ದರ್ಶನ್ ನೆನೆದು ಬೇಸರ ಹೊರ ಹಾಕಿದ ಅಭಿನಯ ಚಕ್ರವರ್ತಿ: ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ಕಿಚ್ಚ ಸುದೀಪ್​!

ದರ್ಶನ್ ನೆನೆದು ಬೇಸರ ಹೊರ ಹಾಕಿದ ಅಭಿನಯ ಚಕ್ರವರ್ತಿ: ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ಕಿಚ್ಚ ಸುದೀಪ್​!

Published : Sep 01, 2024, 12:55 PM IST

ಕಿಚ್ಚ ತನ್ನ ಮಾಜಿ ಸ್ನೇಹಿತ ದರ್ಶನ್ ಬಗ್ಗೆ ಬೇಸರದ ಮಾತನಾಡಿದ್ದು. ದರ್ಶನ್ ನಾನು ಮಾತೇ ಆಡುತ್ತಿಲ್ಲ. ನಾವಿಬ್ಬರು ಒಟ್ಟಿಗೆ ಸೇರಿಲ್ಲ. ಸೂರ್ಯ- ಚಂದ್ರ ಬೆಳಗ್ಗೆ-ರಾತ್ರಿ ಇದ್ರೆನೆ ಚೆಂದ. ಒಟ್ಟಿಗೆ ಬಂದ್ರೆ ಸಮಸ್ಯೆ. ಹಾಗಂತ ಸಮಾಜಕ್ಕೆ ಹೆದರಿ ಇರಲ್ಲ.

ಸ್ಯಾಂಡಲ್ ವುಡ್​ ಮಂದಿಗೆ ಸ್ನೇಹಿತರು ಅಂದ್ರೆ ನೆನಪಾಗುತ್ತಿದ್ದದ್ದೇ ನಟ ಕಿಚ್ಚ ಸುದೀಪ್ ಹಾಗು ದರ್ಶನ್. ಆದ್ರೆ ಇವರಿಬ್ಬ ಸ್ನೇಹ ಕಿತ್ತು ಹೋಗಿ ವರ್ಷಗಳೇ ಉರುಳಿವೆ. ಆದ್ರೂ ದಚ್ಚು ನನ್ನ ಸ್ನೇಹಿತನೇ ಅವರಿಗೆ ಒಳ್ಳೆಯದಾಗ್ಲಿ ಅಂತ ಸುದೀಪ್ ಹೇಳ್ತಾನೆ ಇದ್ದಾರೆ. ಇದೀಗ ದಿಢೀರ್ ಸುದ್ದಿಗೋಷ್ಟಿ ಮಾಡಿದ್ದ ಬಾದ್​ ಷಾ ಸುದೀಪ್​, ಜೈಲಲ್ಲಿರೋ ದಚ್ಚು ಬಗ್ಗೆ ಮನದ ಮಾತನಾಡಿದ್ದಾರೆ. ಹಾಗಾದ್ರೆ ಸುದೀಪ್ ಏನಂದ್ರು.? ಇಲ್ಲಿದೆ ನೋಡಿ ಫುಲ್ ಡಿಟೈಲ್ಸ್. ಸ್ನೇಹ ಎಂಬ ಸುಂಧರ ಸಂಬಂಧಕ್ಕೆ ನಾನು ನನ್ನದು ಅನ್ನೋ ಯಾವ್ದೇ ಸ್ವಾರ್ಥ ಇರಲ್ಲ. ಕಷ್ಟ ಅಂತ ಬಂದಾಗ ರಕ್ತ ಸಂಬಂಧಿಕರಿಗಿಂತ ಮೊದಲು ಬರೋದೇ ಸ್ನೇಹಿತರು. ಖುಷಿ ಇದ್ದಾಗೆ ಮತ್ತಷ್ಟು ಖುಷಿ ಕೊಡೋದೇ ಸ್ನೇಹಿತರು. ಅಂತಹ ಸ್ನೇಹಿತರು ನಮ್ ಸ್ಯಾಂಡಲ್​ವುಡ್​​ನಲ್ಲೂ ಇದ್ರು. 

ಅವರೇ ಭಾರತೀಯ ಚಿತ್ರರಂಗದ ಆರಡಿ ಕಟೌಟ್ ಕಿಚ್ಚ ಸುದೀಪ್ ಹಾಗು ಸ್ಯಾಂಡಲ್​ವುಡ್​ನ ಆರಡಿ ಕಟೌಟ್ ನಟ ದರ್ಶನ್. ಕಿಚ್ಚ ಸುದೀಪ್ ದಿಢೀರ್ ಅಂತ ಸುದ್ದಿಗೋಷ್ಟಿ ಮಾಡಿದ್ರು. ಕಿಚ್ಚನ ಈ ಮಾಧ್ಯಮ ಗೋಷ್ಠಿ ಸಾಕಸ್ಟು ಕುತೂಹಲ ಮೂಡಿಸಿತ್ತು. ಇಲ್ಲಿ ಸಿಕ್ಕಾಪಟ್ಟೆ ಹೈಲೆಟ್ ಆಗಿದ್ದು, ಕಿಚ್ಚ ತನ್ನ ಮಾಜಿ ಸ್ನೇಹಿತ ದರ್ಶನ್ ಬಗ್ಗೆ ಬೇಸರದ ಮಾತನಾಡಿದ್ದು. ದರ್ಶನ್ ನಾನು ಮಾತೇ ಆಡುತ್ತಿಲ್ಲ. ನಾವಿಬ್ಬರು ಒಟ್ಟಿಗೆ ಸೇರಿಲ್ಲ. ಸೂರ್ಯ- ಚಂದ್ರ ಬೆಳಗ್ಗೆ-ರಾತ್ರಿ ಇದ್ರೆನೆ ಚೆಂದ. ಒಟ್ಟಿಗೆ ಬಂದ್ರೆ ಸಮಸ್ಯೆ. ಹಾಗಂತ ಸಮಾಜಕ್ಕೆ ಹೆದರಿ ಇರಲ್ಲ. ಮನಸ್ಸಿಗೆ ಬಂದ್ರೆ ನಾನು ದರ್ಶನ್​ ಜೊತೆ ಮಾತಾಡ್ತೀನಿ ಎಂದಿದ್ದಾರೆ ಸುದೀಪ್. ಸೆಪ್ಟೆಂಬರ್​ 2ಕ್ಕೆ ಹೆಬ್ಬುಲಿ ಕಿಚ್ಚನ ಬರ್ತ್​​ಡೇ.. ಆ ದಿನ ನೆಚ್ಚಿನ ನಟನ ಭೇಟಿಗೆ ಜೆಪಿ ನಗರದಲ್ಲಿರೋ ಸುದೀಪ್​ ನಿವಾಸದ ಮುಂದೆ ಅಭಿಮಾನಿಗಳ ದೊಡ್ಡ ಸಾಗರವೇ ಬಂದು ಸೇರಿತ್ತೆ. 

ಆದ್ರೆ ಈ ಭಾರಿ ಕಿಚ್ಚ ಮನೆ ಮುಂದೆ ಫ್ಯಾನ್ಸ್​ ಜೊತೆ ಸೆಲೆಬ್ರೇಷನ್ ಮಾಡುತ್ತಿಲ್ಲ. ಅದಕ್ಕಾಗಿ ಒಂದು ಜಾಗ ಫಿಕ್ಸ್ ಮಾಡಿದ್ದಾರೆ ಬಾದ್ ಷಾ. ಸೆಪ್ಟೆಂಬರ್​ 2ರಂದು ಬೆಳ್ಳಗೆ 10 ಗಂಟೆಯಿಂದ 12ರವರಗೆ ಜಯನಗರದ MES ಗ್ರೌಂಡ್​ನಲ್ಲಿ ಸುದೀಪ್​ ಫ್ಯಾನ್ಸ್ ಜೊತೆ ಬರ್ತ್​ಡೇ ಸೆಲೆಬ್ರೆಷನ್ ಮಾಡುತ್ತಿದ್ದಾರೆ. ಕಳೆದ ವರ್ಷ ಸುದೀಪ್ ಹುಟ್ಟುಹಬ್ಬ ಮಾಡಿಕೊಂಡಾಗ ಅಭಿಮಾನಿಗಳ ನೂಕು ನುಗ್ಗಲಿನಿಂದ ಭಾರಿ ತೊಂದರೆ ಆಗಿತ್ತು. ಹೀಗಾಗಿ ನನ್ನ ಬರ್ತ್​ ಡೇಯಿಂದ ಮತ್ತೊಬ್ಬರಿಗೆ ತೊಂದರೆ ಆಗವುದು ಬೇಡ. ಯಾವುದೇ ಗಲಾಟೆ ಇಲ್ಲದೇ ಬರ್ತ್​ ಡೇ ಸೆಲೆಬ್ರೇಟ್ ಮಾಡೋಣ. ನನಗೆ ಅಂತ ಕೇಕ್ ತರೋದು ಬೇಡ. ಅದರ ಬಲದು ಬೇರೆಯವರಿಗೆ ಊಟ ಹಾಕಿಸಿ ಎಂದಿದ್ದಾರೆ ಸುದೀಪ್. ಅಷ್ಟೆ ಅಲ್ಲ ಹುಟ್ಟುಹಬ್ಬದ ದಿನ ಕಿಚ್ಚನ ಮ್ಯಾಕ್ಸ್​ ಅಪ್ಡೇಟ್​ ಕೂಡ ಕೊಡಲಿದ್ದಾರೆ. ಒಟ್ನಲ್ಲಿ ಈ ಭಾರಿ ಬಾದ್ ಷಾ ಫ್ಯಾನ್ಸ್​ ಭೇಟಿಗೆ ಸಖತ್ ಪ್ಲಾನ್ ಮಾಡಿದ್ದಾರೆ.

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more