Aug 13, 2023, 9:05 AM IST
ರಜಿನಿಕಾಂತ್ ಪ್ಯಾನ್ ಇಂಡಿಯಾ ಸ್ಟಾರ್ ವಿಶ್ವ ಕಂಡ ಸೂಪರ್ ಸ್ಟಾರ್. 2 ವರ್ಷಕ್ಕೊಮ್ಮೆ ಇವರ ಸಿನಿಮಾ ಬರುತ್ತೆ ಅಂದ್ರೆ ಯಾವ ಜಾಹೀರಾತು ಬೇಡ. ಸಹಜವಾಗೇ ಕ್ರೇಜ್ ಸೃಷ್ಟಿಯಾಗಿಬಿಡುತ್ತೆ. ಸಿನಿರಸಿಕರಿಗೆ ಅವರ ಸಿನಿಮಾ ಒಂದು ಸಂಭ್ರಮ. ಹಾಗೆಯೇ ಜೈಲರ್ ಸಿನಿಮಾ ಮೂರು ದಿನಗಳ ಹಿಂದೆ ಗುರುವಾರ ವಿಶ್ವಾದ್ಯಾಂತ ತೆರೆಕಂಡಿದೆ. ಶಿವರಾಜ್ ಕುಮಾರ್(Shivaraj kumar) ಕೂಡ ಅತಿಥಿ ಪಾತ್ರದಲ್ಲಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಜೈಲರ್(Jailer) ದೊಡ್ಡ ಯಶಸ್ಸು ಕಂಡಿದೆ. ಆದರೆ ಜೈಲರ್ ಸಿನಿಮಾ ತಮ್ಮ ತಮ್ಮ ಥಿಯೇಟರ್‌ನಲ್ಲಿ ಪ್ರದರ್ಶನ ಮಾಡೊ ಜೋಷ್‌ನಲ್ಲಿ ಅಲ್ಲಿನ ಪ್ರಾದೇಶಿಕ ಸಿನಿಮಾಗಳಿಗೆ ದೊಡ್ಡ ಹೊಡೆತ ಉಂಟಾಗಿತ್ತು. ಅದರಲ್ಲೂ ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ(bengaluru) 1050ಕ್ಕೂ ಹೆಚ್ಚು ಶೋಗಳುಒಂದೆ ದಿನ ಪ್ರದರ್ಶನವಾಗುವ ಮೂಲಕ ದೊಡ್ಡ ರೆಕಾರ್ಡ್ ಕ್ರಿಯೇಟ್ ಮಾಡಿತ್ತು. ಈ ಮೂಲಕ ಸ್ವಲ್ಪವೂ ಕರುಣೆಯಿಲ್ಲದೆ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳನ್ನು ತೆಗೆದುಹಾಕಿದ್ದರು. ಮುಖ್ಯವಾಗಿ ಶಶಾಂಕ್ ನಿರ್ದೇಶನದ ಕೌಸಲ್ಯಾ ಸುಪ್ರಜಾ ರಾಮ (Kausalya Supraja Rama) ಮತ್ತು ನಮೋ ಭೂತಾತ್ಮ2(Namo Bhutatma 2). ನಿರ್ದೇಶಕ ಶಶಾಂಕ್ ಈ ಕುರಿತು ಪ್ರತಿಭಟನೆಯನ್ನು ಮಾಡಿದ್ದರು. ಚೇಬಂರ್‌ಗೆ ದೂರನ್ನೂ ಸಲ್ಲಿಸಿದ್ದರು. ಆದರೆ ಒಂದೊಳ್ಳೆ ಸಿನಿಮಾ ಬಂದ್ರೆ ಅದು ಸುನಾಮಿಯಂಥಾ ಸಿನಿಮಾ ಬಂದ್ರು ಗಟ್ಟಿಯಾಗಿ ಥಿಯೇಟರ್‌ನಲ್ಲಿ ಉಳಿಯುತ್ತೆ ಅನ್ನೋದಕ್ಕೆ ಸಾಕ್ಷಿಯಾಗಿದೆ ಕೌಸಲ್ಯಾ ಸುಪ್ರಜಾ ರಾಮ ಮತ್ತು ನಮೋ ಭೂತಾತ್ಮ. ಎರಡೂ ಚಿತ್ರಗಳು ಪರಭಾಷಾ ಸಿನಿಮಾಗಳಿಂದ ಎಷ್ಟೆ ಅಡೆತಡೆ ಉಂಟಾದರೂ ಯಶಸ್ವಿಯಾಗಿ ಪ್ರದರ್ಶನಕಾಣುತ್ತಿವೆ.
ಇದನ್ನೂ ವೀಕ್ಷಿಸಿ: Today Horoscope: ಇಂದು ಧನಸ್ಸು ರಾಶಿಯವರ ಸಂಗಾತಿ ಆರೋಗ್ಯದಲ್ಲಿ ಏರುಪೇರು , ಸರಸ್ವತಿ ಪ್ರಾರ್ಥನೆ ಮಾಡಿ