ಕನ್ನಡದಲ್ಲಿ ಹೆಜ್ಜಾರು ಎಂಬ ವಿಭಿನ್ನ ಕಥೆಯ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಈಗಾಗಲೇ ಪ್ರಚಾರ ಕಾರ್ಯ ಶುರುವಾಗಿದೆ.
'ಹೆಜ್ಜಾರು' ಸಿನಿಮಾದ ತಂಡ ಚಿತ್ರೀಕರಣ ಮುಗಿಸಿ, ಇದೀಗ ವಿಭಿನ್ನವಾಗಿ ಪ್ರಚಾರಕ್ಕೆ ಮುಂದಾಗಿದೆ. ತಮ್ಮ ಸಿನಿಮಾ ಬರುತ್ತಿದೆ ಅಂತ ಡಮ್ಮಿ ಸುದ್ದಿಗೋಷ್ಠಿ ಮಾಡಿ ಸಿನಿಮಾದ ಪ್ರಚಾರಕ್ಕೆ ಚಾಲನೆ ಕೊಡಲಾಗಿದೆ. ಈ ಚಿತ್ರದಲ್ಲಿ ಭಗತ್ ಆಳ್ವ ನಾಯಕ ನಟನಾಗಿ ನಟಿಸಿದ್ದು, ಲಿಯೋನಿಲ್ಲಾ ಶ್ವೇತಾ ಡಿಸೋಜ ನಾಯಕಿಯಾಗಿ ಅಭಿನಯಿಸಿದ್ದಾರೆ. ಇನ್ನುಳಿದಂತೆ ಬಹುತೇಕ ರಂಗಭೂಮಿ ಕಲಾವಿದರು ಸಿನಿಮಾದಲ್ಲಿದ್ದಾರೆ. ಗೋಪಾಲ್ ದೇಶಪಾಂಡೆ, ನವೀನ್ ಕೃಷ್ಣ, ಮುನಿ, ಅರುಣ ಬಾಲರಾಜ್ ಹೀಗೆ ಪರಿಚಿತ ಕಲಾವಿದರು ಸಹ ಜೊತೆಯಾಗಿದ್ದಾರೆ. ಧಾರವಾಹಿಯ ಹೆಸರಾಂತ ಬರಹಗಾರ ಹರ್ಷಪ್ರಿಯ ಮೊದಲ ಬಾರಿಗೆ ಈ ಚಿತ್ರದ ಮೂಲಕ ನಿರ್ದೇಶನದ ಕ್ಯಾಪ್ ತೊಟ್ಟಿದ್ದಾರೆ. ಕೆ.ಎಸ್. ರಾಮ್‌ಜಿ ಹೆಜ್ಜಾರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.