
ಕರ್ನಾಟಕದಲ್ಲಿ ನಾಡ ಹಬ್ಬ ಹಬ್ಬಿದೆ. ಇದೇ ಟೈಮ್ಗೆ ರಿಷಬ್ ಶೆಟ್ಟಿ ಕಾಂತಾರ ಲೋಕಕ್ಕೆ ನಿಮ್ಮನ್ನ ಕರೆದುಕೊಂಡು ಹೋಗುತ್ತಿದ್ದಾರೆ. ಆದ್ರೆ ಆ ಕಡೆ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಹೊಸದೊಂದು ಮಾರ್ಕ್ ಮಾಡೋಕೆ ಸಜ್ಜಾಗಿದ್ದಾರೆ. ದಸರಾ ಹಬ್ಬ ಮುಗಿದು ಮೂರೇ ದಿನಕ್ಕೆ ಸುದೀಪ್ ಫ್ಯಾನ್ಸ್ ಮಾರ್ಕ್ ಹಬ್ಬ ಮಾಡುತ್ತಾರೆ. ಯಾಕಂದ್ರೆ ಅಕ್ಟೋಬರ್ 6ಕ್ಕೆ ಬಾದ್ ಷಾ ನಟನೆಯ ಮೋಸ್ಟ್ ವಾಂಟೆಡ್ ಮಾರ್ಕ್ ಸಿನಿಮಾದ ಮೊದಲ ಹಾಡು ರಿಲೀಸ್ ಆಗುತ್ತಿದೆ.
ಸುದೀಪ್ ಕೊಟ್ಟ ಮಾತಿಗೆ ತಪ್ಪುತ್ತಿಲ್ಲ. ನನ್ ಕಡೆಯಿಂದ ಈ ವರ್ಷವೂ ಒಂದು ಸಿನಿಮಾ ಇರುತ್ತೆ ಎಂದಿದ್ದ ಬಾದ್ ಷಾ ಬರೀ ಆರೇ ತಿಂಗಳಲ್ಲಿ ಸಿನಿಮಾದ ಶೂಟಿಂಗ್ ಮಾಡಿ ಮುಗಿಸಿದ್ದಾರೆ. ಮಾರ್ಕ್ ಸಿನಿಮಾದ ಕೆಲವೊಂದು ಸಣ್ಣ ಪುಟ್ಟ ಕೆಲಸಗಳು ಬಿಟ್ಟರೆ ಮತ್ತೆಲ್ಲಾ ಚಿತ್ರೀಕರಣ ಆಗಿದೆ. ಹೀಗಾಗಿ ಅಕ್ಟೋಬರ್ 6ನೇ ತಾರೀಖುಯ ಮಾರ್ಕ್ನ ಮೊದಲ ಹಾಡು ಬಿಡುಗಡೆ ಮಾಡೋದಾಗಿ ಅನೌನ್ಸ್ ಮಾಡಿದ್ದಾರೆ. ವಿಶೇಷ ಅಂದ್ರೆ ಮ್ಯಾಕ್ಸ್ ಸಿನಿಮಾಗೆ ಮ್ಯೂಸಿಕ್ ಮಾಡಿ ಆ ಸಿನಿಮಾ ಗೆಲುವಿಗೆ ಕಾರಣ ಆಗಿದ್ದ ಅಜನೀಶ್ ಲೋಕನಾಥ್ ಈಗ ಬರುತ್ತಿರೋ ಮಾರ್ಕ್ ಚಿತ್ರಕ್ಕೂ ಮ್ಯೂಸಿಕ್ ಮಾಡಿದ್ದಾರೆ. ಈ ಭಾರಿ ಮಾರ್ಕ್ ಮ್ಯೂಸಿಕ್ ಮ್ಯಾಕ್ಸ್ ಸಿನಿಮಾಗಿಂತಲೂ ನೆಕ್ಸ್ಟ್ ಲೆವೆಲ್ ಅಂತ ಹೇಳಲಾಗ್ತಿದೆ.
ಸುದೀಪ್ ಮ್ಯಾಕ್ಸ್ ಸಿನಿಮಾ ಗೆದ್ದ ಮೇಲೆ ಬಿಲ್ಲ ರಂಗ ಭಾಷಾ ಸಿನಿಮಾ ಕೈಗೆತ್ತಿಕೊಂಡಿದ್ರು. ಆದ್ರೆ ಮ್ಯಾಕ್ಸ್ ಸಿನಿಮಾ ಡೈರೆಕ್ಟರ್ ವಿಜಯ್ ಕಾರ್ತಿಕೇಯ ಮಾರ್ಕ್ ಅನ್ನೋ ಅಧ್ಬುತ ಕತೆಯೊಂದನ್ನ ತಂದು ಕಿಚ್ಚನಿಗೆ ಹೇಳಿದ್ರು. ಹಿಂದೆ ಮುಂದೆ ಯೋಚ್ನೆ ಮಾಡದೇ ಒಪ್ಪಿದ ಸುದೀಪ್ ಮಾರ್ಕ್ ಶೂಟಿಂಗ್ಗೆ ಶಂಕುಸ್ಥಾಪನೆ ಮಾಡಿದ್ರು. ಮ್ಯಾಕ್ಸ್ನಲ್ಲಿ ಪೊಲೀಸ್ ಕಾಪ್ ಆಗಿದ್ದ ಸುದೀಪ್ ಮಾರ್ಕ್ ಸಿನಿಮಾದಲ್ಲೂ ಪೊಲೀಸ್ ರೋಲನ್ನೇ ನಿಭಾಯಿಸಿದ್ದಾರೆ. ಶೇಖರ್ ಚಂದ್ರ ಈ ಚಿತ್ರಕ್ಕೆ ಕ್ಯಾಮರಾ ಹಿಡಿದಿದ್ದು, ಸತ್ಯ ಜ್ಯೋತಿ ಫಿಲ್ಮ್ಸ್ ನಿರ್ಮಿಸುತ್ತಿದೆ. ಡಿಸೆಂಬರ್ 25ಕ್ಕೆ ಮಾರ್ಕ್ ಸಿನಿಮಾ ಬೆಳ್ಳಿತೆರೆ ಮೇಲೆ ಬರಲಿದೆ.