ದಾಖಲೆಯ ಮೊತ್ತಕ್ಕೆ ಕೆಜಿಎಫ್‌ 2 ಪ್ರಿ ರಿಲೀಸ್ ಟಿಕೆಟ್‌ ಮಾರಾಟ: ಯಶ್‌ ಅಬ್ಬರಕ್ಕೆ ದಂಗಾದ ಬಿಟೌನ್‌

ದಾಖಲೆಯ ಮೊತ್ತಕ್ಕೆ ಕೆಜಿಎಫ್‌ 2 ಪ್ರಿ ರಿಲೀಸ್ ಟಿಕೆಟ್‌ ಮಾರಾಟ: ಯಶ್‌ ಅಬ್ಬರಕ್ಕೆ ದಂಗಾದ ಬಿಟೌನ್‌

Published : Apr 09, 2022, 03:16 PM ISTUpdated : Apr 09, 2022, 03:52 PM IST

ಎಲ್ಲೆಲ್ಲೂ ಕೆಜಿಎಫ್ ಚಾಪ್ಟರ್-2 ಅಬ್ಬರ, ಆರ್ಭಟ, ದರ್ಬಾರ್ ಸೌಂಡು, ಗುಂಗು, ಕಿಕ್ಕು ಎಲ್ಲವೂ ಇದೆ.  ಬೆಂಗಳೂರು, ಮುಂಬೈ, ಡೆಲ್ಲಿ, ಚೆನ್ನೈ, ಹೈದರಾಬಾದ್, ಕೇರಳ ಆಂಧ್ರ ಯಾವ್ ಕಡೆ ಹೋದ್ರು ಅಲ್ಲಿ ಕಾಣಿಸೋದು ಕೆಜಿಎಫ್-2 ಸಿನಿಮಾದ ಕಟೌಟ್‌ಗಳು.  

ಎಲ್ಲೆಲ್ಲೂ ಕೆಜಿಎಫ್ ಚಾಪ್ಟರ್-2 ಅಬ್ಬರ, ಆರ್ಭಟ, ದರ್ಬಾರ್ ಸೌಂಡು, ಗುಂಗು, ಕಿಕ್ಕು ಎಲ್ಲವೂ ಇದೆ.  ಬೆಂಗಳೂರು, ಮುಂಬೈ, ಡೆಲ್ಲಿ, ಚೆನ್ನೈ, ಹೈದರಾಬಾದ್, ಕೇರಳ ಆಂಧ್ರ ಯಾವ್ ಕಡೆ ಹೋದ್ರು ಅಲ್ಲಿ ಕಾಣಿಸೋದು ಕೆಜಿಎಫ್-2 ಸಿನಿಮಾದ ಕಟೌಟ್‌ಗಳು.  ಹೀಗಾಗಿ ನಮ್ಮ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್‌ರ ಅಬ್ಬರಕ್ಕೆ ಬಾಲಿವುಡ್‌ನ ಟಾಪ್ ಸ್ಟಾರ್ಸ್‌ಗಳ ಜಗತ್ತು ದಂಗಾಗುತ್ತಿದೆ. ಇದಕ್ಕೆ ಮತ್ತೊಂದು ಕಾರಣ ಕೆಜಿಎಫ್-2 ಸಿನಿಮಾದ ಟಿಕೆಟ್ ಬುಕ್ಕಿಂಗ್ ಅಬ್ಬರ. ಯಾಕಂದ್ರೆ ಬಾಲಿವುಟ್‌ನ ಕೆಜಿಎಫ್-2 ಸಿನಿಮಾದ ಟಿಕೇಟ್ಗಾಗಿ ಭಾರಿ ಬೇಡಿಕೆ ಬಂದಿದ್ದು, ಅಲ್ಲಿನ ಯಶ್ ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಬುಕ್ಕಿಂಗ್ ಮಾಡುತ್ತಿದ್ದಾರೆ. 

ಕೆಜಿಎಫ್-2 ಸಿನಿಮಾದ ಹಿಂದಿ ವರ್ಷನ್ ಟಿಕೆಟ್ ಬುಕ್ಕಿಂಗ್ ಆರಂಭ ಆಗಿ 24 ಗಂಟೆ ಕಳೆದಿದೆ. ಮುಂಬೈ ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಕೆಜಿಎಫ್-2 ಟಿಕೆಟ್ ಬುಕ್ಕಿಂಗ್ ನಡೆಯುತ್ತಿದೆ. ವಿಶೇಷ ಅಂದ್ರೆ ಮುಂಬೈ ನಗರ ಒಂದರಲ್ಲೇ ಕೆಜಿಎಫ್-2 ಸಿನಿಮಾದ ಒಂದು ಲಕ್ಷಕ್ಕು ಅಧಿಕ ಟಿಕೆಟ್‌ಗಳು ಮಾರಾಟ ಆಗಿದೆ. ಈ ಮೂಲಕ ಬರೀ 12 ಗಂಟೆಯಲ್ಲಿ ಕೆಜಿಎಫ್-2 ಪ್ರೀ ರಿಲೀಸ್ ಟಿಕೆಟ್ ಬುಕ್ಕಿಂಗ್ನಲ್ಲಿ 3,50(ಮೂರುವರೆ ಕೋಟಿ)ಯನ್ನ ಕೆಜಿಎಫ್-2 ಸಿನಿಮಾ ಗಳಿಸಿದೆ. ಈ ಟಿಕೆಟ್ ಬುಕ್ಕಿಂಗ್ ಅಬ್ಬರ ಉತ್ತರ ಭಾರತದಾದ್ಯಂತ ಹಬ್ಬುತ್ತಿದ್ದು, ಕೆಜಿಎಫ್-2 ಸಿನಿಮಾ ಬಿಡುಗಡೆ ಆದ ಮೊದಲ ದಿನ ಹಿಂದಿ ಭಾಷೆಯಲ್ಲಿ ಬರೋಬ್ಬರಿ 25 ಕೋಟಿ ಕಲೆಕ್ಷನ್ ಮಾಡುತ್ತೆ ಅಂತ ಹೇಳಲಾಗ್ತಿದೆ.

ದೇಶವ್ಯಾಪಿ ಕೆಜಿಎಪ್-2 ಸಿನಿಮಾದ ಜ್ವರ ಇದೆ. ಈಶಾನ್ಯ ರಾಜ್ಯ ಒಡಿಸ್ಸಾದಲ್ಲಿ ಕೆಜಿಎಫ್-2 ಸಿನಿಮಾದ ಐದು ದಿನದ ಟಿಕೆಟ್ಗಳು ಸೋಲ್ಡ್ ಆಗಿದೆ ಅಂತ ಅಲ್ಲಿನ ಯಶ್ ಅಭಿಮಾನಿಗಳು ಟ್ವೀಟ್ ಮಾಡಿ ಹೇಳುತ್ತಿದ್ದಾರೆ. ಮತ್ತೊಂದ್ ಕಡೆ ಉತ್ತರ ಭಾರತದಲ್ಲಿ ಕೆಜಿಎಫ್-2 ಸಿನಿಮಾದ ಟಿಕೆಟ್ ರೇಟ್ ಕೂಡ ಹೆಚ್ಚಾಗಿದ್ದು 600 ರೂಪಾಯಿಕೆ ಒಂದು ಟಿಕೆಟ್ ಮಾರಾಟ ಆಗ್ತಿದೆ. ಇದನ್ನೆಲ್ಲಾ ನೋಡುತ್ತಿದ್ರೆ ಕೆಜಿಎಫ್-2 ಹಿಂದಿಯಲ್ಲಿ 100 ಕೋಟಿ ಅಲ್ಲ 300 ಕೋಟಿ ಕ್ಲಬ್ ಸೇರುತ್ತೆ ಅಂತ ಹೇಳಲಾಗ್ತಿದೆ.

24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
Read more