Vaishnavi Chandrashekar | Updated: Mar 22, 2025, 1:47 PM IST
ಬೆಟ್ಟಿಂಗ್ ಆ್ಯಪ್‌ಗಳನ್ನ ಪ್ರಚಾರ ಮಾಡಿದ ಆರೋಪದ ಬಗ್ಗೆ ತೆಲುಗು ರಾಜ್ಯದಲ್ಲಿ ದೊಡ್ಡ ಅಲೆ ಎದ್ದಿದೆ. ಬೆಟ್ಟಿಂಗ್ ಅಪ್ಲಿಕೇಶನ್ ಪ್ರಚಾರ ಮಾಡುತ್ತಿದ್ದ, ತೆಲುಗು ನಟ - ನಟಿಯರು ಮತ್ತು Influencerಗಳು ಸೇರಿದಂತೆ 25 ಜನರಿಗೆ ಪೊಲೀಸರು ನೋಟೀಸ್ ಕಳಿಸಿದ್ದಾರೆ. ಈ ಲಿಸ್ಟ್‌ನಲ್ಲಿ ವಿಜಯ್ ದೇವರಕೊಂಡ, ಮಂಚು ಲಕ್ಷ್ಮಿ, ಪ್ರಣೀತಾ, ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ನಿಧಿ ಅಗರ್ವಾಲ್ ಸೇರಿದಂತೆ ಹಕವು ಖ್ಯಾತ ತಾರೆಯರು ಇದ್ದಾರೆ. ಈ ಬಗ್ಗೆ ಯಾರೂ ಕೂಡ ತುಟಿಕ್ ಪಿಟಕ್ ಅಂದಿಲ್ಲ. ಆದರೆ ದಿಢೀರ್ ಅಂತ ಇನ್ಸ್ಟಾಗ್ರಾಮ್ ಲೈವ್‌ಗೆ ಬಂದು ನಟ ಪ್ರಕಾಶ್ ರಾಜ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ, ನಾನು 2016ರಲ್ಲಿ ಬೆಟ್ಟಿಂಗ್ ಆಪ್ ಜಾಹೀರಾತಿನಲ್ಲಿ ನಟಿಸಿದ್ದೆ. ಈಗ ʻನನ್ನ ತಪ್ಪು ಅರಿವಾಗಿದೆʼ ಅಂದಿದ್ದಾರೆ.