Dec 16, 2023, 9:56 AM IST
ನಟ ದರ್ಶನ್ ಅಭಿನಯದ ಕಾಟೇರ ಸಿನಿಮಾ ರಿಲೀಸ್‌ಗೆ ಡೇಟ್ ಫಿಕ್ಸ್ ಆಗಿದೆ. ಇದೇ ಡಿಸೆಂಬರ್ 29ಕ್ಕೆ ಕಾಟೇರ ಸಿನಿಮಾ(Kaatera movie) ರಾಜ್ಯಾದ್ಯಂತ ರಿಲೀಸ್ ಆಗುತ್ತೆ. ವರ್ಷದ ಕೊನೆಯಲ್ಲಿ ತೆರೆಗೆ ಬರೋ ಸಿನಿಮಾ ಮೇಲೆ ಕನ್ನಡ ಸಿನಿ ಪ್ರೇಕ್ಷಕರು ಒಂದು ಕಣ್ಣಿಟ್ಟಿದ್ದಾರೆ. ಯಾಕಂದ್ರೆ ಡಿಸೆಂಬರ್ ಕೊನೆಯಲ್ಲಿ ಬರೋ ಸಿನಿಮಾಗಳು ಹಿಟ್ ಆಗ್ತಾವೆ ಅನ್ನೊ ನಂಬಿಕೆ ಇದೆ. ಹೀಗಾಗಿ ಕಾಟೇರ ಹಿಟ್ ಆಗಬಹುದು. ಚನ್ನಾಗಿರಬಹುದು ಅನ್ನೋ ನಂಬಿಕೆ. ಇದೀಗ ಕಾಟೇರ ಟ್ರೈಲರ್(Trailer) ರಿಲೀಸ್‌ಗೂ ಕೌಟ್‌ಡೌನ್ ಸ್ಟಾರ್ಟ್ ಆಗಿದೆ. ತುರಣ್ ಸುದೀರ್ ನಿರ್ದೇಶನದ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಕಾಟೇರ ಸಿನಿಮಾದ ಹಾಡುಗಳು(Songs) ರಿಲೀಸ್ ಆಗಿವೆ. ಇನ್ನೇನು ಸಿನಿಮಾ ರಿಲೀಸ್‌ಗೆ 14 ದಿನ ಮಾತ್ರ ಭಾಕಿ ಇದೆ. ಆದ್ರೆ ಟ್ರೈಲರ್ ಮಾತ್ರ ಇನ್ನು ಬಿಡುಗಡೆ ಆಗಿಲ್ಲ. ಬಟ್ ಅದಕ್ಕೂ ಈಗ ಡೇಟ್ ಪ್ಲೇಸ್ ಫಿಕ್ಸ್ ಆಗಿದೆ. ಡಿಸೆಂಬರ್ 16ರ ಸಂಜೆ 6.30ಕ್ಕೆ ಹುಬ್ಬಳ್ಳಿಯಲ್ಲಿ ಟ್ರೈಲರ್ ರಿಲೀಸ್ ಆಗಲಿದೆ. ಈ ಬಗ್ಗೆ ಬೆಂಗಳೂರಿನ(Bengaluru ಕಲಾವಿಧರ ಸಂಘದಲ್ಲಿ ಸುದ್ದಿಗೋಷ್ಟಿ ಮಾಡಿದ ಚಿತ್ರತಂಡ ಸಿನಿಮಾದ ಬಗ್ಗೆ ಮಾಹಿತಿ ನೀಡಿತಿದೆ. ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಕಾಟೇರ ಸಿನಿಮಾದಲ್ಲಿ ನಟ ದರ್ಶನ್ಗೆ(Darshan) ಜೋಡಿಯಾಗಿ ಮಾಲಾಶ್ರೀ ಮಗಳು ಆರಾಧನಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಆರಾಧನಾಗೆ ಇದು ಡೆಬ್ಯೂ ಸಿನಿಮಾ. ಹೀಗಾಗಿ ಈ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
ಇದನ್ನೂ ವೀಕ್ಷಿಸಿ: ಡಿವೈನ್ ಸ್ಟಾರ್ ರಿಷಬ್ ಹೆಗಲೇರಿತು ಮತ್ತೊಂದು ಹೆಗ್ಗಳಿಕೆ! ಯಾರೂ ಮಾಡದ ರೆಕಾರ್ಡ್ ಸೃಷ್ಟಿಸಿದ ಕಾಡು ಬೆಟ್ಟ ಶಿವ..!