Totapuri: 'ಬಾಗ್ಲು ತೆಗಿ ಮೇರಿ ಜಾನ್' ಹಾಡು ಹಿಟ್ ಆಗಿದ್ದಕ್ಕೆ ಧನ್ಯವಾದ ತಿಳಿಸಿದ ಜಗ್ಗೇಶ್!

Totapuri: 'ಬಾಗ್ಲು ತೆಗಿ ಮೇರಿ ಜಾನ್' ಹಾಡು ಹಿಟ್ ಆಗಿದ್ದಕ್ಕೆ ಧನ್ಯವಾದ ತಿಳಿಸಿದ ಜಗ್ಗೇಶ್!

Suvarna News   | Asianet News
Published : Feb 16, 2022, 01:39 PM IST

ನವರಸ ನಾಯಕ ಜಗ್ಗೇಶ್ ನಟಿಸಿ, ವಿಜಯ್  ಪ್ರಸಾದ್ ನಿರ್ದೇಶನ ಮಾಡಿರುವ  ‘ತೋತಾಪುರಿ-1’ ಚಿತ್ರದ  'ಬಾಗ್ಲು ತೆಗಿ ಮೇರಿ ಜಾನ್' ಹಾಡು ಸೂಪರ್​ ಹಿಟ್​ ಆಗಿದೆ. ಈ ಬಗ್ಗೆ ನಟ ಜಗ್ಗೇಶ್ ನನ್ನ ಅಭಿಮಾನಿಗಳಿಗೆ ನಾನು ಮೊದಲು ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
 

ನವರಸ ನಾಯಕ ಜಗ್ಗೇಶ್ (Jaggesh) ನಟಿಸಿ, ವಿಜಯ್  ಪ್ರಸಾದ್ (Vijay Prasad) ನಿರ್ದೇಶನ ಮಾಡಿರುವ  ‘ತೋತಾಪುರಿ-1’ (Totapuri) ಚಿತ್ರವು ಬಿಡುಗಡೆಗೆ ಸಜ್ಜಾಗಿದೆ. ವಿಶೇಷವಾಗಿ ಹಾಡಿನ ಮೂಲಕ ಈ ಚಿತ್ರ ಸಖತ್​ ಸದ್ದು ಮಾಡುತ್ತಿದ್ದು, 'ಬಾಗ್ಲು ತೆಗಿ ಮೇರಿ ಜಾನ್' (Baglu Tegi Meri Jaan) ಹಾಡು ಸೂಪರ್​ ಹಿಟ್​ ಆಗಿದೆ. ಯೂಟ್ಯೂಬ್​ನಲ್ಲಿ ಈ ಹಾಡನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಈ ಬಗ್ಗೆ ನಟ ಜಗ್ಗೇಶ್ 'ನನ್ನ ಅಭಿಮಾನಿಗಳಿಗೆ ನಾನು ಮೊದಲು ಧನ್ಯವಾದ ಸಲ್ಲಿಸುತ್ತೇನೆ. ನನ್ನ ಇಷ್ಟು ವರ್ಷಗಳ ವೃತ್ತಿ ಜೀವನದಲ್ಲಿ 8ರಿಂದ 10 ಮಿಲಿಯನ್​ ವೀವ್ಸ್​ ಆಗುವಂತಹ ಸಾಂಗ್​ ಸಿಕ್ಕಿದ್ದು ಇದೇ ಮೊದಲು. 

'ತೋತಾಪುರಿ' ಅದಿತಿ ಲವ್ ಸಾಂಗ್; ತೊಟ್ಟು ಬೊಟ್ಟಿನ ಕಥೆ ಹೇಳಿದ Jaggesh!

ಜನರು ಈ ಹಾಡನ್ನು ತುಂಬ ಇಷ್ಟಪಟ್ಟಿದ್ದಾರೆ. ಆರಂಭದಲ್ಲಿ ಹಾಡಿನ ಟೀಸರ್​ ಬಿಟ್ಟಾಗ ಕೆಲವರು ಅನುಮಾನ ವ್ಯಕ್ತಪಡಿಸಿದ್ದರು. ಹಾಡು ಬೇರೆ ರೀತಿ ಇದೆ ಅಂತ ಹೇಳಿದೆ. ನಾನು ಏನಾದರೂ ಹೇಳಿದರೆ ಅದನ್ನು ನಂಬುವಂತಹ ಜನರು ಇದ್ದಾರೆ. ಅವರಿಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದು ಜಗ್ಗೇಶ್​ ಹೇಳಿದ್ದಾರೆ. ಇನ್ನು ಎರಡು ಭಾಗಗಳಲ್ಲಿ 'ತೋತಾಪುರಿ' ಚಿತ್ರವು ತೆರೆಗೆ ಬರಲಿದ್ದು, ಚಿತ್ರದಲ್ಲಿ ಅದಿತಿ ಪ್ರಭುದೇವ, ಸುಮನ್‌ ರಂಗನಾಥ್‌, ಡಾಲಿ ಧನಂಜಯ್, ವೀಣಾ ಸುಂದರ್‌ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ. ಕೆ.ಎ. ಸುರೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more