ಸೆಪ್ಟೆಂಬರ್ 2ನೇ ತಾರೀಕು ಕಿಚ್ಚ ಸುದೀಪ್ ಹುಟ್ಟುಹಬ್ಬ. ಕಳೆದ ಸಾರಿ ಮನೆ ಬಳಿಯ ಮೈದಾನದಲ್ಲಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಿಕೊಂಡಿದ್ರು ಸುದೀಪ್.
ಇತ್ತೀಚಿಗೆ ಸ್ಟಾರ್ಗಳೆಲ್ಲಾ ಫ್ಯಾನ್ಸ್ ಜೊತೆಗೆ ಬರ್ತ್ಡೇ ಸೆಲೆಬ್ರೇಟ್ ಮಾಡೋದನ್ನೆ ಕಡಿಮೆ ಮಾಡಿದ್ದಾರೆ. ಆದ್ರೆ ಕಿಚ್ಚ ಸುದೀಪ್ ಮಾತ್ರ ಈ ವರ್ಷವೂ ಅಭಿಮಾನಿಗಳ ಜೊತೆ ಸೆಲೆಬ್ರೇಷನ್ಗೆ ಸೈ ಅಂದಿದ್ದಾರೆ. ಅಮ್ಮನಿಲ್ಲದ ಈ ಮೊದಲ ಬರ್ತ್ಡೇನಲ್ಲಿ ಅಭಿಮಾನಿಗಳೂ ಇಲ್ಲದೇ ಹೋದ್ರೇ ಹೇಗೆ ಅಂದಿದ್ದಾರೆ. ಸೆಪ್ಟೆಂಬರ್ 2ನೇ ತಾರೀಕು ಕಿಚ್ಚ ಸುದೀಪ್ ಹುಟ್ಟುಹಬ್ಬ. ಕಳೆದ ಸಾರಿ ಮನೆ ಬಳಿಯ ಮೈದಾನದಲ್ಲಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಿಕೊಂಡಿದ್ರು ಸುದೀಪ್. ಈ ಸಾರಿ ಕೂಡ ಫ್ಯಾನ್ಸ್ಗೆ ಬರ್ತ್ಡೇ ಸೆಲೆಬ್ರೇಷನ್ಗೆ ಕರೆಕೊಟ್ಟಿರೋ ಸುದೀಪ್, ಪತ್ರವೊಂದನ್ನ ಬರೆದು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ. ಸೆಪ್ಟೆಂಬರ್ 2ರಂದು ತಾನು ಮನೆಯಲ್ಲಿರೋದಿಲ್ಲ. ಸೋ ಹಿಂದಿನ ರಾತ್ರಿಯೇ ಸೇರೋಣ. ಎಲ್ಲಿ ಹೇಗೆ ಅನ್ನೋದನ್ನ ತಿಳಿಸ್ತಿನಿ ಅಂದಿದ್ದಾರೆ ಸುದೀಪ್. ಸೋ ಕಿಚ್ಚನ ಈ ಸಂದೇಶ ಕೇಳಿ ಖುಷ್ ಆಗಿರೋ ಫ್ಯಾನ್ಸ್, ಕಿಚ್ಚೋತ್ಸವ ಮಾಡ್ಲಿಕ್ಕೆ ಸಜ್ಜಾಗಿದ್ದಾರೆ.
ಹೌದು ತಾಯಿ ಸರೋಜಮ್ಮನವರ ಅಗಲಿಕೆ ಬಳಿಕ ಬರ್ತಾ ಇರೋ ಸುದೀಪ್ರ ಮೊದಲ ಬರ್ತ್ಡೇ ಇದು. ಸೋ ಸೆಲೆಬ್ರೇಟ್ ಮಾಡಿಕೊಳ್ಳೋದು ಕಷ್ಟ ಆಗ್ತಾ ಇದೆ. ಹಾಗಂತ ಸಿಗಲ್ಲ ಅಂತ ಹೇಳಿ ಫ್ಯಾನ್ಸ್ ಬೇಸರ ಮಾಡೋದು ಬೇಡ ಅಂದಿರೋ ಸುದೀಪ್ ಅಭಿಮಾನಿಗಳಿಗೆ ಖುಷಿ ಸುದ್ದಿ ಕೊಟ್ಟಿದ್ದಾರೆ. ಯೆಸ್ ಎರಡು ವರ್ಷಕ್ಕೊಂದು ಸಿನಿಮಾ ಮಾಡ್ತೀರಿ ಅಂತ ಕಿಚ್ಚನ ಫ್ಯಾನ್ಸ್ ಕಂಪ್ಲೇಂಟ್ ಮಾಡ್ತಾ ಇರ್ತಾರೆ. ಆದ್ರೆ ಈ ಸಾರಿ ಸುದೀಪ್ ಎರಡೆರಡು ಸಿನಿಮಾಗಳನ್ನ ಒಟ್ಟಿಗೆ ಮಾಡ್ತಾ ಇದ್ದಾರೆ. ಒಂದು ಕಡೆಗೆ ಬಿಲ್ಲ ರಂಗ ಭಾಷ ಶೂಟ್ ನಡೀತಾ ಇದ್ರೆ, ಇನ್ನೊಂದು ಕಡೆಗೆ ಕೆ-47 ಕೆಲಸ ಕೂಡ ಭರದಿಂದ ನಡೀತಾ ಇವೆ, ಇನ್ನೂ ಬಿಗ್ ಬಾಸ್ಗೂ ಕಿಚ್ಚ ಮರಳಿದ್ದು ಸದ್ಯದಲ್ಲೇ ಸೀಸನ್-12 ಶುಭಾರಂಭ ಆಗಲಿದೆ. ಸೋ ಕಿರುತೆರೆಯಲ್ಲೂ ಕಿಚ್ಚನ ಕಮಾಲ್ ಮುಂದುವರೆಯಲಿದೆ. ಒಟ್ಟಾರೆ ಈ ಸಾರಿ ಸುದೀಪ್ ಬರ್ತ್ಡೇಗೆ ಫ್ಯಾನ್ಸ್ ಗೆ ಗಿಫ್ಟ್ ಗಳ ಮೇಲೆ ಗಿಫ್ಟ್ ಸಿಗಲಿವೆ.