Sep 4, 2023, 12:29 PM IST
ಇಂಡಿಯಾ ಸಿನಿಮಾ ಜಗತ್ತಲ್ಲಿ ಈಗ ಕಾಲಿವುಡ್ ತಲೈವಾ ಸೂಪರ್ ಸ್ಟಾರ್ ರಜನಿಕಾಂತ್(Rajinikanth) ಅಭಿನಯದ ಜೈಲರ್(Jailer) ಸಿನಿಮಾದ್ದೆ ಸದ್ದು. ಯಾಕಂದ್ರೆ ಜೈಲರ್ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಜೈಲರ್ ಬಿಡುಗಡೆ ಆಗಿ 22 ದಿನಗಳಲ್ಲಿ ಭಾರತದಲ್ಲಿ 350 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದು, ವಿಶ್ವದಾದ್ಯಂತ 600 ಕೋಟಿ ಕಲೆಕ್ಷನ್ ಗಡಿ ದಾಟಿದೆ. ಇಂತಹ ಬಿಗ್ ಸಕ್ಸಸ್ ಕೊಟ್ಟ ತಲೈವಾ ರಜನಿಕಾಂತ್‌ಗೆ ಈಗ ಭರ್ಜರಿ ಉಡುಗೊರೆಯೊಂದು ರಜನಿಕಾಂತ್ ಮನೆ ಪಾರ್ಕಿಂಗ್ ಏರಿಯಾದಲ್ಲಿ ಬಂದು ನಿಂತಿದೆ. ನಿಮಗೆಲ್ಲಾ ಲಿಂಗಾ ಸಿನಿಮಾ ನೆನಪಿರಬೇಕು. ಈ ಸಿನಿಮಾ ಬಂದಾಗ ಲಿಂಗ ಚಿತ್ರದಿಂದ ಲಾಸ್ ಆಯ್ತು ಅಂತ ಕಾಲಿವುಡ್‌ನ ಕೆಲ ವಿತರಕರು ಹಾಗೂ ನಿರ್ಮಾಪಕರು ಕೂಗಾಡಿದ್ರು. ರಜನಿಕಾಂತ್‌ರನ್ನ ನಂಬಿದ್ರೆ ಬಿಕ್ಷಾಪಾತ್ರೆಯೇ ಗತಿ ಅಂತ ಹೇಳಿದ್ರು. ಆದ್ರೆ ಆ ನಂತರ ಬಂದ ತಲೈವಾ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಹಿಟ್ ಆಗ್ತಿವೆ. ಅದರಲ್ಲೂ ಈಗ ಬಂದಿರೋ ಜೈಲರ್ ಸಿನಿಮಾ ಸೂಪರ್ ಹಿಟ್ ಆಗಿದೆ. ಈಗ ಅದೇ ಕಾಲಿವುಡ್ ನ ಜೈಲರ್ ನಿರ್ಮಾಪಕ ಕಲೈನಿಧಿ ಮಾರನ್( Kalainidhi Maran) ತಲೈವಾರನ್ನ ಹುಡುಕಿ ಬಂದು ಜೈಲರ್ ಗೆಲ್ಲಿಸಿದ್ದಕ್ಕೆ ಧನ್ಯವಾದ ಹೇಳಿದ್ದಾರೆ. ಅಷ್ಟೆ ಅಲ್ಲ ರಜನಿಕಾಂತ್ ಮನೆಮುಂದೆ 2 BMW ಕಾರು ನಿಲ್ಲಿಸಿ ಯಾವ್ದು ಬೇಕೋ ತಗೊಳ್ಳಿ ಅಂತ ದುಬಾರಿ ಬೆಲೆಯ ಬಿಎಮ್ಡಬ್ಲ್ಯು ಕಾರು ಗಿಫ್ಟ್ ಕೊಟ್ಟಿದ್ದಾರೆ. ಈ ಸಿನಿಮಾ ಒಂದಕ್ಕೆ 210 ಕೋಟಿ ಸಂಭಾವನೆಯನ್ನ ಸೂಪರ್ ಸ್ಟಾರ್ ಪಡೆದಿದ್ದು, ದಳಪತಿ ವಿಜಯ್ ಪಡೆಯುತ್ತಿದ್ದ 200 ಕೋಟಿ ಸಂಭಾವನೆ ದಾಖಲೆಯನ್ನೇ ಮುರಿದಿದ್ದಾರೆ ರಜನಿಕಾಂತ್..
ಇದನ್ನೂ ವೀಕ್ಷಿಸಿ: ಇಳಿ ಸಂಜೆ ಕಡಲ ತೀರದಲ್ಲಿ ರೀಷ್ಮಾ ತಲೆ ಕೆಡಿಸಿದ ಧನ್ವೀರ್..!