಿತರಣೆ ಹಕ್ಕನ್ನು ಕೆವಿಎನ್ (KVN) ಪ್ರೊಡಕ್ಷನ್ ಸಂಸ್ಥೆ ಪಡೆದುಕೊಂಡಿದೆ. ಡಿವಿವಿ ದಾನಯ್ಯ ಈ ಚಿತ್ರವನ್ನು 450 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದಾರೆ. ತೆಲುಗು, ಕನ್ನಡ, ಮಲಯಾಳಂ, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಈ ಸಿನಿಮಾ ತೆರೆಗೆ ಬರುತ್ತಿದೆ. ಆರ್‌ಆರ್‌ಆರ್ ಚಿತ್ರದ ನಿರ್ಮಾಪಕರು ನಮ್ಮ ಕೆವಿಎನ್ ಪ್ರೊಡಕ್ಷನ್ ಜತೆ ಸೇರಿ ರಾಜ್ಯದಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.
ಜ್ಯೂ.NTR ಹಣೆಯಿಂದ ರಕ್ತ, ರಾಮ್ ಚರಣ್ ಪೊಲೀಸ್: RRR ಚಿತ್ರದ ಸಣ್ಣ ತುಣುಕು
ಐದು ಭಾಷೆಗಳ ಪೈಕಿ ರಾಜ್ಯದಲ್ಲಿ ಯಾವುದೇ ಭಾಷೆ ಬಿಡುಗಡೆ ಆದರೂ ಅದು ನಮ್ಮ ಪ್ರೊಡಕ್ಷನ್‌ನಲ್ಲಿ ವಿತರಣೆ ಆಗಲಿದೆ ಎಂದು ಸಂಸ್ಥೆಯ ಮುಖ್ಯಸ್ಥ ನಿರ್ಮಾಪಕ ಸುಪ್ರೀತ್ (Supreeth) ಹೇಳುತ್ತಾರೆ. ಈ ಚಿತ್ರದಲ್ಲಿ ರಾಮ್ ಚರಣ್ ಮತ್ತು ಜ್ಯೂ.ಎನ್ಟಿಆರ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಅಲಿಯಾ ಭಟ್ (Alia Bhatt) ಸಹ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ವಿ.ವಿಜಯೇಂದ್ರ ಪ್ರಸಾದ್ ಕಥೆ, ಮತ್ತು ಶ್ರೀಕರ್ ಪ್ರಸಾದ್ ಸಂಕಲನವಿದ್ದು, ಎಂ.ಎಂ.ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ. ಜನವರಿ 7, 2022ರಂದು ವಿಶ್ವದಾದ್ಯಂತ 'ಆರ್‌ಆರ್‌ಆರ್' ಬಿಡುಗಡೆಯಾಗಲಿದೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment