Kiccha 47 ಸ್ಪೆಷಲ್ ಪೋಸ್ಟರ್ ಬಿಟ್ಟು ಕುತೂಹಲ ಕೆರಳಿಸಿದ ಅಭಿನಯ ಚಕ್ರವರ್ತಿ!

Nov 5, 2023, 9:00 AM IST

ಕಿಚ್ಚ ಸುದೀಪ್  ಕಿಚ್ಚ 47 ಸಿನಿಮಾ ಇನ್ನಿಲ್ಲದ ಕುತೂಹಲ ಕೆರಳಿಸಿದೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಕಿಚ್ಚ 47(Kichcha 47) ಸಿನಿಮಾ ಅಪ್‌ಡೇಟ್‌ ಸಿಗುವ ಸೂಚನೆ ಸಿಕ್ಕಿದೆ. ಸಣ್ಣ ಟೀಸರ್ ಜೊತೆ ಸಿನಿಮಾ ಬಗ್ಗೆ ಹೈಪ್ ಕ್ರಿಯೇಟ್ ಮಾಡುವ ಸಾಧ್ಯತೆಯಿದೆ. ಇದೇ ವಿಚಾರ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿದೆ ಸಿನಿಮಾದ ಪೋಸ್ಟರ್(Poster). ಇನ್ನು ಪೋಸ್ಟರ್ ನೋಡಿದವರು ಇದು ಐತಿಹಾಸಿಕ ಸಿನಿಮಾನಾ? ಎಂದು ಹುಬ್ಬೇರಿಸಿದ್ದಾರೆ. ಕಿಚ್ಚ ಸುದೀಪ್(Sudeep) ಇಲ್ಲೀವರೆಗೆ ಕಂಪ್ಲೀಟ್ ಐತಿಹಾಸಿಕ ಸಿನಿಮಾ ಅಥವಾ ಪೌರಾಣಿಕ ಸಿನಿಮಾ ಮಾಡಿಲ್ಲ. ಆದ್ರೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋ ಕಿಚ್ಚ 47 ಸಿನಿಮಾದ ಪೋಸ್ಟರ್ ಹೊಸ ಕುತೂಹಲ ಹುಟ್ಟುಹಾಕಿದೆ. ಕಿಚ್ಚ ಸುದೀಪ್ ಹಾಲಿವುಡ್ ಸಿನಿಮಾದ ವಾರಿಯರ್ ನಂತೆ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಕಿಚ್ಚ47 ಚಿತ್ರವನ್ನು ತಮಿಳಿನ ಚೇರನ್(Cheran) ನಿರ್ದೇಶನ ಮಾಡಲಿದ್ದಾರೆ. ಸತ್ಯಜ್ಯೋತಿ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಕಿಚ್ಚನಿಗೆ 'KGF' ಬೆಡಗಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಮ್ಯಾಕ್ಸ್ ಸಿನಿಮಾ ಶೂಟಿಂಗ್‌ ಭರದಿಂದ ಸಾಗಿದೆ. ಇದರ ನಡುವೆ ಬಿಗ್ ಬಾಸ್ ಆನಂತರ ಕಿಚ್ಚ 46 ಕಿಚ್ಚ 47, ಬಿಲ್ಲ ರಂಗಭಾಷ ಹೀಗೆ ಸುದೀಪ್ಗಾಗಿ ಸಿನಿಮಾಗಳು ಸಾಲಲ್ಲಿ ನಿಂತಿವೆ. ಸದ್ಯಕ್ಕೆ ಕಿಚ್ಚ 47 ಪೋಸ್ಟರ್ ಒಂದು ಹೊಸ ಸೆನ್ಸೇಷನ್ ಹುಟ್ಟುಹಾಖಿದ್ದು ಕಿಚ್ಚ ಫ್ಯಾಂಟಸಿ ಸಿನಿಮಾ ಒಂದರಲ್ಲಿ ಕಾಣಿಸಿಕೊಳ್ಳೋ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಇದನ್ನೂ ವೀಕ್ಷಿಸಿ:  ಹೀರೋಗಳಿಗೆ ಟಕ್ಕರ್ ಕೊಡ್ತಿದ್ದಾಳೆ ಈ ನಟಿ: ಕಿಸ್ ಹುಡುಗಿ ಇಷ್ಟೊಂದು ದುಬಾರಿನಾ?