ಅಖಾಡಕ್ಕಿಳಿದ ಬಿಲ್ಲ ರಂಗ ಭಾಷ, ಏನಿದು ಫಸ್ಟ್ ಬ್ಲಡ್ ರಹಸ್ಯ?

ಅಖಾಡಕ್ಕಿಳಿದ ಬಿಲ್ಲ ರಂಗ ಭಾಷ, ಏನಿದು ಫಸ್ಟ್ ಬ್ಲಡ್ ರಹಸ್ಯ?

Published : Apr 17, 2025, 01:02 PM ISTUpdated : Apr 17, 2025, 01:12 PM IST

ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ 'ಬಿಲ್ಲ ರಂಗ ಭಾಷ' ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಹಿಮದ ನಡುವೆ ಕನ್ನಡಕ ಧರಿಸಿರುವ ಸುದೀಪ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಏಪ್ರಿಲ್​ 16ಕ್ಕೆ ಸರ್​ಪ್ರೈಸ್​ವೊಂದನ್ನ ಕೊಡ್ತಿನಿ  ಅಂದಿದ್ರು ಕಿಚ್ಚ ಸುದೀಪ್. ಇದೀಗ ಆ ಸರ್ಪ್ರೈಸ್ ಏನು ಅನ್ನೋದು ರಿವೀಲ್ ಆಗಿದೆ. ಕಿಚ್ಚನ ಬಹುನಿರೀಕ್ಷೆಯ ಬಿಲ್ಲ ರಂಗ ಭಾಷ ಸಿನಿಮಾದ ಶೂಟಿಂಗ್ ಶುರುವಾಗಿದೆ. ಸಿನಿಮಾ ಶುರುವಾಗೋ ವಿಷ್ಯ ಹಂಚಿಕೊಳ್ಳೋದ್ರ ಜೊತೆಗೆ ಚಿತ್ರದ ಫಸ್ಟ್ ಲುಕ್​ನ ತೋರಿಸಿದ್ದಾರೆ ಸುದೀಪ್. 

ಕಿಚ್ಚನ ಫಸ್ಟ್ ಲುಕ್ ಸೂಪರ್‌ ಆಗಿದ್ದು, ಹಿಮದ ನಡುವೆ ಕನ್ನಡಕ ಧರಿಸಿ ಸುದೀಪ್‌  ಪೋಸ್ ಕೊಟ್ಟಿದ್ದಾರೆ. ಇದರಲ್ಲಿ ಹಿಮದ ನಡುವೆ ದೊಡ್ಡ ಅರಮನೆ ಇದ್ದು, ಕಿಚ್ಚನ ಕನ್ನಡಕದಲ್ಲಿ ಹೊತ್ತಿ ಉರಿಯುತ್ತಿರುವ ಹಡಗಿನ ಚಿತ್ರವೊಂದು ಕಾಣಿಸಿಕೊಂಡಿದೆ. ಹಿಮ ತುಂಬಿರುವ ಬೆಟ್ಟಗಳ ಊರಿನಲ್ಲಿ ಸುದೀಪ್‌ ಯಾತ್ರೆಗೆ ಹೊರಟ ಸಾಹಸಿಗನಂತೆ  ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್ ಸಾಕಷ್ಟು ಕುತೂಹಲ ಮೂಡಿಸ್ತಾ ಇದೆ.

ಬಿಲ್ಲ ರಂಗ ಬಾಷಾ ಕನ್ನಡದ ಜೊತೆಗೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿನಲ್ಲೂ ಮೂಡಿಬರಲಿದ್ದು ಇದೊಂದು ಬಿಗ್ ಪ್ಯಾನ್ ಇಂಡಿಯಾ ಮೂವಿಯಾಗಲಿದೆ. ವಿಕ್ರಾಂತ್ ರೋಣಗೆ ಆಕ್ಷನ್ ಕಟ್ ಹೇಳಿದ್ದ ಅನೂಪ್ ಭಂಡಾರಿ ಈ ಸಿನಿಮಾದ ಸಾರಥಿಯಾಗಿದ್ದು, ಮತ್ತೊಂದು ಫ್ಯಾಂಟಸಿ ಕಹಾನಿ ಹೇಳುವ ಉತ್ಸಾಹದಲ್ಲಿದ್ದಾರೆ. 

05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
Read more