Feb 1, 2023, 6:35 PM IST
ರಸ್ತೆ ಅಪಘಾತದಲ್ಲಿ ಭೀಕರವಾಗಿ ಗಾಯಗೊಂಡಿದ್ದ ನಟಿ ರಿಷಿಕಾ ಸಿಂಗ್ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಸಂಪೂರ್ಣ ಬೆಡ್‌ನಲ್ಲೇ ಇದ್ದ ರಿಷಿಕಾ ಇದೀಗ ಮತ್ತೆ ಎದ್ದು ಓಡುತ್ತಿದ್ದಾರೆ. ಹಾಸಿಗೆ ಇಂದ ಎದ್ದು ಬಂದ ನಟಿ ರಿಷಿಕಾ ಸಿಂಗ್ ತನ್ನ ಕಷ್ಟದ ಪಯಣದ ವಿಡಿಯೋ ಮಾಡಿ ರಿಲೀಸ್ ಮಾಡಿದ್ದಾರೆ. 2020ರಲ್ಲಿ ನಟಿ ರಿಷಿಕಾ ಚಲಿಸುತ್ತಿದ್ದ ಕಾರು ಅಪಘಾತವಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತದದ ರಬಸಕ್ಕೆ ರಿಷಿಕಾ ಎರಡು ಕಾಲು ಸ್ವಾದೀನ ಕಳೆದುಕೊಂಡಿತ್ತು. ಇದೀಗ ಗುಣಮುಖರಾಗಿದ್ದು ನಡೆದಾಡುತ್ತಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.