ಸುದೀಪ್​​ಗೆ ಕಾಡುತ್ತಿದೆ 'ಮ್ಯಾಕ್ಸ್​' ರಿಲೀಸ್​​​​​ ಟೆನ್ಷನ್: ಕಿಚ್ಚ ಫುಲ್ ಕನ್ಫ್ಯೂಷನ್ ಆಗಿದ್ದೇಕೆ?

ಸುದೀಪ್​​ಗೆ ಕಾಡುತ್ತಿದೆ 'ಮ್ಯಾಕ್ಸ್​' ರಿಲೀಸ್​​​​​ ಟೆನ್ಷನ್: ಕಿಚ್ಚ ಫುಲ್ ಕನ್ಫ್ಯೂಷನ್ ಆಗಿದ್ದೇಕೆ?

Published : Sep 23, 2024, 04:18 PM ISTUpdated : Sep 23, 2024, 04:33 PM IST

ಬಾದ್​ ಷಾ ಕಿಚ್ಚ ಸುದೀಪ್​​ ಮ್ಯಾಕ್ಸ್​ ರಿಲೀಸ್ ಮಾಡೋದು ಯಾವಾಗ...? ಸುದೀಪ್ ಹುಟ್ಟುಹಬ್ಬಕ್ಕೆ ಮ್ಯಾಕ್ಸ್​ ಬರುತ್ತೆ ಅನ್ನೋ ನಿರೀಕ್ಷೆ ಇತ್ತು. ಅದು ಆಗ್ಲಿಲ್ಲ. ದಸರಾಗೆ ಅಂದುಕೊಂಡ್ರೆ ಅದು ಸುಳ್ಳಾಗಿದೆ.

ಬಾದ್​ ಷಾ ಕಿಚ್ಚ ಸುದೀಪ್​​ ಮ್ಯಾಕ್ಸ್​ ರಿಲೀಸ್ ಮಾಡೋದು ಯಾವಾಗ...? ಸುದೀಪ್ ಹುಟ್ಟುಹಬ್ಬಕ್ಕೆ ಮ್ಯಾಕ್ಸ್​ ಬರುತ್ತೆ ಅನ್ನೋ ನಿರೀಕ್ಷೆ ಇತ್ತು. ಅದು ಆಗ್ಲಿಲ್ಲ. ದಸರಾಗೆ ಅಂದುಕೊಂಡ್ರೆ ಅದು ಸುಳ್ಳಾಗಿದೆ. ಇನ್ನು ದೀಪಾವಳಿ ಹಬ್ಬಕ್ಕೆ ಮ್ಯಾಕ್ಸ್​ ಬರುತ್ತಾ..? ಈ ಬಗ್ಗೆ ಕಿಚ್ಚ ತುಟಿ ಬಿಚ್ಚುತ್ತಿಲ್ಲ. ಆ ಕಡೆ ಉಪ್ಪಿಯದ್ದೂ ಇದೆ ಕಥೆ. ಉಪೇಂದ್ರ ಯುಐ ಸಿನಿಮಾವನ್ನ ಅಕ್ಟೋಬರ್​​​​ಗೆ ರಿಲೀಸ್ ಮಾಡುತ್ತೇನೆ ಅಂತ ಹೇಳಿದ್ದಾರೆ. ಅಕ್ಟೋಬರ್​​ ಬರೋದಕ್ಕೆ ಇನ್ನು 8 ದಿನ ಭಾಕಿ ಇದೆ. ಆದ್ರೂ ರಿಲೀಸ್​ ಡೇಟ್​ ಕೊಟ್ಟಿಲ್ಲ. ಹಾಗಾದ್ರೆ ಈ ಮುಕುಂದ ಮುರಾರಿ ಏನ್ ಮಾಡೋಕೆ ಹೊರಟಿದ್ದಾರೆ..? ಇಲ್ಲಿದೆ ನೋಡಿ ಫುಲ್ ಡಿಟೈಲ್ಸ್. 

ಮ್ಯಾಕ್ಸ್.. ಜೆಸ್ಟ್​​ ಸ್ಯಾಂಪಲ್ಸ್​ಗಳಿಂದಲೇ ಸೌತ್​ನಲ್ಲಿ ಸೌಂಡ್​ ಮಾಡುತ್ತಿರೋ ಆರಡಿ ಕಟೌನ್ ಕಿಚ್ಚ ಸುದೀಪ್ ನಟಿಸಿರೋ ಸಿನಿಮಾ. ಮ್ಯಾಕ್ಸ್​ ಗ್ಲಿಪ್ಸ್​​​ನಲ್ಲಿ ಬಾದ್​ ಷಾನ ಖದರ್ ಎಂಟ್ರಿ ನೋಡಿ ಫ್ಯಾನ್ಸ್ ಕಳೆದು ಹೋಗಿದ್ದಾರೆ. ಈ ಭಾರಿ ನಮ್ಮಣ್ಣನ ಮೋಡಿ ಭರ್ಜರಿಯಾಗಿರುತ್ತೆ ಅಂತ ಆಸೆಗಣ್ಣಿನಿಂದ ಕಾಯುತ್ತಿದ್ದಾರೆ. ಆದ್ರೆ ಸುದೀಪ್ ಮಾತ್ರ ಮ್ಯಾಕ್ಸ್​ ರಿಲೀಸ್​ ಟೆನ್ಷನ್​​ಅನ್ನ ತಲೆಗೆ ಹಚ್ಚಿಕೊಂಡು ಓಡಾಡ್ತಿದ್ದಾರೆ. ಯಾಕಂದ್ರೆ ಮ್ಯಾಕ್ಸ್ ಸಿನಿಮಾ ಬಿಡುಗಡೆ ಡೇಟ್​ ಫಿಕ್ಸ್ ಮಾಡೋದೇ ಕಿಚ್ಚನಿಗೊಂದು ದೊಡ್ಡ ಚಿಂತೆಯಾಗಿದೆ. ಹೌದು, ಒಂದ್​ ಕಡೆ ಇಡೀ ಸ್ಯಾಂಡಲ್​ವುಡ್​ ದರ್ಶನ್ ಅರೆಸ್ಟ್ ಆದ ಅಟೆಕ್ಷನ್​ನಲ್ಲಿದ್ದಾರೆ. ಮತ್ತೊಂದ್ ಕಡೆ ಸ್ಟಾರ್​ಗಳು ಸಿನಿಮಾ ರಿಲೀಸ್​​ ಮಾಡ್ಲಿ ಅಂತ ಸಿನಿ ಪ್ರೇಕ್ಷಕ ಕಾಯುತ್ತಿದ್ದಾನೆ. 

ಅಕ್ಟೋಬರ್​​ 11ಕ್ಕೆ ಮಾರ್ಟಿನ್ ಮೂವಿ ಬಂದ್ಮೇಲೆ ಕನ್ನಡದ ಯಾವ ಸ್ಟಾರ್ ಸಿನಿಮಾ ರಿಲೀಸ್ ಆಗುತ್ತೆ ಅಂತ ಕಾಯೋ ಹಾಗಾಗಿದೆ. ಯಾಕಂದ್ರೆ ಉಪೇಂದ್ರ ಹಾಗು ಸುದೀಪ್ ಸಿನಿಮಾ ರಿಲೀಸ್​ ಡೇಟ್​ ಹೇಳೋಕೆ ಒದ್ದಾಡ್ತಿದ್ದಾರೆ. ಕಿಚ್ಚನ ಮ್ಯಾಕ್ಸ್ ಸಿನಿಮಾ ವರ್ಕ್​ ಕಂಪ್ಲೀಟ್ ಆಗಿದೆ. ಆದ್ರೆ ಬಿಡುಗಡೆ ದಿನಾಂಕ ಮಾತ್ರ ಅನೌನ್ಸ್ ಮಾಡೋಕೆ ಕಿಚ್ಚ ಹಿಂದೆ ಮುಂದೆ ಯೋಚ್ನೆ ಮಾಡುತ್ತಿದ್ದಾರೆ. ಮ್ಯಾಕ್ಸ್ ಟೀಸರ್​ ಬಂದು ಹಲ್​ಚೆಲ್ ಎಬ್ಬಿಸಿದೆ. ಮಾಸ್​ ಸಾಂಗ್ ಬಂದ್ರು ಟ್ರೆಂಡ್ ಆಗ್ತಿದೆ. ಇಲ್ಲಿ ಕಿಚ್ಚ ಸುದೀಪ್ ಪೊಲೀಸ್ ಖದರ್​ ತೋರಿಸುತ್ತಿದ್ದಾರೆ. ತಮಿಳು ಡೈರೆಕ್ಟರ್ ವಿಜಯ್ ಕಾರ್ತಿಕೇಯ ಆಕ್ಷನ್ ಕಟ್​ ಹೇಳಿರೋ ಈ ಸಿನಿಮಾಗೆ ಸ್ವತಹ ಕಿಚ್ಚ ಸುದೀಪ್ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಸಿನಿಮಾ ಅದ್ಧೂರಿಯಾಗಿ ಮೂಡಿ ಬಂದಿದೆ. 

ಆದ್ರೆ ಸಿನಿಮಾ ಯಾವಾಗ ತೆರೆಗೆ ತರಬೇಕು ಅನ್ನೊ ನಿರ್ಧಾರ ಮಾತ್ರ ಕಿಚ್ಚನಿಂದ ಮಾಡಲಾಗ್ತಿಲ್ಲ. ಮ್ಯಾಕ್ಸ್​ ಸಿನಿಮಾ ರಿಲೀಸ್​ ಡೇಟ್​ಅನ್ನ ಕಿಚ್ಚ ಯಾಕೆ ಫಿಕ್ಸ್​ ಮಾಡುತ್ತಿಲ್ಲ ಅಂತ ಕೇಳಿದ್ರೆ, ಅದಕ್ಕೆ ಕಾರಣ ಮತ್ತೆರಡು ಪ್ಯಾನ್ ಇಂಡಿಯಾ ಸಿನಿಮಾಗಳು ಅಂತ ಹೇಳಲಾಗ್ತಿದೆ. ಒಂದ್ ಕಡೆ ಸೂರ್ಯ ನಟನೆಯ ಕಂಗುವಾ ಸಿನಿಮಾ ನವೆಂಬರ್​​ 14ಕ್ಕೆ ತೆರೆ ಮೇಲೆ ಬರಲಿದೆ. ಆ ಕಡೆ ಅಲ್ಲು ಅರ್ಜುನ್ ನಟನೆಯ ಪುಷ್ಪ2 ಸಿನಿಮಾ ಡಿಸೆಂಬರ್​ 6ಕ್ಕೆ ರಿಲೀಸ್ ಆಗುತ್ತಿದೆ. ಈ ಎರಡು ಸಿನಿಮಾಗಳ ಮಧ್ಯೆ ಇರೋ ಗ್ಯಾಪ್ ನೋಡಿಕೊಂಡು ಒಂದು ಡೇಟ್​ಅನ್ನ ಕಿಚ್ಚ ಫಿಕ್ಸ್ ಮಾಡಬೇಕಿದೆ. 

05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
03:23ಟಾಕಿಂಗ್ ಸ್ಟಾರ್ ಸೃಜನ್​ ಲೋಕೇಶ್ ಸಿನಿಮಾದ ಸ್ಪೆಷಲ್ ಸಾಂಗ್ ಬಿಡುಗಡೆ
Read more