ಕಿಚ್ಚನ ವರ್ಕೌಟ್ ಮಂತ್ರ.. ಅದೆಂಥಾ ಪಾತ್ರ, ಅದೆಂಥಾ ಚಿತ್ರ? ರಗಡ್ ಲುಕ್​​ನಲ್ಲಿ ಸುದೀಪ್!

ಕಿಚ್ಚನ ವರ್ಕೌಟ್ ಮಂತ್ರ.. ಅದೆಂಥಾ ಪಾತ್ರ, ಅದೆಂಥಾ ಚಿತ್ರ? ರಗಡ್ ಲುಕ್​​ನಲ್ಲಿ ಸುದೀಪ್!

Published : Apr 05, 2025, 12:45 PM ISTUpdated : Apr 05, 2025, 01:03 PM IST

ಮ್ಯಾಕ್ಸ್ ಮೂಲಕ ಬಿಗ್ ಸಕ್ಸಸ್ ಕಂಡ ಸುದೀಪ್ ಇದೀಗ ಕಳೆದ ಮೂರು ತಿಂಗಳಿಂದಲೂ ಸಜ್ಜಾಗ್ತಾ ಇರೋದು ಬಿಲ್ಲ ರಂಗ ಬಾಷಾಗೆ ಬಣ್ಣ ಹಚ್ಚಲಿಕ್ಕೆ. ವಿಕ್ರಾಂತ್ ರೋಣ ಡೈರೆಕ್ಟ್ ಮಾಡಿದ್ದ ಅನೂಪ್ ಭಂಡಾರಿ ಈ ಚಿತ್ರಕ್ಕೆ ಆಕ್ಚನ್ ಕಟ್ ಹೇಳಲಿದ್ದು...

ಕಿಚ್ಚ ಸುದೀಪ್ ಜಿಮ್​ನಲ್ಲಿ ಬೆವರಿಳಿಸ್ತಾ ಇದ್ದಾರೆ. ಕಿಚ್ಚನ ಕಸರತ್ತು ನೋಡಿದ್ರೆ ನೀವು ಬೆರಗಾಗೋದು. ಪಕ್ಕಾ. ಪೈಲ್ವಾನ್ ರೀತಿ ರೆಡಿಯಾಗಿರೋ ಸುದೀಪ್ ಏಪ್ರಿಲ್ 16ಕ್ಕೆ ಒಂದು ಸರ್​ಪ್ರೈಸ್ ಕೊಡ್ತಿನಿ ಅಂದಿದ್ದಾರೆ. ಹಾಗಾದ್ರೆ ಈ ವರ್ಕೌಟ್ ಸೀಕ್ರೆಟ್ ಏನು.. ಏಪ್ರಿಲ್ 16ಕ್ಕೆ ಬರಲಿರೋ ಸರ್​ಪ್ರೈಸ್ ಸಮಾಚಾರ ಏನು..? ಆ ಕುರಿತ ಎಕ್​​ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.

ಯೆಸ್ ಕಿಚ್ಚ ಸುದೀಪ್ ಜಿಮ್​ನಲ್ಲಿ ಬೆವರಿಳಿಸ್ತಾ ಇದ್ದಾರೆ. ಸಖತ್ ಟಫ್ ವರ್ಕೌಟ್ ಮಾಡ್ತಾ ಇರೋ ಸುದೀಪ್ ತಮ್ಮ ದೇಹವನ್ನ ದಂಡಿಸಿ ಅದಕ್ಕೆ ಹೊಸ ಆಕಾರ ಕೊಡ್ತಾ ಇದ್ದಾರೆ. ಕಿಚ್ಚನಿಗೆ ಈಗ 53 ವರ್ಷ ವಯಸ್ಸು ಈಗಲೂ ಅವರ ವರ್ಕೌಟ್ ನೋಡಿದ್ರೆ ನೀವು ದಂಗಾಗೋದು 

ಸದ್ಯ ಸುದೀಪ್ ಯಾವ ಲೆವೆಲ್​ಗೆ ರೆಡಿಯಾಗಿದ್ದಾರೆ ಅಂದರೆ ಪಕ್ಕಾ ಪೈಲ್ವಾನ್ ತರಹ ಕಾಣ್ತಾ ಇದ್ದಾರೆ. ಕಿಚ್ಚನ ಫೋಟೋಸ್ ನೋಡಿದವರು ಬಾದಷಾ ನೆಕ್ಸ್ಟ್ ಯಾವ ಪಾತ್ರ ಮಾಡ್ತಾರೆ.. ಅದೆಂತಾ ಚಿತ್ರ ಮಾಡ್ತಾರೆ ಅಂತ ಕುತೂಹಲದಲ್ಲಿ ಕಾಯ್ತಾ ಇದ್ದಾರೆ. ಅದಕ್ಕೆ ಉತ್ತರ ಕೊಟ್ಟಿರೋ ಕಿಚ್ಚ ಇದೇ ಏಪ್ರಿಲ್ 16ಕ್ಕೆ ಒಂದು ಸರ್ಪ್ರೈಸ್ ಇದೆ ಕಾದಿರಿ ಅಂದಿದ್ದಾರೆ.

ಮ್ಯಾಕ್ಸ್ ಮೂಲಕ ಬಿಗ್ ಸಕ್ಸಸ್ ಕಂಡ ಸುದೀಪ್ ಇದೀಗ ಕಳೆದ ಮೂರು ತಿಂಗಳಿಂದಲೂ ಸಜ್ಜಾಗ್ತಾ ಇರೋದು ಬಿಲ್ಲ ರಂಗ ಬಾಷಾಗೆ ಬಣ್ಣ ಹಚ್ಚಲಿಕ್ಕೆ. ವಿಕ್ರಾಂತ್ ರೋಣ ಡೈರೆಕ್ಟ್ ಮಾಡಿದ್ದ ಅನೂಪ್ ಭಂಡಾರಿ ಈ ಚಿತ್ರಕ್ಕೆ ಆಕ್ಚನ್ ಕಟ್ ಹೇಳಲಿದ್ದು ಅದಕ್ಕಾಗಿ ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ. ಅತ್ತ ಚಿತ್ರದ ಸೆಟ್ ವರ್ಕ್ ನಡೀತಾ ಇದ್ರೆ ಇತ್ತ ಸೂದೀಪ್ ಕಸರತ್ತು ಮಾಡಿ ಪಾತ್ರಕ್ಕೆ ಸಜ್ಜಾಗಿದ್ದಾರೆ.

ಬಿಲ್ಲ ರಂಗ ಭಾಷಾ ಫ್ಯಾಂಟಸಿ ಆಕ್ಷನ್ ಅಡ್ವೆಂಚರ್ ಕಹಾನಿಯುಳ್ಳ ಸಿನಿಮಾ. ಅದ್ಭುತವಾದ ಸೆಟ್​ಗಳು, ಜೊತೆಗೆ ದೊಡ್ಡ ಮಟ್ಟದ ಸಿಜಿ ವರ್ಕ್ ಸಿನಿಮಾದಲ್ಲಿದೆಯಂತೆ. ಇನ್ನೂ ಹಿಂದೆಂದೂ ನೋಡಿರದಂಥಾ ಸ್ಟೈಲಿಶ್ ಌಕ್ಷನ್ ಸಿಕ್ವೆನ್ಸ್​ನ ಇಲ್ಲಿ ಪ್ಲಾನ್ ಮಾಡಿದ್ದು ಅದಕ್ಕಾಗೇ ಕಿಚ್ಚ ಈ ಪರಿ ರೆಡಿಯಾಗ್ತಿದ್ದಾರೆ.

ಈ ಹಿಂದೆ ಪೈಲ್ವಾನ್ ಸಿನಿಮಾಗಾಗಿ ಸುದೀಪ್​ ಇದೇ ರೀತಿ ಜಿಮ್​ನಲ್ಲಿ ಬೆವರಿಳಿಸಿದ್ರು. ಒಂದು ಕುಸ್ತಿಪಟುವಾಗಿ ಮತ್ತೊಂದು ಕಡೆಗೆ ಬಾಕ್ಸರ್ ಆಗಿ ರಂಜಿಸಿದ್ರು. 

ಅಸಲಿಗೆ ಕಳೆದ ವರ್ಷಾಂತ್ಯಕ್ಕೆ ಬಂದ ಮ್ಯಾಕ್ಸ್ ಮೂವಿ ಬಾಕ್ಸ್ ಆಫೀಸ್​​ನಲ್ಲಿ ಕಮಾಲ್ ಮಾಡ್ತು. ಅದ್ರಲ್ಲೂ ಕಿಚ್ಚನ ಸ್ಟೈಲಿಶ್ ಲುಕ್, ಮಾಸ್ ಫೈಟ್ಸ್ ಫ್ಯಾನ್ಸ್​ಗೆ ಕಿಕ್ ಕೊಟ್ಟಿದ್ವು, ಇದೀಗ ಒನ್ಸ್ ಅಗೈನ್ ಬಿಲ್ಲ ರಂಗ ಭಾಷಾ ನಲ್ಲಿ ಫ್ಯಾನ್ಸ್ ಇಷ್ಟಪಡುವ ಎಲ್ಲಾ ಎಲೆಮೆಂಟ್ಸ್ ಮೂಲಕ ರಂಜಿಸೋಕೆ ಕಿಚ್ಚ ಸಿದ್ದವಾಗ್ತಾ ಇದ್ದಾರೆ.

ಒಟ್ಟಾರೆ ಸುದೀಪ್ ಸ್ಟನ್ನಿಂಗ್ ಲುಕ್ ನೋಡಿ ಫಿದಾ ಆಗಿರೋ ಫ್ಯಾನ್ಸ್ ಏಪ್ರಿಲ್ 16ಕ್ಕೆ ಕೊಡಲಿರೋ ಬಿಗ್ ನ್ಯೂಸ್ ಏನು ಅಂತ ಕಾಯ್ತಾ ಇದ್ದಾರೆ. ಕಿಚ್ಚ ಕೊಡಲಿರೋ ಸರ್ಪ್ರೈಸ್ ನ ಕಾಣೋಕೆ ಕಾತುರದಿಂದ ಕಾದಿದ್ದಾರೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
Read more