Jailer Movie: ಬೆಂಗಳೂರಿನಲ್ಲಿ ದಾಖಲೆ ಬರೆದ ಜೈಲರ್‌ !

Jailer Movie: ಬೆಂಗಳೂರಿನಲ್ಲಿ ದಾಖಲೆ ಬರೆದ ಜೈಲರ್‌ !

Published : Aug 12, 2023, 08:41 AM IST

ಜೈಲರ್‌ ಸಿನಿಮಾ ಬೆಂಗಳೂರಿನಲ್ಲಿ ವಿನೂತನ ದಾಖಲೆ ಬರೆದಿದೆ. ಬಿಡುಗಡೆಯಾದ ಮೊದಲ ದಿನವೇ 1092 ಪ್ರದರ್ಶನಗಳನ್ನು ಪಡೆದುಕೊಂಡಿದೆ.
 

ಬಂದೇ ಬಿಡ್ತು ಜೈಲರ್..ಸೂಪರ್ ಸ್ಟಾರ್ ರಜನಿಕಾಂತ್(Rajinikanth) ಶಿವಣ್ಣ ನಟನೆಯ ಬಹು ನಿರೀಕ್ಷಿತ ಚಿತ್ರ ಜೈಲರ್(Jailer) ತೆರೆಗೆ ಅಪ್ಪಳಿಸಿದೆ.‌ ಹಾಡುಗಳು ಹಾಗೂ ಟ್ರೈಲರ್ ಮೂಲಕ‌ ಬೃಹತ್ ನಿರೀಕ್ಷೆಯನ್ನು ಹುಟ್ಟುಹಾಕಿದ್ದ ಜೈಲರ್ ಚಿತ್ರ ವಿವಿಧೆಡೆ ಪ್ರದರ್ಶನವನ್ನು ಕಾಣ ತೊಡಗಿದೆ. ಬಹು ದಿನಗಳ ಬಳಿಕ ಬೆಳ್ಳಿ ತೆರೆ ಮೇಲೆ ತಲೈವಾ ದರ್ಶನ ಪಡೆದಿದ್ದಾರೆ ಸಿನಿ ರಸಿಕರು. ಈ ಸಿನಿಮಾ ರಜನಿಕಾಂತ್ ಹಳೆಯ ದಾಖಲೆಗಳನ್ನು ಉಡೀಸ್ ಮಾಡಿದೆ. ತಮಿಳುನಾಡಿನಲ್ಲಿ ಮಾತ್ರವಲ್ಲದೇ ಇತರೆ ರಾಜ್ಯಗಳಲ್ಲೂ ಸಹ ಜೈಲರ್ ಅಬ್ಬರ ಜೋರಾಗಿದ್ದು, ವಿಶೇಷವಾಗಿ ಬೆಂಗಳೂರಿನಲ್ಲಿ(Bengaluru) ಚಿತ್ರ ಅಬ್ಬರದ ಪ್ರದರ್ಶನಗಳನ್ನು ಪಡೆದುಕೊಂಡು ಇಲ್ಲಿಯವರೆಗೂ ಯಾವ ಚಿತ್ರವೂ ಮಾಡದ ದಾಖಲೆಯನ್ನು ಬರೆದಿದೆ‌. ಹೌದು, ಜೈಲರ್ ಚಿತ್ರ ಬೆಂಗಳೂರಿನಲ್ಲಿ ವಿನೂತನ ದಾಖಲೆ ಬರೆದಿದೆ. ಬಿಡುಗಡೆಯ ದಿನ ಬೆಂಗಳೂರಿನಲ್ಲಿ ಅತಿಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡ ಚಿತ್ರಗಳ‌ ಪಟ್ಟಿಯಲ್ಲಿ ರಾಕಿಂಗ್ ಸ್ಟಾರ್ ಯಶ್(Yash) ನಟನೆಯ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಹಿಂದಿಕ್ಕಿರುವ ರಜನಿಕಾಂತ್ ನಟನೆಯ ಜೈಲರ್ ವಿನೂತನ ದಾಖಲೆಯನ್ನು ಬರೆದಿದೆ. ಬೆಂಗಳೂರಿನಲ್ಲಿ ಮೊದಲ ದಿನ ಜೈಲರ್ ಚಿತ್ರಕ್ಕೆ ತಮಿಳು, ಕನ್ನಡ ಹಾಗೂ ತೆಲುಗು ಈ ಮೂರೂ ಅವತರಣಿಕೆಗಳು ಸೇರಿದಂತೆ ಬರೋಬ್ಬರಿ 1092 ಪ್ರದರ್ಶನಗಳು ಲಭಿಸಿದ್ದು, ಇದು ನಗರದಲ್ಲಿ ಚಿತ್ರವೊಂದಕ್ಕೆ ಬಿಡುಗಡೆ ದಿನ ಲಭಿಸಿದ ಅತಿಹೆಚ್ಚು ಪ್ರದರ್ಶನಗಳ ಸಂಖ್ಯೆಯಾಗಿದೆ. ಬೆಂಗಳೂರಿನಲ್ಲಿ ಬಿಡುಗಡೆ ದಿನ ಅತಿಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡ ಟಾಪ್ 3 ಚಿತ್ರಗಳು ಹೀಗಿವೆ ಜೈಲರ್ - 1092 ಪ್ರದರ್ಶನಗಳು, ಕೆಜಿಎಫ್ ಚಾಪ್ಟರ್ 2 - 1037 ಪ್ರದರ್ಶನಗಳು, ಅವತಾರ್ ದ ವೇ ಆಫ್ ವಾಟರ್ - 1014 ಪ್ರದರ್ಶಗಳು ದೊರಕಿದ್ದವು.

ಇದನ್ನೂ ವೀಕ್ಷಿಸಿ:  ಖುಷಿ ಟ್ರೈಲರ್ ರಿಲೀಸ್; ವಿಜಯ್ ದೇವರಕೊಂಡ- ಸಮಂತಾ ಕೆಮಿಸ್ಟ್ರಿ ಹೇಗಿದೆ?

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more