ಶುರುವಾಗುತ್ತಂತೆ 'ಕೆಜಿಎಫ್ ಚಾಪ್ಟರ್-3', ಹೇಗಿರಲಿದೆ ಸಿನಿಮಾ..?

ಶುರುವಾಗುತ್ತಂತೆ 'ಕೆಜಿಎಫ್ ಚಾಪ್ಟರ್-3', ಹೇಗಿರಲಿದೆ ಸಿನಿಮಾ..?

Published : Apr 17, 2022, 03:21 PM ISTUpdated : Apr 17, 2022, 05:17 PM IST

ಕೆಜಿಎಫ್ ಚಾಪ್ಟರ್-3 (KGF 3) ಸಿನಿಮಾದ ಸ್ಟೋರಿ ವಿದೇಶದಲ್ಲೇ ಸಾಗುತ್ತೆ ಅಂತ ಹೇಳಲಾಗ್ತಿದೆ. ಹೀಗಾಗಿ ಅಮೇರಿಕಾ ಮತ್ತು ಆಫ್ರಿಕಾದಲ್ಲಿ ಚಾಪ್ಟರ್-3 ಶೂಟಿಂಗ್ ನಡೆಯುತ್ತಂತೆ. ಕೆಜಿಎಫ್-3 ಕಂಪ್ಲೀಟ್ ರೆಟ್ರೋ ಸ್ಟೈಲ್ನಲ್ಲೇ ಮೂಡಿ ಬರಲಿದೆ.

ಕೆಜಿಎಫ್-2 (KGF 2) ಹಬ್ಬ ನಡೆಯುತ್ತಿದೆ. ಈ ಸಿನಿಮಾದ ಸಕ್ಸಸ್ ಕಂಡು ಇಡೀ ಸಿನಿ ಜಗತ್ತು ದಂಗಾಗಿದೆ.ಹಿಂದಿಯಲ್ಲಿ ಎರಡೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿ ಸೌತ್ನ ಯಾವ ಸಿನಿಮಾವೂ ಮಾಡಿರದ ದಾಖಲೆಯನ್ನ ಕೆಜಿಎಫ್-2 ಮಾಡಿದೆ. ಇದೇ ಮೊಲದ ಭಾರಿಗೆ ಎರಡೇ ದಿನದಲ್ಲಿ ಕೇರಳ, ಕರ್ನಾಟಕದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಮೊದಲ ಇಂಡಿಯನ್ ಸಿನಿಮಾ ಆಗಿದೆ ಕೆಜಿಎಫ್-2. ಅಷ್ಟೆ ಅಲ್ಲ ವಿದೇಶದಲ್ಲಿ ಮೊದಲ ಎರಡು ದಿನ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಕೂಡ ಕೆಜಿಎಫ್-2 ಅನ್ನೋ ಹೆಗ್ಗಳಿಕೆ ಪಡೆದಿದೆ. 

ಕೆಜಿಎಫ್ ಚಾಪ್ಟರ್-3 (KGF 3) ಸಿನಿಮಾದ ಸ್ಟೋರಿ ವಿದೇಶದಲ್ಲೇ ಸಾಗುತ್ತೆ ಅಂತ ಹೇಳಲಾಗ್ತಿದೆ. ಹೀಗಾಗಿ ಅಮೇರಿಕಾ ಮತ್ತು ಆಫ್ರಿಕಾದಲ್ಲಿ ಚಾಪ್ಟರ್-3 ಶೂಟಿಂಗ್ ನಡೆಯುತ್ತಂತೆ. ಕೆಜಿಎಫ್-3 ಕಂಪ್ಲೀಟ್ ರೆಟ್ರೋ ಸ್ಟೈಲ್ನಲ್ಲೇ ಮೂಡಿ ಬರಲಿದೆ. ಹೀಗಾಗಿ ಅದಕ್ಕೆ ಸಮಯ ಕೂಡ ಹಿಡಿಯಲಿದೆಯಂತೆ. ಒಂದ್ ಕಡೆ ಪ್ರಶಾಂತ್ ನೀಲ್ ಪ್ರಭಾಸ್ ಜೊತೆ ಸಲಾರ್ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಬಳಿಕೆ ಜ್ಯೂ,ಎನ್ಟಿಆರ್ ಜೊತೆ ನೀಲ್ ಬ್ಯುಸಿ ಆಗ್ತಿದ್ದಾರೆ. ಮತ್ತೊಂದ್ ಕಡೆ ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾದ ಸ್ಕ್ರಿಪ್ಟ್ ರೆಡಿ ಮಾಡಿಸುತ್ತಿದ್ದಾರೆ. ಇಬ್ಬರು ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಆಗಲಿದ್ದು, ಆ ಕೆಲಸಗಳು ಕಂಪ್ಲೀಟ್ ಆದ್ಮೇಲೆ ಕೆಜಿಎಫ್-3 ತೆರೆದುಕೊಳ್ಳಲಿದೆ ಅಂತ ಹೇಳಲಾಗ್ತಿದೆ. 

ಏಪ್ರಿಲ್ 14 ರಂದು ಕೆಜಿಎಫ್-2 ಸಿನಿಮಾ ನೋಡಿ ಖುಷಿಯಲ್ಲಿದ್ದವರಿಗೆ ಮತ್ತೊಂದು ಸರ್ಪ್ರೈಸ್ ಸಿಕ್ಕಿತ್ತು. ಈ ಸಿನಿಮಾದ ಪಾರ್ಟ್-3 ಸಿದ್ಧಗೊಳ್ಳಲಿದೆ ಅನ್ನೋ ವಿಚಾರ ಸಿನಿಮಾದ ಎಂಡ್ ಕಾರ್ಡ್‌ನಲ್ಲಿ ರಿವಿಲ್ ಆಗಿತ್ತು. ಕೆಜಿಎಫ್-2 ಸಿನಿಮಾ ಪ್ರದರ್ಶನ ಆಗಿ ಎಂಡ್ ಕ್ರೆಡಿಟ್ ಕಾರ್ಡ್ ತೋರಿಸುವಾಗ ಸಿನಿಮಾ ಮುಗೀತು ಅಂತ ಹಲವು ಥಿಯೇಟರ್‌ನಿಂದ ಎದ್ದು ಹೊರ ನಡೆದಿದ್ದರು. ಆದ್ರೆ ಎಂಡ್ ಕ್ರೆಡಿಟ್ಸ್ ತೋರಿಸಿದ ಬಳಿಕೆ ಕೆಜಿಎಫ್-3 ಬರುತ್ತೆ ಅಂತ ಸೂಚನೆ ಕೊಡಲಾಗಿತ್ತು. ರಾಕಿ ವಿದೇಶದಲ್ಲಿ ಹಲವು ಕ್ರೈಂ ಮಾಡಿರುತ್ತಾನೆ. ಆ ದಾಖಲೆಗಳನ್ನ ಅಧಿಕಾರಿಗಳು ಪ್ರಧಾನಿ ರಮಿಕಾ ಸೇನ್ ಎದುರು ತೆರೆದಿಡುತ್ತಾರೆ. ಆ ಬಳಿಕೆ ಕೆಜಿಎಫ್-3 ಅನ್ನೋ ಬುಕ್ಅನ್ನ ತೋರಿಸಿದ್ರು. ಹೀಗಾಗಿ ಕೆಜಿಎಫ್-3 ಚಿತ್ರದ ಶೂಟಿಂಗ್ ಯಾವಾಗ.? ಮತ್ತು ಎಲ್ಲಿ ಸಿನಿಮಾ ಚಿತ್ರೀಕರಣ ಶುರುವಾಗುತ್ತೆ ಅಂತ ಹಲವರಲ್ಲಿ ಕುತೂಹಲ ಇದೆ.
 

 

02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
Read more