'ಮುಸ್ಸಂಜೆ ಮಾತು' ಮೂವಿ ತೆರೆಕಂಡು 17 ವರ್ಷ: ಕಿಚ್ಚ ಸುದೀಪ್ ಹಂಚಿಕೊಂಡ ಮುಸ್ಸಂಜೆ ನೆನಪು!

'ಮುಸ್ಸಂಜೆ ಮಾತು' ಮೂವಿ ತೆರೆಕಂಡು 17 ವರ್ಷ: ಕಿಚ್ಚ ಸುದೀಪ್ ಹಂಚಿಕೊಂಡ ಮುಸ್ಸಂಜೆ ನೆನಪು!

Published : May 17, 2025, 05:12 PM IST

ಕಿಚ್ಚ ಸುದೀಪ್ ಕರೀಯರ್​ನಲ್ಲಿ ಮೂಡಿಬಂದ ಸ್ಪೆಷಲ್ ಮೂವಿಗಳಲ್ಲಿ ಒಂದು. ಸಾಲು ಸಾಲು  ಮಾಸ್ ಸಿನಿಮಾಗಳಲ್ಲಿ ಮಿಂಚ್ತಾ ಇದ್ದ ಕಿಚ್ಚ ಕ್ಲಾಸ್ ಅವತಾರದಲ್ಲಿ ನಟಿಸಿದ ಈ ಮೂವಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. 

ಕಿಚ್ಚ ಸುದೀಪ್ ಕರೀಯರ್​​ನಲ್ಲಿ ಬಂದ ಕ್ಲಾಸ್ ಮೂವಿಗಳಲ್ಲಿ ಮುಸ್ಸಂಜೆ ಮಾತು ಕೂಡ ಒಂದು. ಸುದೀಪ್-ರಮ್ಯಾ-ಅನು ಪ್ರಭಾಕರ್ ನಟಿಸಿದ್ದ ಈ ಮೂವಿಯ ಹಾಡುಗಳು ಈಗಲೂ ಸದ್ದು ಮಾಡ್ತಾ ಇರುತ್ವೆ. ಮ್ಯೂಸಿಕಲ್ ಹಿಟ್ ಮುಸ್ಸಂಜೆ ಮಾತು ಸಿನಿಮಾ ತೆರೆಗೆ ಬಂದು 17 ವರ್ಷಗಳು ತುಂಬಿವೆ. ಅದೇ ಖುಷಿಯಲ್ಲಿ ಕಿಚ್ಚ ಮುಸ್ಸಂಜೆ ನೆನಪುಗಳನ್ನ ಹಂಚಿಕೊಂಡಿದ್ದಾರೆ. ಮುಸ್ಸಂಜೆ ಮಾತು.. ಕಿಚ್ಚ ಸುದೀಪ್ ಕರೀಯರ್​ನಲ್ಲಿ ಮೂಡಿಬಂದ ಸ್ಪೆಷಲ್ ಮೂವಿಗಳಲ್ಲಿ ಒಂದು. ಸಾಲು ಸಾಲು  ಮಾಸ್ ಸಿನಿಮಾಗಳಲ್ಲಿ ಮಿಂಚ್ತಾ ಇದ್ದ ಕಿಚ್ಚ ಕ್ಲಾಸ್ ಅವತಾರದಲ್ಲಿ ನಟಿಸಿದ ಈ ಮೂವಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. 2008 ಮೇ 16ಕ್ಕೆ ರಿಲೀಸ್ ಆದ ಈ ಸಿನಿಮಾ ಆ ವರ್ಷದ ಸೂಪರ್ ಹಿಟ್ ಸಿನಿಮಾಗಳಲ್ಲೊಂದು ಅನ್ನಿಸಿಕೊಂಡಿತ್ತು. 

ಮುಸ್ಸಂಜೆ ಮಾತು ಸಿನಿಮಾದಲ್ಲಿ ಸುದೀಪ್ ಆರ್​ಜೆ ಪಾತ್ರದಲ್ಲಿ ಮಿಂಚಿದ್ರು. ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡ್ರೆ, ಅನು ಪ್ರಭಾಕರ್ ಮತ್ತೊಂದು ಮುಖ್ಯ ಪಾತ್ರದಲ್ಲಿದ್ರು. ಯುವ ನಿರ್ದೇಶಕ ಮಹೇಶ್ ಡೈರೆಕ್ಟ್ ಮಾಡಿದ್ದ ಮುಸ್ಸಂಜೆ ಮಾತು ತನ್ನ ಕ್ಲಾಸ್ ಕಥೆಯಿಂದ ನೋಡುಗರ ಮನಸು ಗೆದ್ದಿತ್ತು. ಮುಸ್ಸಂಜೆ ಮಾತು ಸಿನಿಮಾದ ಮತ್ತೊಂದು ಹೈಲೈಟ್ ಅಂದ್ರೆ ಶ್ರೀಧರ್ ಸಂಭ್ರಮ್ ಕಂಪೋಸ್ ಮಾಡಿದ್ದ ಬ್ಯೂಟಿಫುಲ್ ಮೆಲೋಡಿಯಸ್ ಹಾಡುಗಳು. ಮುಸ್ಸಂಜೆ ಮಾತು ಆಲ್ಬಂನ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿದ್ವು. ಅದ್ರಲ್ಲೂ ಏನಾಗಲಿ ಮುಂದೆ ಸಾಗು ನೀ ಸಾಂಗು ಈಗಲೂ ಸೋಷಿಯಲ್ ಮಿಡಿಯಾದಲ್ಲಿ ಸದ್ದು ಮಾಡ್ತಾ ಇರುತ್ತೆ. 

ಮುಸ್ಸಂಜೆ ಮಾತು ಸಿನಿಮಾ ಕುರಿತು ಕಿಚ್ಚ ಸುದೀಪ್ ಮನಸ್ಸಲ್ಲೂ ದೊಡ್ಡ ಸ್ಥಾನ ಇದೆ. ಅಂತೆಯೇ ಸಿನಿಮಾಗೆ 17 ವಸಂತ ತುಂಬಿರೋ ಹೊತ್ತಲ್ಲಿ ಒಂದು ವಿಡಿಯೋವನ್ನ ಮಾಡಿ ಮುಸ್ಸಂಜೆ ನೆನಪುಗಳನ್ನ ಮೆಲುಕು ಹಾಕಿದ್ದಾರೆ ಸುದೀಪ್. ‘ಏನಾಗಲಿ ಮುಂದೆ ಸಾಗು ನೀ’ ಹಾಡು ಸುದೀಪ್ ತಾಯಿಗೆ ತುಂಬಾನೇ ಇಷ್ಟವಂತೆ. ಅವರ ಕೊನೆವರೆಗೂ ಅದೇ ಹಾಡನ್ನ ಕಾಲರ್ ಟ್ಯೂನ್ ಆಗಿ ಇಟ್ಟುಕೊಂಡಿದ್ರಂತೆ. ಸೋ ಆ ಹಾಡು ಮತ್ತು ಮುಸ್ಸಂಜೆ ಮಾತು ಸಿನಿಮಾವನ್ನ ಖುಷಿ ಖುಷಿಯಾಗಿ ನೆನಪು ಮಾಡಿಕೊಂಡಿದ್ದಾರೆ ಕಿಚ್ವ. ಅಷ್ಟೇ ಅಲ್ಲ ಮುಸ್ಸಂಜೆ ಮಾತು ಕಲಾವಿದರು, ತಂತ್ರಜ್ಞರಿಗೆಲ್ಲಾ ಧನ್ಯವಾದ ಹೇಳಿದ್ದಾರೆ.

05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
03:23ಟಾಕಿಂಗ್ ಸ್ಟಾರ್ ಸೃಜನ್​ ಲೋಕೇಶ್ ಸಿನಿಮಾದ ಸ್ಪೆಷಲ್ ಸಾಂಗ್ ಬಿಡುಗಡೆ
Read more