Jun 5, 2023, 2:28 PM IST
ರೆಬಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಅಂಬರೀಷ್ ಬಹುಕಾಲದ ಗೆಳತಿ ಅವಿವಾ ಬಿಡಪ ಜೊತೆ ಇಂದು (ಜೂನ್ 5) ದಾಂಪತ್ಯಕ್ಕೆ ಕಾಲಿಟ್ಟರು. ಇಂದು ಬೆಳಗ್ಗೆ 9:30 ರಿಂದ 10:30 ವರೆಗೆ ನಡೆದ ಮುಹೂರ್ತದಲ್ಲಿ ಅಭಿಷೇಕ್ ಮತ್ತು ಅವಿವಾ ಪತಿ-ಪತ್ನಿಯರಾದರು. ಅಭಿಷೇಕ್ ಮದುವೆ ಗೌಡರ ಸಾಂಪ್ರದಾಯದ ಪ್ರಕಾರ ನೆರವೇರಿದೆ. ಬೆಂಗಳೂರಿನ ಅರಮನೆ ಮೈದಾನದ ಚಾಮರವಜ್ರದಲ್ಲಿ ಅಭಿಷೇಕ್ ಅಂಬರೀಷ್ ಗೆಳತಿ ಅವಿವಾಗೆ ಮಾಂಗಲ್ಯಧಾರಾಣೆ ಮಾಡಿದರು. ಅಭಿ ಮದುವೆಗೆ ಅನೇಕ ಗಣ್ಯರು ಹಾಜರಾಗಿ ಶುಭಹಾರೈಸಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕುಟುಂಬ ಸಮೇತ ಮದುವೆಗೆ ಆಗಮಿಸಿ ನವ ಜೋಡಿಗೆ ಶುಭಹಾರೈಸಿದರು. ಮದುವೆ ಮಂಟಪದಲ್ಲೇ ಕಿಚ್ಚ ಅಭಿಷೇಕ್‌ಗೆ ಚಿನ್ನದ ಸರ ಗಿಫ್ಟ್ ಮಾಡಿದರು.