ಕಿಚ್ಚನ 'ಮ್ಯಾಕ್ಸ್' ಬಗ್ಗೆ ಸಿಕ್ತು ಬಿಗ್ ಅಪ್‌ಡೇಟ್: ಸಿನಿಮಾ ರಿಲೀಸ್‌ಗೆ ನಡೆದಿದೆ ದೊಡ್ಡ ಪ್ಲ್ಯಾನ್ !

ಕಿಚ್ಚನ 'ಮ್ಯಾಕ್ಸ್' ಬಗ್ಗೆ ಸಿಕ್ತು ಬಿಗ್ ಅಪ್‌ಡೇಟ್: ಸಿನಿಮಾ ರಿಲೀಸ್‌ಗೆ ನಡೆದಿದೆ ದೊಡ್ಡ ಪ್ಲ್ಯಾನ್ !

Published : Oct 12, 2023, 09:54 AM IST

ಭಾರತೀಯ ಚಿತ್ರರಂಗದ ಬಾದ್ ಷಾ ಕಿಚ್ಚ ಸುದೀಪ್ ಫ್ಯಾನ್ಸ್‌ಗೆ ಭರ್ಜರಿ ಸುದ್ದಿಯೊಂದು ಸಿಕ್ತಾ ಇದೆ. ಕಳೆದ ಒಂದು ವರ್ಷದಿಂದ ಸುದೀಪ್‌ರನ್ನ ಬೆಳ್ಳಿತೆರೆ ಮೇಲೆ ಕಣ್ತುಂಬಿಕೊಂಡಿಲ್ಲ ಅನ್ನೋ ಬೇಸರ ಎಲ್ಲಾ ಕಿಚ್ಚಾಭಿಮಾನಿಗಳನ್ನ ಕಾಡುತ್ತಿತ್ . ಆದ್ರೆ ಈಗ ಮತ್ತೆ ಅಭಿನಯ ಚಕ್ರವರ್ತಿಯ ಅಭಿನಯ ನೋಡೋ ಟೈಂ ಹತ್ತಿರವಾಗಿದೆ. 

ಬಾದ್ ಷಾ ಕಿಚ್ಚ ಸುದೀಪ್ ಬಿಗ್ ಸ್ಕ್ರೀನ್ ಮೇಲೆ ವಿಜೃಂಭಿಸಿ ವರ್ಷ ಕಳೆದಿದೆ. ವಿಕ್ರಾಂತ್ ರೋಣ ಆದ್ಮೇಲೆ ಕಿಚ್ಚ ಮುಂದೇನು ಎಂದು ಕೇಳ್ತಿದ್ದ ಫ್ಯಾನ್ಸ್‌ಗೆ ನಾನು ಮ್ಯಾಕ್ಸ್ ಅಂತ ಆನ್ಸರ್ ಮಾಡಿದ್ರು. ಮ್ಯಾಕ್ಸ್ ಟೈಟಲ್ ಎಷ್ಟು ಪವರ್ ಫುಲ್ಲೋ ಅಷ್ಟೇ ರಾ ಮಾಸ್ ಸ್ಟೋರಿ ಇರೋ ಸಿನಿಮಾ ಅನ್ನೋದು ಮ್ಯಾಕ್ಸ್(Max) ಸ್ಯಾಂಪಲ್‌ಗಳು ಸಾರಿ ಹೇಳ್ತಿವೆ. ಮ್ಯಾಕ್ಸ್ ಟೀಸರ್‌ಗಳನ್ನ ನೋಡಿರೋ ಸುದೀಪ್ (Sudeep) ಆಲ್ ಇಂಡಿಯಾ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಈ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅಂತ ಕಾಯ್ತಿದ್ದಾರೆ. ಅದಕ್ಕೀಗ ಉತ್ತರ ಕೂಡ ಸಿಕ್ಕಿದೆ. ಅರೆ ಮ್ಯಾಕ್ಸ್ ಶೂಟಿಂಗ್ ಶುರುವಾಗಿ ಇನ್ನೂ ಎರಡು ತಿಂಗಳಷ್ಟೇ ಕಳೆದಿದೆ. ಆಗ್ಲೆ ನಿರ್ದೇಶಕ ವಿಜಯ್ ಕಾರ್ತಿಕೇಯ ಚಿತ್ರೀಕರಣ ಮುಗ್ಸಿ ಬಿಟ್ರಾ ಅಂತ ಆಶ್ಚರ್ಯ ಆಗ್ತಿದೆಯಾ.? ಯೆಸ್, ಮ್ಯಾಕ್ಸ್ಗಾಗಿ ಕಿಚ್ಚ ಕಾಲ್ ಶೀಟ್ ಕೊಟ್ಟಿದ್ದು ಬರೀ 4 ತಿಂಗಳು ಮಾತ್ರ. ಶೂಟಿಂಗ್(Shooting)  ಶುರುವಾಗಿ ಎರಡು ತಿಂಗಳು ಕಳೆದಿದೆ. ಡಿಸೆಂಬರ್ ಹೊತ್ತಿಗೆ ಮ್ಯಾಕ್ಸ್ ಚಿತ್ರೀಕರಣ ಕಂಪ್ಲೀಟ್ ಆಗುತ್ತೆ. ಆಮೇಲೇನಿದ್ರು ಬಿಗ್ಸ್ಕ್ರೀನ್ನಲ್ಲಿ ಮ್ಯಾಕ್ಸ್ ನೋಡೋ ಮಜಾ ಅಷ್ಟೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಕ್ರಾಂತ್ ರೋಣ(Vikrant Rona) ಸಿನಿಮಾ ಬಳಿಕ ನಾಲ್ಕು ತಿಂಗಳಿಗೊಂದು ಸ್ಮಾಲ್ ಬಜೆಟ್ ಸಿನಿಮಾ ಮಾಡೋದಕ್ಕೆ ಪ್ಲ್ಯಾನ್ ಮಾಡಿದ್ರು. ಅದಕ್ಕಾಗೆ ಮೂರು ಕತೆಯನ್ನ ಓಕೆ ಮಾಡಿದ್ದಾರೆ. ಈಗ ಮ್ಯಾಕ್ಸ್ ರೆಡಿಯಾಗ್ತಿದೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ಕಿಚ್ಚನ ಮ್ಯಾಕ್ಸ್ ರಿಲೀಸ್ ಮಾಡೋದಕ್ಕೆ ಸಿದ್ಧತೆ ಆಗ್ತಿದೆ. 

ಇದನ್ನೂ ವೀಕ್ಷಿಸಿ:  ಹುಲಿ ಕುಣಿತದಲ್ಲಿ ಡ್ಯಾನ್ಸ್ ಕಿಂಗ್ ಕಮಾಲ್: ಶಿವಣ್ಣನ ಜತೆ ಪ್ರಭುದೇವ ಮಸ್ತ್ ಡ್ಯಾನ್ಸ್‌ !

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?